ಬೆಳಗಾವಿ: ಪಕ್ಷ ಯಾರಿಗೆ ಹೇಳುತ್ತೋ ಅವರಿಗೆ ಬೆಂಬಲಿಸುತ್ತೆವೆ. ಆದ್ರೆ ಯಾರಾದ್ರು ಊಟಕ್ಕೆ ಕರೆದ್ರೆ ಭಿನ್ನಮತ ಎನ್ನಲಾಗುವುದಿಲ್ಲ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ಇಲ್ಲಿ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಪಕ್ಷದ ಯಾವುದೇ ಶಾಸಕರಲ್ಲಿ ಅಸಮಾಧಾನವಿಲ್ಲ. ಪಕ್ಷದಲ್ಲಿ ಯಾವುದೇ ರೀತಿ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ. ಹಾಗೇನಾದ್ರು ಸಮಸ್ಯೆಗಳು ಕಂಡು ಬಂದ್ರೆ ಆಂತರಿಕವಾಗಿ ಬಗೆ ಹರಿಸಿಕೊಳ್ಳುತ್ತೆವೆ ಎಂದರು.
ರಾಜ್ಯ ಸಿಎಂ ಬಿಎಸ್ ವೈ ಅವರು ಸಹ ಸಮರ್ಥ ನಾಯಕರು. ಎಲ್ಲವನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದಾರೆ. ಸರ್ಕಾರಕ್ಕೆ ಯಾವುದೇ ರೀತಿ ಸಮಸ್ಯೆಯಿಲ್ಲ. ಇನ್ನೂ ಮೂರು ವರ್ಷ ಗಳ ಕಾಲ ಸುಭದ್ರವಾಗಿರಲಿದೆ ಎಂದು ಭರವಸೆ ಮಾತುಗಳನ್ನು ಆಡಿದರು.