Breaking News
Home / Madikeri / ಕೇವಲ 3,000 ರೂಪಾಯಿಗೆ ಖರೀದಿಸಿ ನಥಿಂಗ್ ಫೋನ್ 1! ಫ್ಲಿಪ್‌ಕಾರ್ಟ್​ ನೀಡುತ್ತಿದೆ ಭರ್ಜರಿ ರಿಯಾಯಿತಿ

ಕೇವಲ 3,000 ರೂಪಾಯಿಗೆ ಖರೀದಿಸಿ ನಥಿಂಗ್ ಫೋನ್ 1! ಫ್ಲಿಪ್‌ಕಾರ್ಟ್​ ನೀಡುತ್ತಿದೆ ಭರ್ಜರಿ ರಿಯಾಯಿತಿ

Spread the love

 

ಫ್ಲಿಪ್‌ಕಾರ್ಟ್ ಸದ್ಯ ಬಿಗ್ ಬಚತ್ ಧಮಾಲ್​ ಸೇಲ್​​ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಬಳಕೆದಾರರು ನಥಿಂಗ್ ಫೋನ್1 ಕೇವಲ 3,124 ರೂ.ಗೆ ಖರೀದಿಸಬಹುದಾಗಿದೆ.

ನಥಿಂಗ್ ಫೋನ್1 (Nothing Phone 1) 2022ರಲ್ಲಿ ಬಿಡುಗಡೆಯಾದ ಬಹು ನಿರೀಕ್ಷಿತ ಫೋನ್​ಗಳಲ್ಲಿ ಒಂದು. ಮಾರುಕಟ್ಟೆ ಈ ಫೋನ್​ ಯಾವಾಗ ಲಗ್ಗೆಯಿಟ್ಟಿತೊ ಆವಾಗ ಜನರು ಇದಕ್ಕೆ ಮಾರು ಹೋಗಿದ್ದಾರೆ. ನಥಿಂಗ್ ಫೋನ್ 1 ತನ್ನ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳಿಂದ ಟಾಪ್​ ಫೋನ್​ಗಳಲ್ಲಿ ಒಂದಾಗಿದೆ. ಸದ್ಯ ಬಳಕೆದಾರರು ಈ ನಥಿಂಗ್ ಫೋನ್ 1ನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಅದು ಹೇಗಂದ್ರೆ ಫ್ಲಿಪ್‌ಕಾರ್ಟ್ (Flipkart) ಸದ್ಯ ಬಿಗ್ ಬಚತ್ ಧಮಾಲ್​ ಸೇಲ್​​ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಬಳಕೆದಾರರು ಸ್ಮಾರ್ಟ್‌ಫೋನ್​ನ್ನು 3,124 ರೂ.ಗೆ ಖರೀದಿಸಬಹುದಾಗಿದೆ. ಈ ನಥಿಂಗ್ ಫೋನ್ 1ನ ಆರಂಭಿಕ ಬೆಲೆಯನ್ನು 32,999 ರೂ. ಎಂದು ನಿಗದಿ ಮಾಡಲಾಗಿತ್ತು. ಆದರೆ ಬಳಿಕ ಬೆಲೆಯನ್ನು 33,999 ರೂ. ಹೆಚ್ಚಿಸಲಾಗಿದೆ. ಆದಾಗ್ಯೂ, ನೀವು ಪ್ರಸ್ತುತ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ 1ನ್ನು ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಚೇಂಜ್ ಆಫರ್‌
ನಥಿಂಗ್ ಫೋನ್ 1, 8 ಜಿಬಿ ಮತ್ತು 128ಜಿಬಿ ಸ್ಟೋರೇಜ್ ಮಾದರಿ ಹೊಂದಿರುವ ಫ್ಲಿಪ್‌ಕಾರ್ಟ್‌ನಲ್ಲಿ 27,499 ರೂಗಳಲ್ಲಿ ಪಟ್ಟಿಮಾಡಲಾಗಿದೆ. ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಮಾಡಿದ ವಹಿವಾಟಿನ ಮೇಲೆ 5% ಕ್ಯಾಶ್‌ಬ್ಯಾಕ್​ನ್ನು ಸಹ ನೀಡಲಾಗುತ್ತಿದ್ದು, ಇದು ಮೊಬೈಲ್​ ಬೆಲೆಯನ್ನು 26,124 ರೂ. ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ 23,000 ರೂ. ನೀಡುತ್ತಿದೆ. ಈ ಎಲ್ಲಾ ಆಫರ್​ಗಳೊಂದಿಗೆ ನಥಿಂಗ್ ಫೋನ್ (1) ಫ್ಲಿಪ್‌ಕಾರ್ಟ್‌ನಲ್ಲಿ 3,124 ರೂ.ಗಳಿಗೆ ಲಭ್ಯವಿದೆ.

 

ನಥಿಂಗ್ ಫೋನ್ 1ನ ವಿಶೇಷತೆಗಳು
ನಥಿಂಗ್ ಫೋನ್ (1) ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಅತ್ಯಾಧುನಿಕ ಗ್ಲಿಫ್ ಬಳಕೆದಾರ ಇಂಟರ್ಫೇಸ್​ನ್ನು ಹೊಂದಿದೆ. ಇದು 6.55-ಇಂಚಿನ ಪೂರ್ಣ HD+ OLED ಪರದೆಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಲೇಯರ್ ಮತ್ತು HDR10+ ಆಗಿದೆ. ಫೋನ್‌ನ ಹಿಂಬದಿಯ ಕ್ಯಾಮೆರಾ ಡ್ಯುಯಲ್ 50 MP, ಮುಂಭಾಗದ ಕ್ಯಾಮೆರಾ 16MP ಹೊಂದಿದೆ. Sony IMX766 ಫ್ಲ್ಯಾಗ್‌ಶಿಪ್ ಕ್ಯಾಮೆರಾ ಚಾಲಿತವಾಗಿದೆ. ಇದು ರಾತ್ರಿ ಮೋಡ್​ನ್ನು ಸಹ ಹೊಂದಿದೆ. ಮತ್ತು ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಹೊಂದಿದೆ.

 

ನಥಿಂಗ್ ಫೋನ್ (1)ನ್ನು ಒಮ್ಮೆ ಚಾರ್ಜ್​ ಮಾಡಿದರೆ 18ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಎರಡು ದಿನಗಳವರೆಗೆ ಸ್ಟ್ಯಾಂಡ್​ಬೈ ಮೋಡ್​ನಲ್ಲಿ ಸಹ ಬಳಸಬಹುದಾಗಿದೆ. ಫೋನ್​​ ವೇಗದ ಚಾರ್ಜಿಂಗ್​​ ಸಾಮರ್ಥ್ಯವನ್ನು ಒಳಗೊಂಡಿದೆ. ಕೇವಲ 30 ನಿಮಿಷಗಳಲ್ಲಿ 0 ದಿಂದ 50ಗೆ ಚಾರ್ಜ್​ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್​​ಫೋನ್​ನಲ್ಲಿ ಕಾಲ್​ ಬರುತ್ತಿರುವಾಗ, ಮೆಸೇಜ್ ಬರುವಾಗ, ನೋಟಿಫಿಕೇಶನ್​ಗಳು ಬಂದಾಗ, ಚಾರ್ಜ್​ಗೆ ಅಳವಡಿಸಿದಾಗ ಗೊತ್ತಾಗುವ ಕಾರಣಕ್ಕಾಗಿ ಮೊಬೈಲ್​ನ ಹಿಂಭಾಗದಲ್ಲಿ ಲೈಟ್​ಗಳನ್ನು ಅಳವಡಿಸಲಾಗಿದೆ.


Spread the love

About Laxminews 24x7

Check Also

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ..? ಇಲ್ಲಿದೆ ನೋಡಿ ಮಾಹಿತಿ

Spread the love ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆ ಮುಖ್ಯವಾದ ಮಾಹಿತಿ ನೀಡಿದೆ. ಬೆಂಗಳೂರು ಒನ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ