Breaking News
Home / ರಾಜಕೀಯ / ಮೀಸಲು ಕ್ಷೇತ್ರಗಳಲ್ಲೇ ಕೈ ಟಿಕೆಟ್‌ಗೆ ಹೆಚ್ಚು ಫೈಟ್‌: 51 ಕ್ಷೇತ್ರಗಳಿಗೆ 350 ಮಂದಿ ಅರ್ಜಿ

ಮೀಸಲು ಕ್ಷೇತ್ರಗಳಲ್ಲೇ ಕೈ ಟಿಕೆಟ್‌ಗೆ ಹೆಚ್ಚು ಫೈಟ್‌: 51 ಕ್ಷೇತ್ರಗಳಿಗೆ 350 ಮಂದಿ ಅರ್ಜಿ

Spread the love

ಬೆಂಗಳೂರು: ರಾಜ್ಯ ವಿಧಾನಸಭೆಯ ಮೀಸಲು ಕ್ಷೇತ್ರಗಳಲ್ಲೇ ಕಾಂಗ್ರೆಸ್‌ ಟಿಕೆಟ್‌ಗೆ ಹೆಚ್ಚಿನ ಪೈಪೋಟಿ ನಡೆದಿದೆ. ಹಾಲಿ ಶಾಸಕರು, ಮಾಜಿ ಸಚಿವರು ಪ್ರತಿನಿಧಿಸುವ ಕ್ಷೇತಗಳಲ್ಲೂ ಟಿಕೆಟ್‌ ಬಯಸಿರುವವರ ಪಟ್ಟಿ ದೊಡ್ಡದಿದೆ. ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಒಂದು ಡಜನ್‌ ಮೀರಿರುವುದೇ ಈಗ “ಆಯ್ಕೆ’ ಬಹುದೊಡ್ಡ ತಲೆನೋವಾಗಿದೆ.

 

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಒಟ್ಟು 51 ಕ್ಷೇತ್ರಗಳಿವೆ. ಈ ಮೀಸಲು ಕ್ಷೇತ್ರಗಳಲ್ಲಿ ಸಿಂಹಪಾಲು ಪಡೆದರೆ “ಮ್ಯಾಜಿಕ್‌ ನಂಬರ್‌’ ಸುಲಭವಾಗಿ ದಾಟಬಹುದು ಎಂಬುದು ಕಾಂಗ್ರೆಸ್‌ ವರಿಷ್ಠರ ಲೆಕ್ಕಾಚಾರ. ಹೀಗಾಗಿ ಈ ಸಲ ಮೀಸಲು ಕ್ಷೇತ್ರಗಳ ಟಿಕೆಟ್‌ ಹಂಚಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಷೇತ್ರ ಸಂಪರ್ಕ, ಪಕ್ಷ ಸಂಘಟನೆ, ಪಕ್ಷ ನಿಷ್ಠೆ ಜತೆಗೆ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಮತದಾರರು ಹೊಂದಿರುವ ಅಭಿಪ್ರಾಯ ಏನೆಂಬುದರ ಬಗ್ಗೆ ಆಂತರೀಕ್ಷ ಸಮೀಕ್ಷೆ ನಡೆಸಿ ಗೆಲುವಿನ ಮಾನದಂಡವನ್ನೇ ಮುಂದಿಟ್ಟುಕೊಂಡು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.

ಸತತವಾಗಿ ಸೋಲುತ್ತಿರುವ ಕ್ಷೇತ್ರಗಳಲ್ಲಿ ಗೆಲುವು ಮರಳಿ ಪಡೆಯುವುದು, ಹಾಲಿ ಶಾಸಕರಿರುವ ಕಡೆ ಸೋಲಿನ ಭೀತಿ ಇದ್ದರೆ ಅಭ್ಯರ್ಥಿಗಳ ಬದಲಾವಣೆ, ದಲಿತ ಸಮುದಾಯದ ಬಲಗೈ-ಎಡಗೈ, ಲಂಬಾಣಿ, ಭೋವಿ ಸಮುದಾಯಗಳ ನಡುವೆ ಸಮನ್ವಯತೆ, ಕೊರಮ, ಕೊರಚ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸುವುದು ಸೇರಿದಂತೆ ಅನೇಕ ಮಾನದಂಡಗಳನ್ನು ಅನುಸರಿಸಿ ಗೆಲುವು ದಕ್ಕಿಸಿಕೊಳ್ಳುವ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ.

ಹಾಲಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಎಸ್‌ಸಿ ಸಮುದಾಯದ 11 ಮಂದಿ (ಎಸ್‌ಸಿ ಬೋವಿ-3, ಎಸ್‌ಸಿ ಲಂಬಾಣಿ-3, ಎಸ್‌ಸಿ-ಎಡಗೈ 2, ಎಸ್‌ಸಿ ಬಲಗೈ-3) ಹಾಗೂ ಎಸ್‌ಟಿ (ವಾಲ್ಮೀಕಿ) ಸಮುದಾಯದಿಂದ 8 ಮಂದಿ ಸೇರಿ ಒಟ್ಟು 19 ಮಂದಿ ಪ್ರತಿನಿಧಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲಿ ಎಸ್‌ಸಿ 17 ಹಾಗೂ ಎಸ್‌ಟಿಗೆ ಸೇರಿದ 6 ಮಂದಿ ಸೇರಿ ಒಟ್ಟು 23 ಮಂದಿ ಶಾಸಕರಿದ್ದಾರೆ. ಜೆಡಿಎಸ್‌ನಲ್ಲಿ ಎಸ್‌ಸಿಯಿಂದ ಆರು ಹಾಗೂ ಹಾಗೂ ಎಸ್‌ಟಿಗೆ ಸೇರಿದ ಒಬ್ಬರು ಸೇರಿ ಒಟ್ಟು 7 ಮಂದಿ ಇದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ