Home / Uncategorized / ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

Spread the love

ನವದೆಹಲಿ, ಜನವರಿ 20: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರೀ ಆರ್ಥಿಕ ಹಾನಿ ಎದುರಿಸಿರುವ ಭಾರತದಲ್ಲಿ ಈ ಬಾರಿ ಕೇಂದ್ರ ಬಜೆಟ್‌ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಪ್ರತಿಯೊಂದು ಕ್ಷೇತ್ರವು ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊತ್ತು ಕಾಯುತ್ತಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದಿಂದ ಹೆಚ್ಚು ಬದಲಾದ ಕ್ಷೇತ್ರಗಳಲ್ಲಿ ಒಂದು ಶಿಕ್ಷಣ ಕ್ಷೇತ್ರ. ಇದೀಗ ಈ ಸಾಂಪ್ರದಾಯಿಕ ಕಲಿಕೆಯು ಡಿಜಿಟಲ್ ಕಲಿಕೆಯಾಗಿ ಬದಲಾಗಿದೆ. ಈ ಬದಲಾವಣೆಯು ವಿದ್ಯಾರ್ಥಿಗಳು, ಶಿಕ್ಷರಷ್ಟೇ ಅಲ್ಲದೆ ಶಿಕ್ಷಕರ ಮೇಲೂ ಪರಿಣಾಮ ಬೀರಿದೆ.

ಬಜೆಟ್‌ 2021: ಈ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಸಾಧ್ಯತೆ

ಸದ್ಯ ಆನ್‌ಲೈನ್ ಶಿಕ್ಷಣ ಹೆಚ್ಚು ಪ್ರಚಲಿತದಲ್ಲಿದ್ದು, ಕೋವಿಡ್-19 ಸಂದರ್ಭದಲ್ಲಿ ಎದುರಿಸಿದ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ಬಜೆಟ್‌ನಲ್ಲಿ ವಿವಿಧ ಆರ್ಥಿಕ ಹಂತಗಳ ಮೂಲಕ ಸುಧಾರಣೆಯ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ಮೂಲಗಳ ಮಾಹಿತಿಯ ಪ್ರಕಾರ, ಶೇಕಡಾ 50 ಕ್ಕಿಂತ ಹೆಚ್ಚು ಖಾಸಗಿ ಶಾಲೆಗಳು ಶುಲ್ಕ ವಿಧಿಸಿಲ್ಲ. ಇದು ಅವರ ವಾರ್ಷಿಕ ಆದಾಯದ 13 ರಿಂದ 80 ಪ್ರತಿಶತದಷ್ಟಿದೆ. ಅಂತಹ ಪರಿಸ್ಥಿತಿಯಲ್ಲಿ, ಶಿಕ್ಷಕರ ಸಂಬಳ ಮತ್ತು ಅಧ್ಯಯನಗಳಿಗೆ ತಾಂತ್ರಿಕ ಮೂಲಸೌಕರ್ಯಗಳ ಉನ್ನತೀಕರಣವು ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ, ಬಜೆಟ್‌ನಲ್ಲಿ ಪರಿಹಾರ ನಿಧಿ ಸ್ಥಾಪಿಸಲು ಸರ್ಕಾರ ಪರಿಗಣಿಸುವುದು ಅವಶ್ಯಕವಾಗಿದೆ.

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವನ್ನು ಸುಧಾರಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಗತ್ಯವಿದೆ. ಇದರಿಂದಾಗಿ ಅಧ್ಯಯನಗಳಲ್ಲಿನ ವ್ಯತ್ಯಾಸದ ಸಮಸ್ಯೆಯನ್ನು ಆದಷ್ಟು ಬೇಗ ತೆಗೆದುಹಾಕಬಹುದು. ಅಂತಹ ಪರಿಸ್ಥಿತಿಯಲ್ಲಿ ವಿವಿಧ ರಾಜ್ಯ ಸರ್ಕಾರಗಳು ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳ ಸಹಾಯವನ್ನು ಪಡೆಯಲು ಒಂದು ನಿಧಿಯನ್ನು ಸ್ಥಾಪಿಸಬಹುದು.

ಸುಮಾರು ಒಂದು ವರ್ಷ ಶಾಲೆ ಮುಚ್ಚಿದ ನಂತರ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಅಂತರವಿದೆ. ಶಾಲೆಗಳು ಈಗಾಗಲೇ ತಮ್ಮ ಮಟ್ಟದಲ್ಲಿ ಅಂತರವನ್ನು ತುಂಬುವ ಮಾರ್ಗಗಳನ್ನು ಪರಿಗಣಿಸುತ್ತಿವೆ. ಕೈಗೆಟುಕುವ ಖಾಸಗಿ ಶಾಲೆಗಳಿಗೆ ನಿಧಿ ಸಹಾಯ ಮಾಡುತ್ತದೆ, ಸರ್ಕಾರಿ ಶಾಲೆಗಳಲ್ಲೂ ಇದನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು.

ಆನ್‌ಲೈನ್ ಮತ್ತು ಆಫ್‌ಲೈನ್ ಅಧ್ಯಯನಗಳು ಮುಂದಿನ ದಿನಗಳಲ್ಲಿ ಮತ್ತೊಂದು ಹಂತಕ್ಕೆ ಸಾಗಲಿದೆ. ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಕೊರತೆಯು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರದಂತೆ ಸರ್ಕಾರವು ಕನಿಷ್ಠ ಡೇಟಾ ಸಂಪರ್ಕವನ್ನು ಶಾಲೆಗಳಿಗೆ ಒದಗಿಸಬೇಕಾಗಿದೆ.


Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ