Breaking News
Home / Uncategorized / ಸಚಿವರು ಕೋರ್ಟ್ ಮೆಟ್ಟಿಲೇರಿದ್ದು ಸರಿಯಲ್ಲ – ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಸಚಿವರು ಕೋರ್ಟ್ ಮೆಟ್ಟಿಲೇರಿದ್ದು ಸರಿಯಲ್ಲ – ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

Spread the love

ಬೆಂಗಳೂರು : ಮುಂದಿನ ಸಾಧಕ ಬಾಧಕಗಳನ್ನು ಆಲೋಚಿಸಿ, ಕೋರ್ಟ್ ಮೊರೆ ಹೋಗಿರೋದು ಅವರವರ ವೈಯಕ್ತಿಕ ವಿಚಾರವಾಗಿದೆ. ಆದ್ರೇ ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ, ವಿಚಾರವನ್ನು ಇನ್ನಷ್ಟು ಗೊಂದಲ, ಗೋಜಿಗೆ ಮಾಡೋದು ಸರಿಯಲ್ಲ. ಹೀಗೆ ಕೋರ್ಟ್ ಗೆ ಹೋಗಿ ಗೊಂಜಲು ಮಾಡಿಕೊಂಡಿದ್ದು ನನ್ನ ಪ್ರಕಾರ ಸರಿಯಲ್ಲ ಎನ್ನುವ ಮೂಲಕ, 6 ಸಚಿವರು ಕೋರ್ಟ್ ಮೊರೆ ಹೋಗಿದ್ದಕ್ಕೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ತಮ್ಮ ಆಪ್ತ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಮಾಡಿದ ನಂತ್ರ, ತಮ್ಮ ತೇಜೋವಧೆ ಕಾರಣ ನೀಡಿ, 6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್ ಗೆ ಅರ್ಜಿ ಹಾಕಿದ್ದಾರೆ. ಇಂತಹ ವಿಚಾರಕ್ಕೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಡಿವಿ ಸದಾನಂದಗೌಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಡಿ ಬಿಡುಗಡೆಯ ನಂತ್ರ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟಾಗಿದೆ. ರಾಜಕೀಯದಲ್ಲಿ ಇಂತಹ ಸಿಡಿಗಳು ತನ್ನದೇ ಆದಂತ ಪ್ರಭಾವ ಬೀರುತ್ತವೆ. ಈಗ ಟೆಕ್ನಾಲಜಿ ಮುಂದುವರೆದಿದೆ. ಯಾರು ಏನ್ ಬೇಕಾದ್ರು ಮಾಡಬಹುದು. ಆದ್ರೇ ಇದು ಸತ್ಯವೇ ಸುಳ್ಳೋ ಎನ್ನುವ ಬಗ್ಗೆ ತಿಳಿದು ಬರಬೇಕಾದ್ರೇ.. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

 

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಸಿಟಿ ಸಿವಿಲ್ ಕೋರ್ಟ್ ಗೆ 6 ಸಚಿವರು ಅರ್ಜಿ ಹಾಕಿದ್ದಾರೆ. ಮುಂದಿನ ಸಾಧಕ ಭಾದಕಗಳನ್ನು ಅರಿತು ಕೋರ್ಟ್ ಮೊರೆ ಹೋಗಿದ್ದಾರೆ. ಇದು ಅವರ ವೈಯಕ್ತಿಕವಾದಂತ ವಿಚಾರವಾಗಿದೆ. ಆದ್ರೇ ಅನಾವಶ್ಯಕವಾಗಿ ಹೀಗೆ ಕೋರ್ಟ್ ಮೊರೆ ಹೋಗಿದ್ದು ಇನ್ನಷ್ಟು ಗೊಂದಲ, ಗೋಜಿಗೆ ಎಡೆ ಮಾಡಿಕೊಟ್ಟಂತೆ ಆಗಿದೆ ಎನ್ನುವ ಮೂಲಕ ಕೋರ್ಟ್ ಗೆ ಸಚಿವರು ಹೋಗಿದ್ದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.


Spread the love

About Laxminews 24x7

Check Also

ಹೆಸರು ಬದಲಿಸಿಕೊಂಡ ಅಗ್ನಿಸಾಕ್ಷಿ ನಟ ವಿಜಯ್‌ ಸೂರ್ಯ; ಹೊಸ ಹೆಸರೇನು?

Spread the love ನಟ ವಿಜಯ್ ಸೂರ್ಯ ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ. ಗುಳಿ ಕೆನ್ನೆ, ಕ್ಯೂಟ್‌ ಸ್ಮೈಲ್‌, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ