ಘಟಪ್ರಭಾ- ಬೆಂಗಳೂರಿನಲ್ಲಿ ಹೊಸದಾಗಿ ತಹಶಿಲ್ದಾರ ಆಗಿ ಅಧಿಕಾರ ವಹಿಸಿಕೊಂಡಿರುವ ವಿಠ್ಠಲ ಚೌಗಲಾ ಹಾಗೂ ಬೆಳಗಾವಿ ಜಿಲ್ಲೆಯ ತೇರದಾಳ ತಾಲೂಕಿನ ಉಪ-ತಹಶಿಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕಾಂತ ಮಾಯನ್ನವರ ಇವರಿಗೆ ಘಟಪ್ರಭಾದ ಶ್ರೀ ಸರಸ್ವತಿ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಅಖಿಲ ಕರ್ನಾಟಕ ವಿಶ್ವ ಕರ್ಮ ಹೋರಾಟಗಾರರ ಸಮಿತಿ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸರಸ್ವತಿ ಇಂಟರ್ ನ್ಯಾಷನಲ್ ಸ್ಕೂಲಿನ ಅಧ್ಯಕ್ಷರಾದ ಶಂಕರ ಕುರಣಗಿ.ವಿಶ್ವ ಕರ್ಮ ಹೋರಾಟಗಾರ ಸಮಿತಿಯ ಉಪಾಧ್ಯಕ್ಷ ರಾದ ಮಹೇಶ್ ಪತ್ತಾರ.ಅನೀಲ ಸಾವಂತ.ಸುಭಾಷ್ ಬೈಲಪತ್ತಾರ.ಕರಣ ಸಾವಂತ.ಸಾಗರ ಬೈಲಪತ್ತಾರ.ಉಪಸ್ಥಿತರಿದ್ದರು.
