Breaking News
Home / new delhi / ರಾಯಚೂರು ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಬಂದ ಈರುಳ್ಳಿ; ದರ ಕುಸಿತಕ್ಕೆ ಕಂಗಾಲಾದ ರೈತ

ರಾಯಚೂರು ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಬಂದ ಈರುಳ್ಳಿ; ದರ ಕುಸಿತಕ್ಕೆ ಕಂಗಾಲಾದ ರೈತ

Spread the love

ರಾಯಚೂರು : ರೈತನಿಗೆ ಒಂದಿಲ್ಲ ಒಂದು ಸಂಕಷ್ಟ ತಪ್ಪಿದ್ದಲ್ಲ, ಕಳೆದ ಬಾರಿ ದುಬಾರಿ ದರದಲ್ಲಿ ಮಾರಾಟವಾಗಿದ್ದ ಈರುಳ್ಳಿ ಈ ಬಾರಿ ಆರಂಭದಲ್ಲಿಯೇ ಪಾತಾಳಕ್ಕಿಳಿದಿದೆ. ಈರುಳ್ಳಿ ಬೆಳೆದ ರೈತ ಈಗ ದರ ಇಲ್ಲದೆ ಕಂಗಾಲಾಗಿದ್ದಾನೆ. ಒಂದು ಕಡೆ ಈರುಳ್ಳಿ ಇಟ್ಟುಕೊಳ್ಳಲು ಆಗದೆ ಮಾರಾಟ ಮಾಡಲು ಆಗದೆ ದಿಕ್ಕು ತೋಚದಂತಾಗಿದ್ದಾನೆ.

ಒಂದು ಕೊರೋನಾದಿಂದ ಉದ್ಯೋಗವಿಲ್ಲದೇ ಕೃಷಿಯತ್ತ ಮುಖ ಮಾಡಿದ ರೈತರ, ಕಷ್ಟ ಪಟ್ಟು ಈರುಳ್ಳಿಯನ್ನು ಬೆಳೆದು ಮಾರುಕಟ್ಟೆಗೆ ತಂದರೆ ಈರುಳ್ಳಿ ದರ ಪಾತಾಳಕ್ಕಿಳಿದಿದೆ. ಇದರಿಂದ ನಾವು ಎಣ್ಣೆ ಕುಡಿಯುವುದು ಒಂದು ಬಾಕಿ ಉಳಿದಿದಿ ನೋಡಿ ರೈತರು ಬೆಳೆದ ಈರುಳ್ಳಿ ಖರೀದಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಕಳೆದ ವರ್ಷ ರಾಯಚೂರು ಎಪಿಎಂಸಿಯಲ್ಲಿ ಈ ದಿನದಲ್ಲಿ ಈರುಳ್ಳಿ‌ ದರ ಗಗನಕ್ಕೇರಿತ್ತು, ಪ್ರತಿ ಕ್ವಿಂಟಾಲ್ ಗೆ 15 ಸಾವಿರ ರೂಪಾಯಿಯವರೆಗೂ ಮಾರಾಟವಾಗಿದ್ದ ಈರುಳ್ಳಿ ಈಗ ಪ್ರತಿ ಕ್ವಿಂಟಾಲ್ ಗೆ 300 ರಿಂದ 1 ಸಾವಿರ ರೂಪಾಯಿ ಮಾರಾಟವಾಗುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ 1261 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ.

ಈಗ ಈರುಳ್ಳಿ ಫಸಲು ಮಾರುಕಟ್ಟೆಗೆ ಬಂದಿದೆ. ಈ ಸಂದರ್ಭದಲ್ಲಿ ದರ ಇಳಿಕೆಯಾಗಿದ್ದರಿಂದ ರೈತ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಬರುವುದಿಲ್ಲ, ಮಾರುಕಟ್ಟೆಗೆ ತಂದ ವಾಹನ ಬಾಡಿಗೆಯೂ ಆಗುವುದಿಲ್ಲ, ರೈತರು ಸಂಕಷ್ಟದಲ್ಲಿದ್ದು, ಸರಕಾರ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಡಿಪಿ ಮಹಾ ಕುಸಿತಕ್ಕೆ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ; ಸಿದ್ದರಾಮಯ್ಯ

ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 1,73,919 ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು, ಪ್ರತಿ ಕ್ವಿಂಟಾಲ್ ಗೆ 1 ಸಾವಿರ ರೂಪಾಯಿ ದಿಂದ 15 ಸಾವಿರ ರೂಪಾಯಿ‌ ದರವಿತ್ತು, ಈಗ ಆಗಸ್ಟ ಮೊದಲು ವಾರದಿಂದ‌ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದು, ಇಲ್ಲಿಯವರೆಗೂ 18,675 ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಈಗ ದರ 350 ರೂಪಾಯಿ ದಿಂದ‌ 1 ಸಾವಿರ ರೂ ಒಳಗೆ ಇದೆ.
ದರ ಇಳಿಕೆಗೆ ಈ ಬಾರಿ ಇಳುವರಿ ಹೆಚ್ಚಳ ಹಾಗು ಅಧಿಕ ಮಳೆಯಾಗಿದ್ದರಿಂದ ಈರುಳ್ಳಿಯಲ್ಲಿ ತೇವಾಂಶ ಅಧಿಕವಾಗಿರುವುದೇ ಕಾರಣ ಎನ್ನಲಾಗಿದೆ. ಮಳೆ ಬಂದು, ಕಷ್ಟ ಪಟ್ಟು ದುಡಿದು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ರೈತ ಕಂಗಾಲಾಗಿರುವುದಕ್ಕೆ ಇದು ಸಾಕ್ಷಿಯಾಗಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ