Breaking News
Home / ಕೊರೊನಾವೈರಸ್ / ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

Spread the love

ಬೆಂಗಳೂರು: ಬೆಸ್ಕಾಂ ಸಹಾಯವಾಣಿ ಕೇಂದ್ರದಲ್ಲಿ ಕೆಲಸ ಮಾಡುವ ಎಂಟು ಮಂದಿ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಹಾಯವಾಣಿ ಕೇಂದ್ರವನ್ನೇ 48 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

ಹೀಗಾಗಿ ಬೆಸ್ಕಾಂ ವಿದ್ಯುತ್‌ ಅಡಚಣೆ ಜತೆಗೆ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಪ್ರವೇಶ ನಿರಾಕರಣೆ, ಹಾಸಿಗೆ ಸಿಗದಿರುವ ಬಗ್ಗೆ ದೂರು ಕೊಡಲೂ ಸಹ ಅವಕಾಶ ಮಾಡಿಕೊಟ್ಟಿದ್ದ 1912 ಸಹಾಯವಾಣಿ ಮುಂದಿನ 48 ಗಂಟೆಗಳ ಕಾಲ ಲಭ್ಯವಿರುವುದಿಲ್ಲ.

ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

ಹೀಗಾಗಿ ಕೊರೋನಾ ಸೋಂಕಿತರು ಆಸ್ಪತ್ರೆಯ ಹಾಸಿಗೆ ನಿರಾಕರಣೆ ಬಗ್ಗೆ ದೂರು ನೀಡಲು ವಾಟ್ಸಾಪ್‌ ಸಂಖ್ಯೆ 9480812450ಗೆ ಸಂದೇಶ ಕಳುಹಿಸಬಹುದು ಅಥವಾ 1912ಛಿsñಜkhಟಠಿಟಟಿhÃpಚಿಟ.ಛಿsp ಗೆ ಮೇಲ್‌ ಮಾಡಬಹುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಬೆಸ್ಕಾಂ ಸಂಬಂಧಿ ದೂರುಗಳಿಗೆ ವೆಬ್‌ಸೈಟ್‌ನಲ್ಲಿರುವ ವಲಯ ಅಧಿಕಾರಿಗಳ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.

ಬೆಸ್ಕಾಂ ಸಿಬ್ಬಂದಿ ಪ್ರತಿಭಟನೆ:

ಬೆಸ್ಕಾಂ ಸಹಾಯವಾಣಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ 8 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಸೋಂಕಿನ ಭೀತಿಯಿಂದ ನಾವು ಕೆಲಸ ಮಾಡಲ್ಲ ಎಂದು ಸಿಬ್ಬಂದಿ ವರ್ಗದವರು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.

ಕೊರೋನಾದಿಂದ ಗುಣಮುಖರಾದ ಶಾಸಕ ಶರತ್​ ಬಚ್ಚೇಗೌಡ: ಜನರಿಗೆ ಕಿವಿಮಾತು..!

ಈ ಹಿಂದೆ ಒಂದು ಪಾಸಿಟಿವ್‌ ಪ್ರಕರಣ ಬಂದಾಗ ಕಂಟ್ರೋಲ್‌ ರೂಮ್‌ ವಿಭಾಗವನ್ನು ಸ್ಯಾನಿಟೈಸ್‌ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಈಗ ಒಂದೇ ದಿನ ಆರು ಮಂದಿಗೆ ಕೊರೋನಾ ಬಂದಿರುವುದು ಸಿಬ್ಬಂದಿ ವರ್ಗದವರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೆ ನಮಗೆ ರೋಗ ಬಂದರೆ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸುವ ಭರವಸೆಯನ್ನೂ ನೀಡುತ್ತಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೆ4 ಉಪ ವಿಭಾಗದ ಘಟಕ ಸೀಲ್‌

ಬೆಸ್ಕಾಂನ ಕೆ4 ಉಪ ವಿಭಾಗದ ಅಂಜನಾ ನಗರ ವ್ಯಾಪ್ತಿಯಲ್ಲಿರುವ ಒಂದನೇ ಕಾರ್ಯ ಮತ್ತು ಪಾಲನಾ ಘಟಕದಲ್ಲಿನ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಮೂರು ದಿನಗಳ ಕಾಲ ಕಚೇರಿಯನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಎಪಿಎಂ ಅಧಿಕಾರಿಗೆ ಸೋಂಕು ದೃಢಪಟ್ಟಿರುವುದರಿಂದ ಘಟಕವನ್ನು ಸ್ಯಾನಿಸೈಟ್‌ ಮಾಡಿಸಲು ಜುಲೈ 16 ರಿಂದ ಜುಲೈ 18 ಶನಿವಾರದವರೆಗೆ ಸೀಲ್‌ಡೌನ್‌ ಮಾಡಲಾಗಿತ್ತು. ಈ ವೇಳೆ ಸಹಾಯಕ ಎಂಜಿನಿಯರ್‌ ತಮ್ಮ ವ್ಯಾಪ್ತಿಯಲ್ಲಿನ ವಿದ್ಯುತ್‌ ವಿತರಣೆಗೆ ಸಂಬಂಧಿಸಿದ ತುರ್ತು ಕರ್ತವ್ಯವನ್ನು ನಿರ್ವಹಿಸಲು ಸೂಕ್ತಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡು ಸರ್‌ ಎಂ.ವಿ. ಎಂಯುಎಸ್‌ಎಸ್‌ ಅಲ್ಲಿ ಕರ್ತವ್ಯ ನಿರ್ವಹಿಸುವಂತೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಆದೇಶ ನೀಡಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ