ಯುಪಿಎಸ್ಸಿ: ಹುಬ್ಬಳ್ಳಿಯ ಕೃಪಾ ಜೈನ್‌ಗೆ 440ನೇ ರ‍್ಯಾಂಕ್‌

ಹುಬ್ಬಳ್ಳಿ: ಯುಪಿಎಸ್ಸಿಯಲ್ಲಿ 440ನೇ ರ‍್ಯಾಂಕ್‌ ಪಡೆಯುವ ಮೂಲಕ ಇಲ್ಲಿನ ರಾಜನಗರದ ನಿವಾಸಿ ಕೃಪಾ ಜೈನ್  ಜಿಲ್ಲೆಗೆ ಹೆಸರು ತಂದಿದ್ದಾರೆ.  ಇವರ ತಂದೆ ಅಭಯ ಪಾರ್ಲೆಚಾ ಇಲ್ಲಿನ ಎಪಿಎಂಸಿಯಲ್ಲಿ ದಿನಸಿ ಹೋಲ್‌ಸೇಲ್‌ ವ್ಯಾಪಾರಸ್ಥರಾಗಿದ್ದಾರೆ. ತಾಯಿ ಇಂದಿರಾ ಗೃಹಿಣಿ. ಮೂಲತಃ ಹೊಸಪೇಟೆಯವರು. ಬಹಳ ವರ್ಷಗಳ ಹಿಂದೆಯೇ  ಹುಬ್ಬಳ್ಳಿಗೆ ಬಂದು ನೆಲೆಯೂರಿದ್ದಾರೆ. ಕೃಪಾ ಜೈನ್‌ ಹುಬ್ಬಳ್ಳಿಯಲ್ಲಿಯೇ ಜನಿಸಿದ್ದಾರೆ. ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು  ಡಿ.ಕೆ. ಪಬ್ಲಿಕ್‌ ಸ್ಕೂಲ್‌ನಲ್ಲಿ ಪೂರೈಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ 2016ರಲ್ಲಿ ಪಿಯುಸಿ …

Read More »

ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

ಚನ್ನಮ್ಮನ ಕಿತ್ತೂರು: ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ತಡೆರಹಿತ ರಾಜಹಂಸ ಬಸ್ ತಾಲ್ಲೂಕಿನ ತಿಮ್ಮಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು 10 ಪ್ರಯಾಣಿಕರಿಗೆ ಗಾಯಗಳಾಗಿವೆ. ಹೆದ್ದಾರಿ ಬದಿಗಿರುವ ಕಬ್ಬಿಣದ ತಡೆ ಸರಳುಗಳನ್ನು ಕಿತ್ತುಕೊಂಡು ಸರ್ವೀಸ್ ರಸ್ತೆಗೆ ಬಂದು ಬಸ್ ಬಿದ್ದಿದೆ. ಭಾರಿ ಸಪ್ಪಳವಾಗಿದ್ದರಿಂದ ತಿಮ್ಮಾಪುರ ಗ್ರಾಮಸ್ಥರು ಧಾವಿಸಿ ಬಂದು ವಾಹನದಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ನೆರವಾದರು. ಗಾಯಾಳುಗಳನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. …

Read More »

ನಿಪ್ಪಾಣಿ | ಸಿಇಟಿ ಪರೀಕ್ಷೆ: ಉಚಿತ ಬಸ್‍ಗಳ ವ್ಯವಸ್ಥೆ

ನಿಪ್ಪಾಣಿ: ಏ.18 ಹಾಗೂ 19ರಂದು ಜರುಗಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ(ವಿಎಸ್‍ಎಂಎಸ್‍ಆರ್‌ಕೆಐಟಿ)ದಿಂದ ಬಸ್‍ಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉಮೇಶ ಪಾಟೀಲ ತಿಳಿಸಿದ್ದಾರೆ. ತಾಂತ್ರಿಕ ಮಹಾವಿದ್ಯಾಲಯ (ಪರೀಕ್ಞಾ ಕೇಂದ್ರ ಸಂಖ್ಯೆ – 315)ದಲ್ಲಿ ವಿದ್ಯಾರ್ಥಿಗಳ ಹಾಗೂ ಪಾಲಕರ ಅನುಕೂಲಕ್ಕಾಗಿ ಬಸ್‍ಗಳನ್ನು ಉಚಿತವಾಗಿ ಬಿಡಲಾಗುವುದು. ಪರೀಕ್ಷೆಗಳು ನಡೆಯಲಿರುವ ಎರಡೂ ದಿನ ಬೆಳಿಗ್ಗೆ 8.30 ರಿಂದ 9.30ರ ವರೆಗೆ ಸ್ಥಳೀಯ ಬಸ್ …

Read More »

ಚಿಕ್ಕೋಡಿ ಲೋಕಸಭಾ ಕ್ಷೇತ್ರ | ತಿಂಗಳಲ್ಲಿ 79 ಪ್ರಕರಣ:₹1.17 ಕೋಟಿ ವಶ

ಚಿಕ್ಕೋಡಿ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್‌ 16ರಿಂದ ಏಪ್ರಿಲ್ 16ರವರೆಗೆ ₹1.17 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ತಿಳಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು ₹ 1.17 ನಗದು, ₹ 7.05 ಲಕ್ಷ ಮೌಲ್ಯದ 1948.151 ಲೀಟರ್‌ ಮದ್ಯ, ₹ 2.21 ಲಕ್ಷ ಮೌಲ್ಯದ 8.813 ಕೆ.ಜಿ. ಮಾದಕ, ಅಮಲು ಪದಾರ್ಥಗಳು ಹಾಗೂ ₹ 9.88 …

Read More »

ನಮ್ಮದು ಮೊಘಲ್ ಸರ್ಕಾರವಲ್ಲ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಚಾಟಿ

ಬೆಂಗಳೂರು: ‘ನಮ್ಮದು ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಡಳಿತ ವ್ಯವಸ್ಥೆ ಎಂಬುದನ್ನು ಮರೆಯಬೇಡಿ. ಇದು ಮೊಘಲರ ಸರ್ಕಾರವಲ್ಲ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಚಾಟಿ ಬೀಸಿದೆ. ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಮುಚ್ಚುವಂತೆ ನೀಡಲಾಗಿದ್ದ ನೋಟಿಸ್‌ ರದ್ದುಪಡಿಸುವಂತೆ ಕೋರಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ.ಪಾಟೀಲ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ …

Read More »

ತೀಯ ಪಿಯುಸಿ ಪರೀಕ್ಷೆ-2’ಕ್ಕೆ ನೋಂದಾಯಿಸಿ ಕೊಳ್ಳಲು ದಿನಾಂಕ ವಿಸ್ತರಣೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕೆಲ ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿರುವಸ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅದರಲ್ಲಿ 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿದ್ದ ದಿನಾಂಕವನ್ನು …

Read More »

ತೆರಿಗೆದಾರರ’ ಮೇಲಿನ ಹೊರೆ ಕಡಿಮೆ ಮಾಡಬೇಕು: ಪ್ರಧಾನಿ ಮೋದಿ

ನವದೆಹಲಿ: ದೇಶದ ತೆರಿಗೆದಾರರ ಕೊಡುಗೆಯನ್ನು ಆಚರಿಸಬೇಕು ಮತ್ತು ಗೌರವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, “ಮಧ್ಯಮ ವರ್ಗದ ತೆರಿಗೆದಾರರಿಗೆ ಸಂಬಂಧಿಸಿದಂತೆ ಅವರನ್ನು ಆಚರಿಸಬೇಕು ಮತ್ತು ಗೌರವಿಸಬೇಕು.ನಾವು ತೆರಿಗೆದಾರರನ್ನು ಹಗಲು ರಾತ್ರಿ ನಿಂದಿಸಿದರೆ ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ?” ಎಂದು ಕೇಳಿದರು. ದಕ್ಷ ಮತ್ತು ಪಾರದರ್ಶಕ ತೆರಿಗೆ ಸಂಗ್ರಹ ವ್ಯವಸ್ಥೆಯ ಬಗ್ಗೆ ಮಾತನಾಡಿದ ಪಿಎಂ ಮೋದಿ, ತಮ್ಮ ಸರ್ಕಾರದ ಅಡಿಯಲ್ಲಿ …

Read More »

ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಕೇಸ್ : ಇಬ್ಬರು ಶೂಟರ್ ಗಳು ಅರೆಸ್ಟ್

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರಿಗೆ ಉತ್ತಮ ಯಶಸ್ಸು ಸಿಕ್ಕಿದೆ. ಇಬ್ಬರೂ ಶೂಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಅಪರಾಧ ವಿಭಾಗವು ಇಬ್ಬರೂ ಆರೋಪಿಗಳನ್ನು ಬಂಧಿಸಿದೆ. ಸಲ್ಮಾನ್ ಖಾನ್ ಅವರ ಮನೆಯಲ್ಲಿ ಗುಂಡಿನ ದಾಳಿ ನಡೆದಾಗಿನಿಂದ ಪೊಲೀಸರು ಆರೋಪಿಗಳನ್ನು ನಿರಂತರವಾಗಿ ಹುಡುಕುತ್ತಿದ್ದರು.ಸೋಮವಾರ ತಡರಾತ್ರಿ ಇಬ್ಬರು ಆರೋಪಿಗಳನ್ನು ಗುಜರಾತ್ನ ಭುಜ್ನಿಂದ ಬಂಧಿಸಲಾಗಿದೆ. .     ಆರೋಪಿಗಳಲ್ಲಿ …

Read More »

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: 3 ಚಾಕು, 40 ಸಾವಿರ ನಗದು ಜಪ್ತಿ

ಬೆಂಗಳೂರು: ಮನಪರಿವರ್ತನಾ ಕೇಂದ್ರವಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಪರಪ್ಪನ ಅಗ್ರಹಾರ ಜೈಲಿನಿಂದಲೇ ಉಗ್ರ ಚಟುವಟಿಕೆ, ಕೊಲೆಗೆ ಸುಪಾರಿ ಸೇರಿ ವಿವಿಧ ಅಕ್ರಮ ಚುಟವಟಿಕೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಮತದಾರರ ಮೇಲೆ ಪ್ರಭಾವ ಬೀರಲು ಸಂಚು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಸುಮಾರು 50ಕ್ಕೂ …

Read More »

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

ಬೆಂಗಳೂರು: ಮೈಸೂರು, ಮಂಗಳೂರಿನಲ್ಲಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲೂ “ನಮೋ’ ಹವಾ ಸೃಷ್ಟಿಗೆ ಬಿಜೆಪಿ ಮುಂದಾಗಿದೆ. ಎ. 20ರಂದು ಪ್ರಧಾನಿ ಮೋದಿ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.   ಜತೆಗೆ ಚಿಕ್ಕಬಳ್ಳಾಪುರ ಅಥವಾ ತುಮಕೂರಿನಲ್ಲಿ ರೋಡ್‌ ಶೋ ವನ್ನೂ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Read More »