Breaking News
Home / ಜಿಲ್ಲೆ / ರಾಜ್ಯಾದ್ಯಂತ ರೈತರು ಬೃಹತ್​ ಪ್ರತಿಭಟನೆ : ಗೊರಗುಂಟೆ ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್

ರಾಜ್ಯಾದ್ಯಂತ ರೈತರು ಬೃಹತ್​ ಪ್ರತಿಭಟನೆ : ಗೊರಗುಂಟೆ ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್

Spread the love

ಬೆಂಗಳೂರು: ಕೃಷಿ ಮಸೂದೆಗಳನ್ನ ವಿರೋಧಿಸಿ ಇಂದು ಭಾರತ್​ ಬಂದ್​​ಗೆ ಕರೆ ನೀಡಿರೋ ಹಿನ್ನೆಲೆ ಇಂದು ರಾಜ್ಯಾದ್ಯಂತ ರೈತರು ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆ ರೈತ ಸಂಘದ ಅಧ್ಯಕ್ಷ ಗಿರೀಶ್​ಗೌಡ ನೇತೃತ್ವದಲ್ಲಿ ಗೊರಗುಂಟೆ ಪಾಳ್ಯ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ಪ್ರತಿಭಟಿಸಲಾಯ್ತು.

20 ನಿಮಿಷಗಳ ಕಾಲ ರಸ್ತೆ ತಡೆ ಮಾಡಲು ಪೊಲೀಸರು ಅನುಮತಿ ನೀಡಿದ್ದರು. ತುಮಕೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನ ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬೆಳಗ್ಗೆ 8.30ರಿಂದ, 20 ನಿಮಿಷದ ಕಾಲ ಬಂದ್​ ಮಾಡಲಾಯ್ತು.

ಇದರಿಂದ ಕನಕಪುರ, ಬನಶಂಕರಿ, ಬನ್ನೇರುಘಟ್ಟ, ಸುಮನಹಳ್ಳಿ ಕಡೆಗೆ ಹೋಗೊ ರಸ್ತೆಗಳು, ಬೆಂಗಳೂರು ಹೃದಯ ಭಾಗಗಳಾದ ಮೆಜೆಸ್ಟಿಕ್​, ಲಾಲ್​​ಬಾಗ್ ,ಮಲೇಶ್ವರಂ, ಶಿವಾಜಿನಗರ ಕಡೆಗೆ ಸಂಪರ್ಕ ಕಲ್ಪಿಸೋ ರಸ್ತೆಗಳಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ