Breaking News

ಬೆಳಗಾವಿ ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ  ಮೋಡ ಕವಿದ ವಾತಾವರಣ ಚಳಿಯೊಂದಿಗೆ ಜಿಟಿ ಜಿಟಿ ಮಳೆ

ಬೆಳಗಾವಿ : ನಿವಾರ್ ಚಂಡಮಾರುತ ಪರಿಣಾಮದಿಂದ ಬೆಳಗಾವಿ ನಗರದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ  ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿತ್ತಿದೆ. ಬೆಳಗಾವಿಯಲ್ಲೂ ನಿವಾರ್​ ತನ್ನ ಪ್ರಭಾವ ಬೀರಿದ್ದು, ಹಲವೆಡೆ ಬೆಳಿಗ್ಗೆಯಿಂದಲೇ ತುಂತುರು ಮಳೆ ಆರಂಭವಾಗಿದೆ. ಮೊಡ ಮುಸುಕಿದ ವಾತಾವರಣ, ಕೊರಿಯುವ ಚಳಿಗೆ ಜನ ಹೈರಾಣಾಗಿದ್ದಾರೆ. ಜೊತೆಗೆ ತುಂತುರು ಮಳೆ ಸೇರಿ ಜನ ಮನೆಗಳಿಂದ ಹೊರ ಬರದಂತೆ ಮಾಡಿದೆ. ಮುಂಜಾನೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೂ  ಮೋಡ ಕವಿದ …

Read More »

ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.: ಈಶ್ವರಪ್ಪ

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರನ್ನು ನಂಬಿದವರಿಗೆ ಮಂತ್ರಿ ಸ್ಥಾನ ಕೊಡಿಸಲು ಲಾಭಿ ಮಾಡುವುದರಲ್ಲಿ ರಮೇಶ್ ಜಾರಕಿಹೊಳಿ ಅವರ ತಪ್ಪಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನಡೆಸಲು ಅವರು ಪ್ರಯತ್ನ ಮಾಡುವದರಲ್ಲಿ ತಪ್ಪಿಲ್ಲ, ಕೆಲವು ಶಾಸಕರು ಬಿಜೆಪಿಗೆ ಬಂದು ಸರ್ಕಾರ ರಚನೆಗೆ …

Read More »

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ: ಈಶ್ವರಪ್ಪ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಬೇಕಾದ್ರೆ ಶಂಕರಾಚಾರ್ಯ ಶಿಷ್ಯರಿಗೆ, ಚೆನ್ನಮ್ಮಳ ಶಿಷ್ಯ ಇಲ್ಲವೇ ರಾಯಣ್ಣನ ಶಿಷ್ಯರಿಗೆ ಟಿಕೆಟ್ ನೀಡುತ್ತೇವೆ. ಆದರೆ ಮುಸ್ಲಿಂ ಸಮಾಜಕ್ಕೆ ಬೆಳಗಾವಿಯಲ್ಲಿ ನಾವು ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದರು. ಕುರುಬ ಸಮಾಜದ ಯಾವೊಬ್ಬ ಸಂಸದ ಇಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸಿನವರು ಎμÉ್ಟೂೀ ಜನರಿಗೆ …

Read More »

ಬೆಳಗಾವಿ: ಕುರುಬ ಸಮುದಾಯದವರಿಗೆ ಟಿಕೆಟ್ ನೀಡಲು ಒತ್ತಾಯ

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 2ನೇ ಅತೀ ದೊಡ್ಡ ಮತದಾರರಾಗಿ ಕುರುಬ ಸಮುದಾಯದವರಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಲೋಕಸಭೆಯ ಟಿಕೆಟ್ ಕುರುಬ ಸಮುದಾಯದವರಿಗೆ ನೀಡಬೇಕು ಎಂದು ಕುರುಬ ಸಮುದಾಯದ ಮುಖಂಡ ರಾಜೇಂದ್ರ ಸಣ್ಣಕ್ಕಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ನಡೆದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಸಣ್ಣಕ್ಕಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಸಮಾಜದ ಎರಡೂವರೆ ಲಕ್ಷ ಮತದಾರರಿದ್ದಾರೆ. …

Read More »

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಭಾರತದ ಅರ್ಜುನ

ಮುಂಬೈ: ಹಿಂದಿಯ ಮಹಾಭಾರತ ಧಾರಾವಾಹಿಯ ಅರ್ಜುನ ಪಾತ್ರದ ಶಾಹೀರ್ ಶೇಖ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಶಾಹೀರ್ ಶೇಖ್ ಅವರು ನಿರ್ಮಾಪಕಿ ಏಕ್ತಾ ಕಪೂರ್ ಅವರ ಪ್ರೊಡಕ್ಷನ್ ಹೌಸ್‍ನಲ್ಲಿ ಕೆಲಸ ಮಾಡುವ ರುಚಿಕಾ ಕಪೂರ್ ಕೈ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಈ ಜೋಡಿ ವಿವಾಹವಾಗಿದ್ದು, ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. …

Read More »

ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಮಾನವೀಯತೆ ಮೆರೆದಿದ್ದಾರೆ.ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ರೇಣುಕಾಚಾರ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಗೊಲ್ಲರಹಳ್ಳಿ ಸಮೀಪ ಬೈಕ್ ಅಪಘಾತವಾಗಿತ್ತು. ಘಟನೆಯಲ್ಲಿ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಬಿದ್ದಿದ್ದನು. ಈ ವೇಳೆ ರೇಣುಕಾಚಾರ್ಯ ಅವರು ಅದೇ ದಾರಿಯಲ್ಲಿ ಕುಂದೂರು ಗ್ರಾಮಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಅಪಘಾತದ ಮಾಹಿತಿ ಅರಿತ ಶಾಸಕರು ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ …

Read More »

ಹೊಸ ಕಾರ ಬರ್ತಿದೆ ಇದು ಹಾರುತ್ತೆ ಮತ್ತೆ ಓಡುತ್ತೆ ರಸ್ತೆ ಮೇಲೆ..

ಆಂಸ್ಟರ್ಡ್ಯಾಮ್: ಗುಜರಾತಿನಲ್ಲಿ ಘಟಕ ತೆರೆದಿರುವ ನೆದರ್‌ಲ್ಯಾಂಡ್‌ನ ಪಾಲ್‌ -ವಿ ಕಂಪನಿಯ ಹಾರುವ ಕಾರು ಮುಂದಿನ ಎರಡು ವರ್ಷದಲ್ಲಿ ರಸ್ತೆಯಲ್ಲಿ ಇಳಿಯಲಿದೆ. ಈ ವರ್ಷದ ಫೆಬ್ರವರಿಯಿಂದ ವೇಗ, ಬ್ರೇಕ್‌, ಎಮಿಷನ್‌, ಶಬ್ಧಮಾಲಿನ್ಯ ಸೇರಿದಂತೆ ವಿವಿಧ ಡ್ರೈವಿಂಗ್‌ ಪರೀಕ್ಷೆಗಳನ್ನು ಕಾರು ಎದುರಿಸಿತ್ತು. ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮೈಕ್‌ ಸ್ಟೇಕಲನ್‌ಬರ್ಗ್‌ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆಗಳ ಜೊತೆ ಹಲವು ವರ್ಷಗಳ ಕಾಲ ಸಹಕಾರ ನೀಡಿ ನಾವು ಈ ಮೈಲಿಗಲ್ಲನ್ನು ಸೃಷ್ಟಿಸಿದ್ದೇವೆ. ನೆಲ ಮತ್ತು ಆಕಾಶದಲ್ಲಿ …

Read More »

ಕೌಟುಂಬಿಕವಾಗಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ:ಸಂತೋಷ್ ಅವರ ಪತ್ನಿ

ಬೆಂಗಳೂರು: ಕೌಟುಂಬಿಕವಾಗಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಪತ್ನಿ ಜಾಹ್ನವಿ ತಿಳಿಸಿದ್ದಾರೆ. ನಿನ್ನೆ ರಾತ್ರಿ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗಿನಿಂದಲೇ ಅವರು ಸ್ವಲ್ಪ ಬೇಜಾರಾಗಿದ್ದರು. ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸಂಜೆ ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೀನಿ ಅಂತ ಮನೆಯ …

Read More »

ಬಾಲಕಿಯೊಂದಿಗೆ ಮದುವೆ ಮಾಡಿಕೊಡಲು ಒಪ್ಪದಿರುವ ಹುಡುಗಿಯ ತಾಯಿ ಮೇಲೆ  ಮಾರಣಾಂತಿಕ  ಹಲ್ಲೆ

ಬೆಳಗಾವಿ : ಪ್ರೀತಿಸಿದ ಬಾಲಕಿಯೊಂದಿಗೆ ಮದುವೆ ಮಾಡಿಕೊಡಲು ಒಪ್ಪದಿರುವ ಹುಡುಗಿಯ ತಾಯಿ ಮೇಲೆ  ಮಾರಣಾಂತಿಕ  ಹಲ್ಲೆ ಮಾಡಿರುವ ಘಟನೆ ಖಾನಾಪುರದ ಗಾಂಧಿನಗರದಲ್ಲಿ ನಡೆದಿದೆ. ಸಂತೋಷ ರಾಮು ವಡ್ಡರ(22) ಹುಡುಗಿ ತಾಯಿಯ ಮೇಲೆ ಹಲ್ಲೆ ಮಾಡಿದ ಯುವಕ. ಹಲವು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದನು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಪ್ರೀತಿಯ ವಿಷಯ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಬಾಲಕಿಯ ಮನೆಯಲ್ಲಿ ವಿವಾಹಕ್ಕೆ ಒಪ್ಪಿರಲಿಲ್ಲ.  ಇದರಿಂದ ಯುವಕ ಮದುವೆಯಾಗುವುದಾಗಿ ಪದೇ ಪದೆ ತೊಂದರೆ  ನೀಡುತ್ತಿದ್ದನು. …

Read More »

ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ : ಟಿ.ಎಸ್.ನಾಗಾಭರಣ

ಬೆಂಗಳೂರು: ‘‘ಕರ್ನಾಟಕದ ಭೂಮಿ, ನೀರು, ಜಾಗ ಬಳಸಿಕೊಂಡು ಎತ್ತರಕ್ಕೆ ಬೆಳೆದಿರುವ ಭಾರತೀಯ ವಿಜ್ಞಾನ ಸಂಸ್ಥೆ, ನೇಮಕಾತಿ ವಿಷಯದಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಕನ್ನಡ ಅನುಷ್ಠಾನದ ವಿಷಯದಲ್ಲಿ ಕೇವಲ ಕಣ್ಣೋರೆಸುವ ತಂತ್ರದಂತೆ ಬಳಕೆಯಾಗುತ್ತಿದ್ದು, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿದ್ದೀರಿ. ಪರಿಣಾಮ ನೆಟ್ಟಗಿರಲ್ಲ’’ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ವಿರುದ್ಧ ಗುಡುಗಿದ ಪರಿ ಇದು. # ನೂರಾರು ಎಕರೆ ಭೂಮಿ: ವಿಧಾನಸೌಧದಲ್ಲಿಂದು ಕನ್ನಡ ಅನುಷ್ಠಾನ ಪ್ರಗತಿ …

Read More »