Home / ಜಿಲ್ಲೆ / ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ……

ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ……

Spread the love

ಬೆಂಗಳೂರು(ಏ. 29): ಲಾಕ್​ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್​ಗಳಿವೆ. ಈಗ ಈ ಮಾಸ್ಕ್​ಗಳಿಂದಲೇ ಹೊಸದೊಂದು ಸಮಸ್ಯೆ ಎದುರಾಗಿದೆ. ಜನರು ಮಾಸ್ಕ್​ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್​ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ನಿಯಮಗಳನ್ನ ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ.

ಹಸಿ ಕಸ ಅಥವಾ ಒಣ ಕಸಗಳ ಜೊತೆ ಮಾಸ್ಕ್​ಗಳನ್ನ ಇಟ್ಟು ಕೊಡಬಾರದು. ಹಾಗೆ ಮಾಡಿದರೆ 2 ಸಾವಿರ ರೂ ವರೆಗೂ ದಂಡ ವಿಧಿಸಲಾಗುವುದು. ಹಾಗೂ ಆ ಮನೆಯ ಕಸವನ್ನೇ ಸ್ವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ. ಮಾಸ್ಕ್​ಗಳನ್ನು ಸ್ಯಾನಿಟರಿ ತ್ಯಾಜ್ಯಗಳೆಂದು ಪರಿಗಣಿಸಿ ಪ್ರತ್ಯೇಕಗೊಳಿಸಬೇಕು ಎಂದು ಸೂಚಿಸಿದೆ.

ಕೆಲ ತಜ್ಞರು ಕಸದೊಂದಿಗೆ ಮಾಸ್ಕ್ ಬೆರೆಸಿದಾಗ, ಅದನ್ನು ವಿಂಗಡಣೆ ಮಾಡುವ ಪೌರ ಕಾರ್ಮಿಕರಿಗೆ ಕೊರೋನಾ ಸೋಂಕುವ ಅಂಟು ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಆಡಳಿತ ಈ ಕ್ರಮ ಕೈಗೊಂಡಿದೆ.

ಸಾರ್ವಜನಿಕರು ರೆಗ್ಯುಲರ್ ಕಸದ ಜೊತೆ ಮಾಸ್ಕ್ ಮಿಶ್ರಣಗೊಳಿಸಿ ಕೊಟ್ಟರೆ ಮೊದಲ ಬಾರಿ ಅವರಿಗೆ 1 ಸಾವಿರ ರೂ ದಂಡ ವಸೂಲಿ ಮಾಡಬೇಕು. ಆ ದಿನ ಅವರ ಮನೆಯ ಕಸವನ್ನು ಹಿಂದಿರುಗಿಸಬೇಕು. ಎರಡನೇ ಬಾರಿ ಆ ತಪ್ಪು ಪುನಾವರ್ತನೆ ಆದರೆ 2 ಸಾವಿರ ರೂ ದಂಡ ಹಾಕಬೇಕು. ಹಾಗೂ ಆ ಮನೆಯಿಂದ ಮತ್ತೆ ಕಸ ಪಡೆಯಬಾರದು ಎಂದು ಪೌರ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸಾರ್ವಜನಿಕವಾಗಿ ಉಗುಳಿದರೆ, ಮಲ ವಿಸರ್ಜನೆ ಮಾಡಿದರೆ ದಂಡ ಹಾಕಲಾಗುತ್ತಿತ್ತು. ಈಗ ಸಾರ್ವಜನಿಕವಾಗಿ ಉಗುಳಿದರೂ ದಂಡ ವಿಧಿಸಲಾಗುತ್ತದೆ. ಉಗುಳುವುದರಿಂದ ಕೊರೋನಾ ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಬಟ್ಟೆಯಿಂದ ಮಾಸ್ಕ್ ಮಾಡಿಕೊಂಡರೆ ಅದನ್ನು ಆಗಾಗ್ಗೆ ಸೋಪಿನಿಂದ ತೊಳೆದು ಬಳಕೆ ಮಾಡಿಕೊಳ್ಳಬಹುದು. ಕೆಲ ದಿನಗಳ ನಂತರ ಅದನ್ನು ಕಸಕ್ಕೆ ಹಾಕುವ ಬದಲು ಸುಟ್ಟು ಹಾಕಬಹುದು ಎಂಬ ಸಲಹೆಗಳನ್ನು ತಜ್ಞರು ನೀಡಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ