ಬೆಳಗಾವಿ: ಕಾಕತಿ ಗ್ರಾಮದ ಸರ್ಕಾರಿ ಮಾದರಿ ಮರಾಠಿ ಶಾಲೆಯಲ್ಲಿ ಬಡ ಕುಟುಂಬಗಳಿಗೆ ಹಿಂಡಲ್ಕೋ ಕಂಪನಿಗಳು ನೀಡುತ್ತಿರುವ 300ಕ್ಕೂ ಹೆಚ್ಚು ಆಹಾರ ಕಿಟ್ ಗಳನ್ನು ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಡವರಿಗೆ ನೀಡಿದರು.
ಕೊರೊನಾ ಮಾರಕ ಸೋಂಕಿನಿಂದ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಬಡವರ ನೆರವಿಗೆ ನಿಲ್ಲಬೇಕು. ಸಂಕಷ್ಟದಲ್ಲಿ ಇರುವ ಬಡವರಿಗೆ ತಮ್ಮಿಂದ ಆದ ಸಹಾಯವನ್ನು ಮಾಡಬೇಕು. ಜನರು ಸಹ ಲಾಕ್ ಡೌನ್ ನಿಯಮಗಳನ್ನು ಪಾಲಿಸಿಸುವ ಮೂಲಕ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಕಾಕತಿ ಗ್ರಾಮದ ಬಡವರಿಗೆ ಹಿಂಡಲ್ಕೋ ಕಂಪನಿಯವರು ತಮ್ಮಿಂದಾಗಿರುವ ಸಹಾಯ ಮಾಡುತ್ತಿದ್ದಾರೆ. ಇವರ ಸಹಾಯ ಮನೋಭಾವ ಶ್ಘಾಘನೀಯವಾದದ್ದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದು ಸುಣಗಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಕೊಳೇಕರ, ರವಿ ಬಿಸಿಗುಪ್ಪಿ, ನಾಗರಾಜ ಸಿಂಧೆ, ಪಿಡಿಒ ಅಶ್ವಿನಿ, ಅಡವೇಪ್ಪ ಹವಣ್ಣವರ, ಅನಿಲ ಪಾವಸೇ, ಪರಸಪ್ಪ ದುಂಡಿ, ಜ್ಯೋತಿ ಗವಿ ಸೇರಿದಂತೆ ಇತರರು ಇದ್ದರು.