”ಟಿಇಟಿ ತಪ್ಪಾಗಿ ಪ್ರಕಟವಾದ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆಗಳು”
ಸೊಲ್ಲಾಪುರದ ಮತ್ತೆ ಮಹಾನಗರದಲ್ಲಿ ಕನ್ನಡಿಗರಿಗೆ ಅವಮಾನ
1 ರಲ್ಲಿ 30 ಅಂಕ ಮತ್ತು ಪೇಪರ್ 2 ರಲ್ಲಿ 30 ಅಂಕ ಹೀಗೆ ಒಟ್ಟು 60 ಅಂಕಗಳ ಕನ್ನಡ ಭಾಷೆಯ ಪ್ರಶ್ನೆಗಳು ತಪ್ಪಾಗಿ ಪ್ರಕಟಗೊಂಡಿದ್ದು ರಿಂದ ಮರುಪರೀಕ್ಷೆ
ಹೌದು ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹುದ್ದೆಗಾಗಿ ರವಿವಾರ ನಡೆದ ಶಿಕ್ಷಕರ ಅಹ೯ತಾ ಪರೀಕ್ಷೆ (ಟಿಇಟಿ) ಯಲ್ಲಿ ಪೇಪರ್ 1ಯಲ್ಲಿ ಪೇಪರ್ 1 ರಲ್ಲಿ 30 ಅಂಕ ಮತ್ತು ಪೇಪರ್ 2 ರಲ್ಲಿ 30 ಅಂಕ ಹೀಗೆ ಒಟ್ಟು 60 ಅಂಕಗಳ ಕನ್ನಡ ಭಾಷೆಯ ಪ್ರಶ್ನೆಗಳು ತಪ್ಪಾಗಿ ಪ್ರಕಟಗೊಂಡಿದ್ದು ರಿಂದ ಮರುಪರೀಕ್ಷೆ ನಡೆಯಬೇಕೆಂದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ .
ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗಾಗಿ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ( ಟೀಚರ್ ಎಲಿಜಿಬಿಲಿಟಿ ಟೆಸ್ಟ್ ) ಮರಾಠಿ ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಿತ್ತು ಆದರೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಕಳೆದ ವರ್ಷಗಳಿಂದ ಕನ್ನಡ ವಿಷಯವನ್ನು ಮಾತ್ರ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಿದೆ ಉಳಿದ ವಿಷಯವನ್ನು ಮಾತ್ರ ಮರಾಠಿಯಲ್ಲಿ ಬರೆಯಬೇಕಾಗಿದೆ.
ಮಹಾರಾಷ್ಟ್ರದಲ್ಲಿ ಸರ್ಕಾರ ಹೊಟ್ಟೆಕಿಚ್ಚಿಗೆ ಮಾತ್ರ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗಾಗಿ ಪೇಪರ್ 1 ಪೇಪರ್ ರಲ್ಲಿ 30 ಅಂಕ ಮತ್ತು ಪೇಪರ್ ಎರಡರಲ್ಲಿ 30 ಅಂಕ ಒಟ್ಟು 60 ಅಂಕಗಳ ಭಾಷೆ ಪತ್ರಿಕೆಯನ್ನು ಹೊದಿಸಲಾಗಿದೆ ಕನ್ನಡ ಮಾದರಿಯಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ನೀಡಬೇಕು. ಮಹಾರಾಷ್ಟ್ರ ಸರ್ಕಾರದ ಶಿಕ್ಷಣ ಇಲಾಖೆ ನಿರ್ಲಕ್ಷದಿಂದ ಕನ್ನಡ ಮಾಧ್ಯಮಗಳಿಗೆ ಅನ್ಯಾಯವಾಗಿದೆ ಆದ್ದರಿಂದ ಇಲ್ಲಿಯ ಕನ್ನಡಿಗರು ನ್ಯಾಯಾಲಯದ ಮೊರೆ ಹೋಗುವುದು ಸಿದ್ಧರಾಗಿದ್ದಾರೆ ನ್ಯಾಯವ ದಗ ದಿದ್ದರೆ ಮುಂದಿನ ದಿನಗಳಲ್ಲಿ ಆದರ್ಶ ಕನ್ನಡ ಬೆಳಗು ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷರು ಮಲ್ಲಿಕ ಜಾನ್ ಸೇಕ್ ತಿಳಿಸಿದ್ದಾರೆ