Breaking News
Home / ಜಿಲ್ಲೆ / ಬೆಂಗಳೂರು / ಇಂದು 20 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆ…….

ಇಂದು 20 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆ…….

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ 20 ಮಂದಿಗೆ ಕೊರೊನಾ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬಾಗಲಕೋಟೆಯಲ್ಲಿ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಬುಲೆಟಿನ್‍ನಲ್ಲಿ, ಬಾಗಲಕೋಟೆಯಲ್ಲಿ 13, ಬೆಂಗಳೂರು 2, ದಕ್ಷಿಣ ಕನ್ನಡ 3, ಕಲಬುರಗಿ ಹಾಗೂ ವಿಜಯಪುರದಲ್ಲಿ ಒಬ್ಬರಿಗೆ ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿ (ರೋಗಿ 607)ಯಿಂದಲೇ 13 ಮಂದಿಗೆ ಸೋಂಕು ತಗುಲಿದೆ. ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 13 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮಂಗಮ್ಮನಪಾಳ್ಯದ ಕೂಲಿ ಕಾರ್ಮಿಕ (ರೋಗಿ ನಂಬರ್ 654)ಗೆ ಸೋಂಕು ತಗುಲಿರುವುದು ದೃಢವಾಗುತ್ತಿದ್ದಂತೆ ಆತನ ಕುಟುಂಬಸ್ಥರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಾರ್ಮಿಕನ ಪುತ್ರ ಮತ್ತು ಪತ್ನಿಗೆ ಸೋಂಕು ತಗುಲಿದೆ. ಕಾರ್ಮಿಕನ ಪುತ್ರ ನಗರದಲ್ಲಿ ಡೆಲಿವರಿ ಬಾಯ್ (ರೋಗಿ ನಂಬರ್ 678) ಆಗಿ ಕೆಲಸ ಮಾಡಿಕೊಂಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದೀಗ ಆರೋಗ್ಯ ಇಲಾಖೆಗೆ ಡೆಲಿವರಿ ಬಾಯ್ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುವುದು ಮತ್ತು ಆತನ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸೋಂಕಿತರ ವಿವರ:
1. ರೋಗಿ-674: ದಕ್ಷಿಣ ಕನ್ನಡದ 11 ವರ್ಷದ ಬಾಲಕಿ. ರೋಗಿ ನಂಬರ್ 536ರ ಜೊತೆ ಸಂಪರ್ಕ
2. ರೋಗಿ-675: ದಕ್ಷಿಣ ಕನ್ನಡದ 35 ವರ್ಷದ ಮಹಿಳೆ. ರೋಗಿ 536ರ ಜೊತೆ ಸಂಪರ್ಕದಲ್ಲಿದ್ದರು.
3. ರೋಗಿ-676: ದಕ್ಷಿಣ ಕನ್ನಡದ ಬಂಟ್ವಾಳದ 16 ವರ್ಷದ ಬಾಲಕಿ. ರೋಗಿ ನಂಬರ್ 390ರ ಜೊತೆ ಸಂಪರ್ಕ
4. ರೋಗಿ-677: ಬೆಂಗಳೂರಿನ 40 ವರ್ಷದ ಮಹಿಳೆ. ರೋಗಿ-654ರ ಜೊತೆ ಸಂಪರ್ಕದಲ್ಲಿದ್ದರು.
5. ರೋಗಿ-678: ಬೆಂಗಳೂರಿನ 25 ವರ್ಷದ ಯುವಕ. ರೋಗಿ-654ರ ಜೊತೆ ಸಂಪರ್ಕದಲ್ಲಿದ್ದರು.
6. ರೋಗಿ-679: ಕಲಬುರಗಿಯ 52 ವರ್ಷದ ಪುರುಷ. ರೋಗಿ 610ರ ಜೊತೆ ಸಂಪರ್ಕದಲ್ಲಿದ್ದರು.
7. ರೋಗಿ-680: ಬಾಗಲಕೋಟೆಯ ಬದಾಮಿ ತಾಲೂಕಿನ 18 ವರ್ಷದ ಯುವತಿ. ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ.
8. ರೋಗಿ-681: ಬಾಗಲಕೋಟೆಯ ಬದಾಮಿ ತಾಲೂಕಿನ 45 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.

9. ರೋಗಿ-682: ಬಾಗಲಕೋಟೆಯ ಬದಾಮಿ ತಾಲೂಕಿನ 55 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.
10. ರೋಗಿ-683: ಬಾಗಲಕೋಟೆಯ ಬದಾಮಿ ತಾಲೂಕಿನ 26 ವರ್ಷದ ಯುವಕ. ರೋಗಿ-607ರ ಜೊತೆ ಸಂಪರ್ಕ.
11. ರೋಗಿ-684: ಬಾಗಲಕೋಟೆಯ ಬದಾಮಿ ತಾಲೂಕಿನ 47 ವರ್ಷದ ಪುರುಷ. ರೋಗಿ-607ರ ಜೊತೆ ಸಂಪರ್ಕ.
12. ರೋಗಿ-685: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
13. ರೋಗಿ-686: ಬಾಗಲಕೋಟೆಯ ಬದಾಮಿ ತಾಲೂಕಿನ 15 ವರ್ಷದ ಬಾಲಕ. ರೋಗಿ-607ರ ಜೊತೆ ಸಂಪರ್ಕ.
14. ರೋಗಿ-687: ಬಾಗಲಕೋಟೆಯ ಬದಾಮಿ ತಾಲೂಕಿನ 40 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
15. ರೋಗಿ-688: ಬಾಗಲಕೋಟೆಯ ಬದಾಮಿ ತಾಲೂಕಿನ 23 ವರ್ಷದ ಯುವಕ. ರೋಗಿ-607ರ ಜೊತೆ ಸಂಪರ್ಕ.
16. ರೋಗಿ-689: ಬಾಗಲಕೋಟೆಯ ಬದಾಮಿ ತಾಲೂಕಿನ 10 ವರ್ಷದ ಬಾಲಕ. ರೋಗಿ-607ರ ಜೊತೆ ಸಂಪರ್ಕ.

17. ರೋಗಿ-690: ಬಾಗಲಕೋಟೆಯ ಬದಾಮಿ ತಾಲೂಕಿನ 32 ವರ್ಷದ ಪುರುಷ.ರೋಗಿ-607ರ ಜೊತೆ ಸಂಪರ್ಕ.
18. ರೋಗಿ-691: ಬಾಗಲಕೋಟೆಯ ಬದಾಮಿ ತಾಲೂಕಿನ 30 ವರ್ಷದ ಮಹಿಳೆ. ರೋಗಿ-607ರ ಜೊತೆ ಸಂಪರ್ಕ.
19. ರೋಗಿ-692: ಬಾಗಲಕೋಟೆಯ ಬದಾಮಿ ತಾಲೂಕಿನ 16 ವರ್ಷದ ಬಾಲಕಿ. ರೋಗಿ-607ರ ಜೊತೆ ಸಂಪರ್ಕ.
20. ರೋಗಿ-693: ವಿಜಯಪುರದ 35 ವರ್ಷದ ಮಹಿಳೆ. ರೋಗಿ-221ರ ಜೊತೆ ಸಂಪರ್ಕದಲ್ಲಿದ್ದರು.

ಇಂದು ಡಿಸ್ಚಾರ್ಜ್:
ಬೆಳಗಾವಿಯಲ್ಲಿ 8 ಮಂದಿ (ರೋಗಿ-224, 225, 243, 244, 245, 289, 294 298), ಬಾಗಲಕೋಟೆ ನಾಲ್ವರು (ರೋಗಿ-262, ಪಿ -263, 373, 379), ಮಂಡ್ಯದಲ್ಲಿ ನಾಲ್ವರು (ರೋಗಿ-237, 322, 322, 371), ಕಲಬುರಗಿಯಲ್ಲಿ ಐವರು ರೋಗಿ-394, 395, 421, 424, 425), ವಿಜಯಪುರ ಒಬ್ಬರು (ರೋಗಿ-428) ಹಾಗೂ ದಕ್ಷಿಣ ಕನ್ನಡ ಒಬ್ಬರು (ರೋಗಿ-325) ಸೇರಿ ಒಟ್ಟು ಇಂದು 23 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಡಾಣಕಶಿರೂರು ಗ್ರಾಮವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ.

ಮೂರು ದಿನಗಳ ಹಿಂದೆ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ಆದರೆ ಗರ್ಭಿಣಿಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಇದುವರೆಗೂ ಪತ್ತೆಯಾಗಿಲ್ಲ. ಗರ್ಭಿಣಿಗೆ ಸೋಂಕು ತಗುಲಿರುವ ವಿಷಯ ತಿಳಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಾರಣ ಕೆಲವು ದಿನಗಳ ಹಿಂದೆ ನಡೆದ ಗರ್ಭಿಣಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಗ್ರಾಮದ ಬಹುತೇಕರು ಭಾಗಿಯಾಗಿದ್ದರು. ಗರ್ಭಿಣಿಯ ಪತಿ ಸಾಂಪ್ರದಾಯಿಕ ಕಜ್ಜಾಯ ಭಿಕ್ಷೆಗಾಗಿ ಗ್ರಾಮದ ಪ್ರತಿ ಪ್ರತಿ ಮನೆಗಳಿಗೂ ತೆರಳಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ