ಯಮಕನಮರಡಿ: ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿರುವ ರೈತರ ಬಗ್ಗೆ ವ್ಯಯಕ್ತಿಕ ಕಾಳಜಿ ವಹಿಸಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಇಂದು ರೈತನೊಬ್ಬ ಬೆಳೆದ ಎರಡು ಎಕರೆ ತರಕಾರಿ ಖರೀದಿಸುವ ಮೂಲಕ ರೈತನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇಲ್ಲಿನ ಬುಡಕ್ಯಾನಟ್ಟಿ ಗ್ರಾಮದ ರೈತ ನಿಂಗಪ್ಪ ನಾಯಕ ಎರಡು ಎಕರೆ ಜಮೀನಿನಲ್ಲಿ ತರಕಾರಿ ಬೆಳೆದು ದಿಕ್ಕು ತೋಚದೆ ಕಂಗಾಲಾಗಿದ್ದನು. ಬಳಿಕ ಶಾಸಕರು ರೈತನಿಂದ ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಯಮಕನಮರಡಿ ಮತಕ್ಷೇತ್ರದ ಜನರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯ ಸಿದ್ದು ಸುಣಗಾರ, ನಾಗಪ್ಪಾ ನಾಯಿಕ ಸೇರಿ ಗಣ್ಯರು ಇದ್ದರು.