Breaking News

ಬೆಳಗಾವಿ ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಬೆಳಗಾವಿ: ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಕೊಠಡಿ ಸಂಖ್ಯೆ 354ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (BUDA) ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ವಿವಿಧ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, …

Read More »

ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳಿಗೆ ಬಿತ್ತು ದಂಡ

ಬೆಳಗಾವಿ: ಕರ್ನಾಟಕ ಮಾಹಿತಿ ಆಯೋಗ ಪೀಠದಲ್ಲಿ ಜುಲೈ 28 ರಂದು ಮೇಲ್ಮನವಿಗಳ ವಿಚಾರಣೆ ನಡೆಸಿ ಅರ್ಜಿದಾರರಿಗೆ ಸಕಾಲದಲ್ಲಿ ಮಾಹಿತಿ ನೀಡದೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘಿಸಿದ್ದರಿಂದ ಸಾರ್ವಜನಿಕ ಮಾಹಿತಿ ಅಧಿಕಾರಿ. ಪುರಸಭೆ ಸಿಂದಗಿ, ಹುಬ್ಬಳ್ಳಿ ತಾಲೂಕು ತಹಶೀಲ್ದಾರ್ ಮತ್ತು ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ರವರಿಗೆ ತಲಾ ರೂ.10,000 ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಿಲಾಗಿದೆ. ಮೇಲ್ಮನವಿದಾರರು ಅನುಭವಿಸಿದ ಕಷ್ಟ ಮತ್ತು ಇತರೆ ವೆಚ್ಚಗಳಿಗಾಗಿ 5,000 ರೂ. …

Read More »

ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಮ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ

ಬೆಳಗಾವಿ: ಜೊಲ್ಲೆ ಗ್ರೂಪ್‌ನ ಶಿವಶಂಕರ ಜೊಲ್ಲೆ ಇಂಗ್ಲಿಷ್ ಮೀಡಿಯಮ್ ಪಬ್ಲಿಕ್ ಶಾಲೆ, (ಸಿ.ಬಿ.ಎಸ್.ಇ)  ನಣದಿ ಕ್ಯಾಂಪಸ್‌ನಲ್ಲಿ  ಸನ್ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪದ ಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜೊಲ್ಲೆ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ  ನಿಪ್ಪಾಣಿಯ ಶಾಸಕರಾದ ಶಶಿಕಲಾ ಜೊಲ್ಲೆ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಆಶಾ ಜ್ಯೋತಿ ವಿಶೇಷ ಮಕ್ಕಳ ವಸತಿಯುತ ಶಾಲೆಯ ಆಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ ಅವರು …

Read More »

30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್‌ನ ಜೀವನದಿ ಮಾಂಜ್ರಾ ಭಾಗಶಃ ಖಾಲಿ‌

ಬೀದರ್: 30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್ (Bidar) ಜಿಲ್ಲೆಯ ಜೀವನದಿ ಮಾಂಜ್ರಾ ನದಿ  ಎರಡು ತಿಂಗಳಿನಿಂದ ಮಳೆ ಇಲ್ಲದೆ ಖಾಲಿಯಾಗಿದೆ. ಭೀಕರ ಬರಗಾಲಕ್ಕೆ ಜೀವನದಿ ಮಾಂಜ್ರಾ ಬಹುತೇಕ 95% ಖಾಲಿಯಾಗಿದ್ದು ರೈತರು, ಜನ, ಜಾನುವಾರು, ಪಕ್ಷಿಗಳಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಜಿಲ್ಲೆಯ ಎಲ್ಲಾ ಜಲ ಮೂಲಗಳು ಬತ್ತಿದ್ದರೂ ಮಾಂಜ್ರಾ ನದಿಯ ಜಲ ಮಾತ್ರ ಬತ್ತದೆ ಜಿಲ್ಲೆಯ ಹೂಲಸೂರು, ಭಾಲ್ಕಿ, ಔರಾದ್ ಮತ್ತು ಬೀದರ್ ತಾಲೂಕು ಸೇರಿದಂತೆ …

Read More »

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ತೆರಳುವಾಗ ಕಾರು ಅಪಘಾತ – BSNL ನಿವೃತ್ತ ನೌಕರ ದುರ್ಮರಣ

ಶಿವಮೊಗ್ಗ: ತಾಲೂಕಿನ  ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ  ದಾವಣಗೆರೆ  ಮೂಲದ ಬಿಎಸ್ಎನ್‌ಎಲ್‌ ನಿವೃತ್ತ ನೌಕರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ದಾವಣಗೆರೆ ನಿವಾಸಿ ಸುರೇಶ್ (65) ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಅವರು ತಮ್ಮ ಮಗನೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರುತಿ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆಗೆ ಮರಳುತ್ತಿದ್ದರು. ಕಾರನ್ನು ಅವರ ಪುತ್ರ ಅಮೃತ್‌ (36) ಚಾಲನೆ ಮಾಡುತ್ತಿದ್ದರು ಎಂದು …

Read More »

ಕೆಪಿಎಸ್‌ಸಿ ನಲ್ಲಿ ಹುದ್ದೆಗಾಗಿ ಡೀಲಿಂಗ್‌ ಪ್ರಕರಣ – 3 FIR ದಾಖಲು, 2 ಕೇಸ್‌ ಸಿಐಡಿಗೆ ವರ್ಗ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ ದಲ್ಲಿ ಹುದ್ದೆಗಾಗಿ ನಡೆದಿದೆ ಎನ್ನಲಾದ ಡೀಲಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್  ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಅವರು, ಕೆಪಿಎಸ್‌ಸಿ ಯಲ್ಲಿ ಹುದ್ದೆಗಾಗಿ ನಡೆದಿದೆ ಎನ್ನಲಾದ ಡೀಲಿಂಗ್ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ ದಾಖಲಾಗಿದೆ. ಈ ಪೈಕಿ 2 ಎಫ್‌ಐಆರ್‌ಗಳನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ …

Read More »

ಮದ್ವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದಿದ್ದ ಪ್ರೇಯಸಿ – ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ರಸ್ತೆಯಲ್ಲಿ ಎಳೆದೊಯ್ದ ಪ್ರಿಯಕರ

ಪಾಟ್ನಾ: ಮದುವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದು ನಿಂತಿದ್ದ ಪ್ರೇಯಸಿಯನ್ನು ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ಪ್ರಿಯಕರ ರಸ್ತೆಯಲ್ಲೇ ಎಳೆದಾಡಿದ ಘಟನೆ ಬಿಹಾರದ ನಳಂದ ಜಿಲ್ಲೆಯ ರಾಜಗಿರ್‌ನಲ್ಲಿ ನಡೆದಿದೆ. ಈ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಬೈಕ್ ಸವಾರ ಸರ್ಕಾರಿ ಉದ್ಯೋಗಿಯಾಗಿದ್ದು, ಯುವತಿ ಆತನ ಪ್ರೇಯಸಿ ಎನ್ನಲಾಗಿದೆ. ಇಬ್ಬರೂ ಕಳೆದ ಕೆಲವು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಆದರೆ, ಕುಟುಂಬಸ್ಥರ ವಿರೋಧದಿಂದಾಗಿ ಪ್ರೇಯಸಿಯನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದ. ಇದೇ ವಿಷಯವಾಗಿ ಇಬ್ಬರು …

Read More »

ಹೈದ್ರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ – ನಗರದ 2 ಕಡೆ ಇಡಿ ದಾಳಿ

ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಮಾರಾಟ ಕೇಸ್‌ಗೆ ಸಂಬಂಧಿಸಿದಂತೆ ನಗರದ  ಎರಡು ಕಡೆ ಇಡಿ ಅಧಿಕಾರಿಗಳು (ಜಾರಿ ನಿದೇಶನಾಲಯ)  ದಾಳಿ ನಡೆಸಿದ್ದಾರೆ. ಹೈದ್ರಾಬಾದ್ ಎನ್‌ಡಿಪಿಎಸ್ ಕೇಸ್‌ನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹೈದ್ರಾಬಾದ್‌ನಲ್ಲಿ 7 ಕಡೆ ದಾಳಿ ನಡೆಸಲಾಗಿದೆ. ಇತ್ತೀಚೆಗೆ ಹೈದ್ರಾಬಾದ್ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು.  ಇತ್ತೀಚೆಗೆ ಥೈಲ್ಯಾಂಡ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ವ್ಯಾಕ್ಯೂಮ್-ಸೀಲ್ಡ್ ಪ್ಯಾಕೇಜ್‌ಗಳಲ್ಲಿ ಭಾರತಕ್ಕೆ ಅಕ್ರಮವಾಗಿ …

Read More »

ಕಾಲುವೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ – ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಇಂಗಳದಾಳದಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ನೀರು ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿಯಾಗಿದೆ. ಕಾಲುವೆಯಲ್ಲಿ ಹೂಳು ತುಂಬಿ, ಗಿಡಗಂಟೆ ಬೆಳೆದ ಹಿನ್ನೆಲೆ ಜಮೀನುಗಳಿಗೆ ನೀರು ನುಗ್ಗಿದೆ. ಅಲ್ಲದೇ ಕಾಲುವೆಗೆ ನೀರು ಹರಿಸುವ ಮುನ್ನ ಜಂಗಲ್ ಕಟ್ ಮಾಡದ ಹಿನ್ನೆಲೆ ಅನಾಹುತ ನಡೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹತ್ತಿ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ 17ನೇ ಉಪಕಾಲುವೆಯಲ್ಲಿ ಗಿಡ …

Read More »

ಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಸೈಕೋ ಪತಿ

ಬಾಗಲಕೋಟೆ: ವ್ಯಕ್ತಿಯೊಬ್ಬ ಪತ್ನಿಗೆ  ನೇಣು ಹಾಕಿ ಆಕೆ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಅಮಾನವೀಯ ಘಟನೆ ಬೀಳಗಿ  ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ ಜಿಗಳೂರು (23) ಕೊಲೆಯಾದ ಮಹಿಳೆ. ಆಕೆಯ ಪತಿ  ಪ್ರವೀಣ್ ಜಿಗಳೂರು ಹತ್ಯೆಗೈದ ಆರೋಪಿ. ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನದ ಮೇಲೆ ಕಟ್ಟಿಗೆಯಿಂದ ಹಲ್ಲೆಗೈದು ಆಕೆಗೆ ನೇಣು ಬಿಗಿದಿದ್ದ. ಬಳಿಕ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ – ಮಾವನಿಗೆ …

Read More »