ಹೆಸರಿಗೆ ಮಾತ್ರ ಉದ್ಯೋಗ ಖಾತ್ರಿ…
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಅಸಲಿ ಕಥೆ,
ಜನರಿಗೆ ಕೆಲಸ ಇಲ್ಲದೆ ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದಕ್ಕೆ ಕಾರಣ ಇಲ್ಲಿದೆ.
ರಾಮದುರ್ಗ:ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಅಂತ ಕಾರ್ಮಿಕರು ಹೋಗುತ್ತಾರೆ, ಅವರ ಹತ್ತಿರದಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ, ಅವರ ಕೆಲಸಕ್ಕೆ ಅಂತಾನೆ ಸರ್ಕಾರ ನೇರವಾಗಿ ಅವರವರ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತದೆ.
ಅದೇನು ಸರಿ ಬಿಡಿ ನೇರವಾಗಿ ಉದ್ಯೋಗ ಚೀಟಿದಾರರಿಗೆ ಹಣ ಜಮಾ ಮಾಡಬೇಕಾದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಲ್ಲೊಂದು ತಪ್ಪು ಮಾಡುತ್ತಿದೆ..
ಕೆಲಸ ಮುಗಿದ ನಂತರ ಇನ್ನೇನು ತಮ್ಮ ತಮ್ಮ ಖಾತೆಗಳಿಗೆ ಹಣ ಜಮಾ ಆಗಿಬಿಡುತ್ತದೆ ಎಂದು ನಿರೀಕ್ಷೆಯಲ್ಲಿರುವ ಜನರಿಗೆ ಅಧಿಕಾರಿಗಳ ಎಡವಟ್ಟು.
ಹೌದು ಕೂಲಿಕಾರ್ಮಿಕರಿಗೆ ಖಾತೆಗಳಿಗೆ ಕೆಲಸ ಮಾಡಿ ಮೂರು ನಾಲ್ಕು ತಿಂಗಳು ಕಳೆದರೂ ಹಣ ಜಮಾ ಆಗುವದಿಲ್ಲಾ ಇದಕ್ಕೆ ಕಾರಣ ಇಲ್ಲೊಬ್ಬ ಭ್ರಷ್ಟ ಇಂಜಿನಿಯರ್,
ಕೂಲಿ ಕಾರ್ಮಿಕರ ಖಾತೆಗೆ ಹಣ ಜಮಾ ಆಗಬೇಕಾದರೆ ಗ್ರಾಮ ಪಂಚಾಯಿತಿ PDO ಹಾಗೂ ಇಂಜಿನಿಯರ್ ಹಾಗೂ ಅಧ್ಯಕ್ಷರು ಸಹಿ ಆಗಬೇಕು, ಆದರೆ ಇಲ್ಲೊಬ್ಬ ಮಹಾಶಯ…
ದೇವರು ವರ ಕೊಟ್ಟರು ಪೂಜಾರಿ ವರ ಕೊಡೋದಿಲ್ಲ ಅಂತ ಗಾದೆ ಮಾತೇ ಇದೆ, ಇದು ಸತ್ಯ ಅನ್ನೋದಕ್ಕೆ ಇಲ್ಲಿನ ಇಂಜಿನಿಯರ್ ಸಾಕ್ಷಿ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮ ಪಂಚಾಯತಿಯಲ್ಲಿ ಸರಿಯಾಗಿ ಉದ್ಯೋಗ ಕೂಡ ಸಿಗುವುದಿಲ್ಲ,
ಅಂತದರಲ್ಲಿ ಅಷ್ಟು ಇಷ್ಟರಮಟ್ಟಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಾರೆ. ಪಂಚಾಯತಿಯಲ್ಲಿ NMR ಅಂದರೆ ಹಾಜರಿ ಕೂಡ ಹಾಕಿರುತ್ತಾರೆ, ಉದ್ಯೋಗದ ಅವಧಿ ಮುಗಿದು 3 – 4 ತಿಂಗಳು ಕಳೆದರು ಹಣ ಸಂದಾಯ ಮಾಡೋದಕ್ಕೆ ಒಪ್ಪದ ಇಲ್ಲಿನ ಇಂಜಿನಿಯರ್ ಪ್ರವೀಣ್ ಗೌಡರ್.
ಹೌದು ಪ್ರವೀಣ್ ಗೌಡರ್ ಇವನು ತಮಗೆ ಬೇಕಾದವರಿಗೆ ಮಾತ್ರ MiS ಮಾಡಿ ಪೇಮೆಂಟ್ ಮಾಡುತ್ತಾನೆ,
ಆದರೆ ಅವನಿಗೆ ಯಾರೂ ಹೊಂದಾಣಿಕೆ ಆಗುವುದಿಲ್ಲವೋ ಅಂತವರಿಗೆ ತಿಂಗಳುಗಟ್ಟಲೆ ಕಳೆದರೂ ಹಣ ಸಂದಾಯ ಮಾಡುವುದಿಲ್ಲ.ಇದಕ್ಕೆಲ್ಲ ಕಾರಣ ಈತನ ನೀಚ ಬುದ್ಧಿ.
ಕೆಲಸ ಮಾಡಿದ ಜನರು ತಾವು ದುಡಿಮೆಯ ಹಣ ಕೇಳಬೇಕಾದರೆ…
ಪ್ರವೀಣ್ ಗೌಡರ್ ಇತ್ ಸರಿಯಾಗಿ ಗ್ರಾಮ ಪಂಚಾಯಿತಿಗೆ ಬರುವದಿಲ್ಲಾ, ಈತನ ಮೊಬೈಲ್ ಯಾವಾಗಲೂ ಸ್ವಿಚ್ ಆಫ್ ಆಗಿರುತ್ತದೆ, ಕೇಳಲು ಹೋದರೆ ಮೊದಲು ವ್ಯವಹಾರ ಸರಿಮಾಡಿ ಇಲ್ಲಾಂದ್ರೆ ಯಾರ ಹತ್ತಿರ ಹೋಗುತ್ತೀರಾ ಹೋಗಿ ಅಂತ ಧೈರ್ಯದಿಂದ ಹೇಳುತ್ತಾನೆ.
ಇದಕ್ಕೆ ಸಂಬಂಧಪಟ್ಟ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕೇಳಿದಾಗ ನಾನು ಇಂಜಿನಿಯರಿಗೆ ಫೋನ್ ಮಾಡಿ ಹೇಳಿದ್ದೇನೆ ಹಣ ಜಮಾ ಮಾಡುತ್ತೇನೆ ಅಂತ ಹೇಳಿದ್ದಾರೆ ಅಂತಾ ಹೆಳಿದರು.
ಆದರೆ ಅವರ ಮಾತಿಗೂ ಕ್ಯಾರೆ ಮಾಡದೆ,
ಇವನು ಸರ್ಕಾರ ಕೊಡು ಸಂಬಳವನ್ನು ಪಡೆದು ಇಲ್ಲಿನ ಕೂಲಿ ಕಾರ್ಮಿಕರಿಗೆ ಕೂಲಿಕೂಡ ನೀಡುತ್ತಿಲ್ಲ,
ಕರೋನಾ ವೈರಸ್ ದಿಂದ ಭಾರತ ಲಾಕ್ ಡೌನ್ ಹಿನ್ನೆಲೆಯಿಂದ ಕೂಲಿ ಕಾರ್ಮಿಕರು ಹಿಂದಿನ ಕೆಲಸದ ಕೂಲಿ ಜಮಾ ಆಗದೇ ಇರುವುದರಿಂದ,
ಈಗ ಕೆಲಸಕ್ಕೆ ಹೊಗುದಕ್ಕೆ ಹೆದರುತ್ತಿರುವ ಜನರೂ…
ಕಷ್ಟದಲ್ಲಿ ಇರೋ ಜನರೂ ಯಾರ ಹತ್ತಿರ ಹೋದರೆ ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಇಲ್ಲಿನ ಜನರದ್ದಾಗಿದೆ.
ಇದಕ್ಕೆಲ್ಲ ಜಿಲ್ಲಾ ಪಂಚಾಯತ್ CEO ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾಯ್ದು ನೋಡಬೇಕಾಗಿದೆ.
video credits to vk5 tv