ಬೆಂಗಳೂರು : ರಾಜ್ಯಾದ್ಯಂತ ಬುಧವಾರ ಮಧ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯ ಅನುಸಾರ ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂಲೇ ಲಾಕ್ ಡೌನ್ ಸಡಿಲಗೊಳಿಸಲಾಗುತ್ತಿದೆ.
ಇದೀಗ ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಒಂದಷ್ಟು ಸಡಿಲಿಕೆಗಳನ್ನು ಮಾಡಿ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ
ಈ ಕುರಿತಂತೆ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯ ಸರ್ಕಾರ, ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ರಾಜ್ಯದಲ್ಲಿ ಸಡಿಲಗೊಳಿಸಿ, ಮಾರ್ಗ ಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯ ಅನುಸಾರ, ಅಗತ್ಯ ಸೇವೆಗಳಿಗೆ ಲಾಕ್ ಡೌನ್ ನಿಯಮವನ್ನು ಸಡಿಲಗೊಳಿಸಲಾಗಿದೆ.
ಗುರುವಾರದಿಂದ ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.
ಆದರೆ, ಅಂತರ ಜಿಲ್ಲೆಯ ಸಂಚಾರವಾಗಲೀ, ಸಾರಿಗೆ ಸಂಚಾರವಾಗಲಿ ಆರಂಭವಿಲ್ಲ. ಯಾವುದಕ್ಕೆಲ್ಲ ರಿಯಾಯಿತಿ ರಸಗೊಬ್ಬರ, ಬೀಜ ಮತ್ತು ಔಶದಿ, ಬಡಗಿ, ಮೋಟಾರ್ ರಿಪೇಟಿ, ಸಂಸ್ಕರಣ ಘಟಕ, ಪ್ಯಾಕೇಜಿಂಗ್ ಘಟಕಗಳು, ಅಗತ್ಯ ಆನ್‌ಲೈನ್ ಸೇವೆಗಳಿಗೆ, ಎಪಿಎಂಸಿ ಮಾರುಕಟ್ಟೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಸುರಕ್ಷಿತ ವಲಯದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅನುಮತಿ ಇರುತ್ತದೆ. ಸ್ವ ಉದ್ಯೋಗ ಮಾಡುವ ವ್ಯಕ್ತಿಗಳಿಗೆ, ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್ ಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಿಲಾಗಿದೆ.
ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ತುರ್ತು ಅಗತ್ಯ ಸೇವೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸೇವೆಗಳಿಗಾಗಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಸಬೇಕು.
ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅಗತ್ಯ ಸರ್ಕಾರಿ ಇಲಾಖೆಗಳನ್ನು ತೆರೆಯಬೇಕು. ಆದರೆ ಶೇ.33ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಗತ್ಯವಸ್ತುಗಳನ್ನು ಆನ್‍ಲೈನ್‍ನಲ್ಲಿ ಖರೀದಿ ಮಾಡಬಹುದು.
ಮೆಟ್ರೋ, ರೈಲು, ಬೈಕ್ ಸಂಚಾರ ಇರುವುದಿಲ್ಲ. ಮೇ 3ರವರೆಗೆ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇರುವುದಿಲ್ಲ.
ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಮದ್ಯ ಮಾರಾಟ ಮೇ 3ರವರೆಗೂ ಇರುವುದಿಲ್ಲ. ಹೋಟೆಲ್, ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ. ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ. ಅಂತರ ಜಿಲ್ಲೆ ಸಂಚಾರ ಇರುವುದಿಲ್ಲ.
ಈ ಮೊದಲು ಐಟಿ-ಬಿಟಿ ಕಂಪನಿ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಹೊಸ ಪ್ರಕಟಣೆ ಹೊರಡಿಸಿರುವ ಸರ್ಕಾರವು ಕನಿಷ್ಠ ಸಿಬ್ಬಂದಿ ಆಧಾರದ ಮೇಲೆ ಕಂಪನಿ ತೆರೆಯಬಹುದು ಎಂದು ತಿಳಿಸಿದೆ. ಇನ್ನು ಕೋವಿಡ್ ಮಹಾಮಾರಿ ಸಾಂಕ್ರಾಮಿಕಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ದೇಶಾದ್ಯಂತ ಮಾರ್ಚ್ 25ರಿಂದ ಜಾರಿಗೊಂಡಿರುವ ಲಾಕ್ ಡೌನ್ ಇದೀಗ ಎರಡನೇ ಸುತ್ತಿಗೆ ಪ್ರವೇಶಿಸಿದೆ.
ಎಪ್ರಿಲ್ 14ರಂದು ಮುಕ್ತಾಯಗೊಳ್ಳಬೇಕಿದ್ದ ಲಾಕ್ ಡೌನ್ ಅನ್ನು ಕೇಂದ್ರ ಸರಕಾರವು ಮತ್ತೆ ಮೇ 3ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ನಡುವೆ ಸ್ಥಳೀಯ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವೊಂದು ಅವಶ್ಯ ಚಟುವಟಿಕೆಗಳನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ನಡೆಸಲು ಷರತ್ತುಬದ್ಧ ಅನುಮತಿ ಲಭಿಸಿತ್ತು. ಆದರೆ ಮೇ 3ರವರೆಗೆ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡದಿರಲು ಸರಕಾರ ತೀರ್ಮಾನಿಸಿದೆ.
# ಏನಿರುತ್ತೆ..?
ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ವಲಯಕ್ಕೆ ವಿನಾಯಿತಿ. ರಸ್ತೆ, ನೀರಾವರಿ ಕಾಮಗಾರಿ ಮಾಡಲು ಅವಕಾಶ, ಬೈಕ್, ಕಾರು ಗ್ಯಾರೇಜ್ ಓಪನ್‌ಗೆ ಅಸ್ತು, ಹೋಟೆಲ್ ಗಳಲ್ಲಿ ಪಾರ್ಸೆಲ್ ಗಳಿಗೆ ಅವಕಾಶ, ಖಾಸಗಿ ಕಾರುಗಳಲ್ಲಿ ಇಬ್ಬರು ಜಿಲ್ಲೆಯೊಳಗೆ ಮಾತ್ರ ಪ್ರಯಾಣ, ಹಾಲು-ಹಾಲು ಉತ್ಪನ್ನ ಸಾಗಟ ಮಾಡಬಹುದು, ಅಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್ಗಳಲ್ಲಿ ಎಂದಿನಂತೆ ಸೇವೆ
ಮೆಡಿಕಲ್ ಶಾಪ್ಗಳು, ಲ್ಯಾಬೋರೇಟರಿಗಳೂ ಆರಂಭ, ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ.
ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ.
ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅನುಮತಿ. ಎಪಿಎಂಸಿ ಮಾರ್ಕೆಟ್ಗಳಲ್ಲಿ ತರಕಾರಿ ಮಾರಾಟಕ್ಕೆ ಗ್ರೀನ್ ಸಿಗ್ನಲ್. ಕಡಲ ನಗರಿಗಳಲ್ಲಿ ಮೀನುಗಾರಿಕೆಗೆ ಅನುಮತಿ. ಬ್ಯಾಂಕ್ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ.
ಕೋರಿಯರ್, ಅಂಚೆ ಸೇವೆಗೆ ಅನುಮತಿ ನೀಡಿದ ಸರ್ಕಾರ. ಅಮೆಜಾನ್, ಫ್ಲಿಪ್ಕಾರ್ಟ್ಗಳ ಆನ್‌ಲೈನ್ ಖರೀದಿ ಸೇವೆ ಲಭ್ಯ.
ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ, ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್ಸ್ಟೇ, ಲಾಡ್ಜ್ಗಳಿಗೆ ಅನುಮತಿ.
ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ. ಸಣ್ಣ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅನುಮತಿ, ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ.
# ಯಾವುದು ಇರಲ್ಲ..?
ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ. ಸಭೆ-ಸಮಾರಂಭ ಮಾಡುವಂತಿಲ್ಲ. ಮದ್ಯ ಮಾರಾಟ ಮಾಡಲು ಅವಕಾಶವಿಲ್ಲ. ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ. ರೈಲು, ಬಸ್ಸು, ಮೆಟ್ರೋ ಸೇವೆಗಳು ಇರುವುದಿಲ್ಲ. ವೈದ್ಯಕೀಯ ತುರ್ತು ಹೊರತುಪಡಿಸಿ ಅಂತಾರಾಜ್ಯ ಹಾಗೂ ಅಂತರ್ಜಿಲ್ಲೆ ಓಡಾಟಕ್ಕೆ ಅವಕಾಶ ಇಲ್ಲ. ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಇರುವುದಿಲ್ಲ.
ಚಿತ್ರಮಂದಿರ, ಬಾರ್, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಶಾಪಿಂಗ್ ಮಾಲ್ಗಳು ಎಂದಿನಂತೆ ಮುಚ್ಚುವುದು. ಸಭೆ ಸಮಾರಂಭಗಳಿಗಿಲ್ಲ ಅವಕಾಶ. ಹಾಟ್ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸುವುದಿಲ್ಲ. ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ.
ಕಂಟೈನ್ಮೆಂಟ್ ಜೋನ್ಗಳಿಗಿಲ್ಲ ವಿನಾಯಿತಿ. ಕೊರೋನಾ ಹಾಟ್ಸ್ಪಾಟ್ ಏರಿಯಾಗಳಲ್ಲಿ ಕೇಂದ್ರದ ಗೈಡ್ಲೈನ್ಸ್ ಎಂದಿನಂತೆ ಇರಲಿದೆ. ಐಟಿ-ಬಿಟಿ ವಲಯಕ್ಕೆ ಮೇ.3ರ ವರೆಗೆ ವಿನಾಯಿತಿ ಇಲ್ಲ