Breaking News
Home / ರಾಜ್ಯ / ವಿದ್ಯಾರ್ಥಿಗಳ ಆರೋಗ್ಯ ದೃಷ್ಥಿಯಿಂದ ಮಾಸ್ಕ್ ವಿತರಣೆ ಮಾಡುತ್ತಿರುವ ಯುವಕಾಂಗ್ರೆಸ್ ಎನ್.ಎಚ್.ಶಿವಶಂಕರರೆಡ್ಡಿ ವಿತರಿಸಿದರು

ವಿದ್ಯಾರ್ಥಿಗಳ ಆರೋಗ್ಯ ದೃಷ್ಥಿಯಿಂದ ಮಾಸ್ಕ್ ವಿತರಣೆ ಮಾಡುತ್ತಿರುವ ಯುವಕಾಂಗ್ರೆಸ್ ಎನ್.ಎಚ್.ಶಿವಶಂಕರರೆಡ್ಡಿ ವಿತರಿಸಿದರು

Spread the love

ಗೌರಿಬಿದನೂರು: ವಿದ್ಯಾರ್ಥಿಗಳ ಆರೋಗ್ಯ ದೃಷ್ಥಿಯಿಂದ ಹಾಗೂ ಕೋರಾನ ಸೋಂಕು ಹರಡುವಿಕೆ ತಡೆಗಟ್ಟುವಿಕೆಯನ್ನು ನಿಯಂತ್ರಿಸಲು ಸಹಕಾರವಾಗಿರಲೆಂದು ಮಾಸ್ಕ್ ವಿತರಣೆ ಮಾಡುತ್ತಿರುವ ಯುವಕಾಂಗ್ರೆಸ್ ಪದಾಧಿಕಾರಿಗಳ ಸೇವೆ ಅನನ್ಯವಾದುದ್ದು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ನಗರದ ಶಾಸಕರ ಅಧಿಕೃತ ಕಚೇರಿಯಲ್ಲಿ ಯುವಕಾಂಗ್ರೆಸ್ ಘಟಕ ಮತ್ತು ಎನ್‍ಎಚ್‍ಎಸ್ ಬಳಗದವತಿಯಿಂದ ನಾಲ್ಕು ಸಾವಿರ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿ ಇದೀಗ ವಿದ್ಯಾರ್ಥಿಗಳಿಗೆ ಪರೀಕ್ಷ ವೇಳೆ ಅಗಿದ್ದು ಪಿಯುಸಿ ಪರೀಕ್ಷೆ ಮುಗಿದಿದ್ದು ಮತ್ತೆ ಈಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಅರಂಭವಾಗುತ್ತಿದ್ದು ಅವರ ಅರೋಗ್ಯ ದೃಷ್ಥಿಯಿಂದ ಮತ್ತು ಕೋರಾನ ನಿಯಂತ್ರಣಕ್ಕೆ ಸಹಕಾರ ಅಗುವ ನಿಟ್ಟನಲ್ಲಿ ನಾಲ್ಕು ಸಾವಿರ ಮಾಸ್ಕ್ ನ್ನು ಶಿಕ್ಷಣ ಇಲಾಖೆ ಅಧಿಕಾರಗಳ ಸಹಕಾರದೊಂದಿಗೆ ತಾಲ್ಲೂಕಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ನ್ನು ವಿತರಣೆ ಮಾಡಲು ಎಲ್ಲ ಸಿದ್ದತೆ ಮಾಡಲಾಗುವುದು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿ ಕೋರಾನ ಸೋಂಕು ಅಧಿಕವಾಗಿದ್ದು ಈ ನಿಟ್ಟಿನಲ್ಲಿ ಮುಂದೆ ಪ್ರಾರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರೋಗದ ನಿಯಂತ್ರಣಕ್ಕೆ ಸಹಕಾರವಾಗುವ ನಿಟ್ಟಿನಲ್ಲಿ ನಮ್ಮ ಘಟಕದವತಿಯಿಂದ ಉಚಿತವಾಗಿ ನಾಲ್ಕು ಸಾವಿರ ಮಾಸ್ಕ್ ವಿತರಣೆ ಮಾಡುತ್ತಿದ್ದು ಇದನ್ನು ಪ್ರತಿ ವಿದ್ಯಾರ್ಥಿ ಉಪಯೋಗಿಸಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ,ಪಂ ಅಧ್ಯಕ್ಷ ಅರ್,ಲೋಕೇಶ್ ಬಿಇಓ ಶ್ರೀನಿವಾಸ್‍ಮೂರ್ತಿ ಅಲ್ಪಸಂಖ್ಯೆತರ ಘಟಕದ ಅಸ್ಲಂ ಶರೀಪ್, ಗಿರೀಶ್‍ರೆಡ್ಡಿ, ವೇಣು, ಕಾರ್ಯದರ್ಶಿ ವೆಂಕಟ್ ಮುಂತದವರು ಹಾಜರಿದ್ದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ