Home / ಅಂತರಾಷ್ಟ್ರೀಯ / ATM ನಿಂದ ದೋಚಿದ ಹಣ.. ಬ್ಯಾಂಕ್‌​ನಲ್ಲಿ ಡೆಪಾಸಿಟ್​ -ಇದು ಕಿಲಾಡಿ ಖದೀಮರ ಇಂಟರೆಸ್ಟಿಂಗ್ ಕಹಾನಿ

ATM ನಿಂದ ದೋಚಿದ ಹಣ.. ಬ್ಯಾಂಕ್‌​ನಲ್ಲಿ ಡೆಪಾಸಿಟ್​ -ಇದು ಕಿಲಾಡಿ ಖದೀಮರ ಇಂಟರೆಸ್ಟಿಂಗ್ ಕಹಾನಿ

Spread the love

ಮೈಸೂರು: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡಿ ಬಂದ ಹಣವನ್ನು ಬೇರೆ ಬೇರೆ ಕಾರಣಗಳಿಗೆ ಖರ್ಚು ಮಾಡುವುದನ್ನು ನೋಡಿರುತ್ತೇವೆ.‌ ಆದ್ರೆ ಅಂತರರಾಜ್ಯ ಕಳ್ಳರ ಖತರ್​ನಾಕ್ ಗ್ಯಾಂಗ್​ ಒಂದು ATMನಲ್ಲಿ ಲೂಟಿ ಮಾಡಿದ ಹಣವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿರುವ ಸ್ವಾರಸ್ಯಕರ ಪ್ರಸಂಗ ನಗರದಲ್ಲಿ ನಡೆದಿದೆ. ಅಂದ ಹಾಗೆ, ಈ ದರೋಡೆಕೋರರು ಈಗ ಕಂಬಿ ಎಣಿಸುತ್ತಿದ್ದಾರೆ.

  

ಇದು ನಂಬಲು ಸ್ವಲ್ಪ ಕಷ್ಟವಾದರೂ ರಿಯಲ್​ ಸ್ಟೋರಿ.

ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಹೂಟಗಳ್ಳಿ ಕೈಗಾರಿಕಾ ಬಡಾವಣೆಯ HDFC ATMನಲ್ಲಿ ಕಳ್ಳತನ‌ದ ಪ್ರಕರಣ ವರದಿಯಾಗಿತ್ತು. ಖದೀಮರ ಗ್ಯಾಂಗ್​ ಒಂದು ಗ್ಯಾಸ್ ಕಟರ್ ಬಳಸಿ ATM ಮೆಷೀನ್​ ಕಟ್ ಮಾಡಿ ಅದರಲ್ಲಿದ್ದ ಬರೋಬ್ಬರಿ 12.81 ಲಕ್ಷ ರೂಪಾಯಿಯನ್ನ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ATM ದೋಚಿ ಪರಾರಿಯಾದವರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ರು. ವಿಜಯನಗರ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಯ್ತು. ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ ಪೊಲೀಸರಿಗೆ ಪ್ರಕರಣದಲ್ಲಿ ಹೊರ ರಾಜ್ಯದವರ ಕೈವಾಡವಿರುವ ಬಗ್ಗೆ ಸಂಶಯ ಹುಟ್ಟಿತು. ತಮಗೆ ಸಿಕ್ಕ ಈ ಸುಳಿವಿನ ಬೆನ್ನತ್ತಿದ ಪೊಲೀಸರು ಸೀದಾ ತಲುಪಿದ್ದು ದೂರದ ಹರಿಯಾಣಗೆ. ಈ ಹಿಂದೆ, ಇಂಥ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಬಹುತೇಕರು ಆ ರಾಜ್ಯದಲ್ಲಿ ಖಾಕಿಗೆ ಸಿಕ್ಕಿಬಿದ್ದಿದರು. ಹಾಗಾಗಿ, ಸ್ಥಳೀಯ ಪೊಲೀಸರ ಸಹಾಯ ಪಡೆದ ಮೈಸೂರು ಪೊಲೀಸರು ಅನೀಸ್ ಮತ್ತು ಬರ್ಖಥ್​ ಎಂಬ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಬಂಧಿತರಿಂದ 2.5 ಲಕ್ಷ ನಗದು ಸಹ ವಶಕ್ಕೆ ಪಡೆಯಲಾಗಿದೆ. ಜೊತೆಗೆ, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಪೈಪ್ ಹಾಗೂ ಕಬ್ಬಿಣದ ಹಾರೆಯನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಸ್ವಾರಸ್ಯಕರ ಸಂಗತಿಯೆಂದರೇ ಖದೀಮರು ದೋಚಿದ್ದ ಹಣದಲ್ಲಿ 1 ಲಕ್ಷವನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿದ್ದರಂತೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಳ್ಳತನದ ಉಳಿದ ಹಣ ಅವರ ಬಳಿಯಿದೆ ಎಂಬ ಮಾಹಿತಿ ಸಹ ಸಿಕ್ಕಿದೆ. ಒಟ್ಟಾರೆ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ದಾಸರ ವಾಣಿಯಂತೆ ATM ನಲ್ಲಿ ದೋಚಿದ ಹಣವನ್ನು ಕಳ್ಳರು ಬ್ಯಾಂಕ್‌ನಲ್ಲಿ ಇಟ್ಟಿದ್ದು ನಿಜಕ್ಕೂ ಇಂಟರೆಸ್ಟಿಂಗ್​ -ರಾಮ್


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ