Breaking News
Home / ಜಿಲ್ಲೆ / ನಿಮ್ಮ ಮನೆ ಮಹಡಿಗಳಿಂದಲೇ ನೋಡಿ ಸಂಭ್ರಮಿಸುವಂತೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕರೆ ನೀಡಿದೆ.

ನಿಮ್ಮ ಮನೆ ಮಹಡಿಗಳಿಂದಲೇ ನೋಡಿ ಸಂಭ್ರಮಿಸುವಂತೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕರೆ ನೀಡಿದೆ.

Spread the love

ಬೆಳಗಾವಿ: ನಾಳೆ ವಿಶ್ವವು 2020 ನೇ ವರ್ಷದ ಮೊದಲ ಸೂರ್ಯಗ್ರಹಣ( Solar Eclipse) ಸಾಕ್ಷಿಯಾಗಲಿದೆ. ಈ ಹಿನ್ನೆಲೆ ಮೌಢ್ಯಕ್ಕೆ ಮೊರೆ ಹೋಗದೆ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವ ಅದ್ಭುತ ದೃಶ್ಯವನ್ನು ನಿಮ್ಮ ಮನೆ ಮಹಡಿಗಳಿಂದಲೇ ನೋಡಿ ಸಂಭ್ರಮಿಸುವಂತೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕರೆ ನೀಡಿದೆ.

ಅಂದು ಗ್ರಹಣವು ಉತ್ತುಂಗದಲ್ಲಿದ್ದಾಗ ಸೂರ್ಯನು ಹೊಳೆಯುವ ಕಂಕಣ ಅಥವಾ ಉಂಗುರದಂತೆ ಕಾಣುತ್ತಾನೆ. ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡಲಾಗುತ್ತದೆ.
ಈ ಗ್ರಹಣವು ಪೂರ್ಣ ಸೂರ್ಯಗ್ರಹಣಕ್ಕಿಂತ ಭಿನ್ನವಾಗಿದೆ. ಇದು ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ, ಭಾರತ ಮತ್ತು ಚೀನಾ ಸೇರಿದಂತೆ ಆಫ್ರಿಕಾದ ಕೆಲವು ಭಾಗಗಳಲ್ಲಿ ಕಾಣಿಸುತ್ತದೆ. ಈ ಸೂರ್ಯಗ್ರಹಣವನ್ನು ಭಾರತದಲ್ಲಿ ಆರಾಮವಾಗಿ ಕಾಣಬಹುದು. 1995 ರ ಅಕ್ಟೋಬರ್‌ನಲ್ಲಿ ಆದಂತೆ ಈ ಗ್ರಹಣದ ದಿನ ಹಗಲು ಕತ್ತಲೆಯಾಗಲಿದೆಯಂತೆ.

ಗ್ರಹಣದ ಗೋಚರಿಸುವ ಅವಧಿ:

ಭಾರತದಲ್ಲಿ ಸೂರ್ಯಗ್ರಹಣದ ಅವಧಿ ಜೂನ್ 20 ರ ರಾತ್ರಿ 10: 20 ರಿಂದ ಪ್ರಾರಂಭವಾಗಲಿದೆ.

ಜೂನ್ 21ರ ಬೆಳಿಗ್ಗೆ 9:15ಕ್ಕೆ ಭಾಗಶಃ ಗ್ರಹಣ ಪ್ರಾರಂಭವಾಗುತ್ತದೆ.

ಜೂನ್ 21, ಬೆಳಿಗ್ಗೆ 10:17 ಕ್ಕೆ ಪೂರ್ಣ ಸೂರ್ಯ ಗ್ರಹಣ ಆಗಲಿದೆಯಂತೆ.

21 ಜೂನ್ ಮಧ್ಯಾಹ್ನ 12 ಗಂಟೆ 10 ನಿಮಿಷಗಳು ಗರಿಷ್ಠ ಗ್ರಹಣ ಉಳಿಯುತ್ತದೆ.

ಸಂಪೂರ್ಣ ಗ್ರಹಣ ಕೊನೆಗೊಳ್ಳುವ ಸಮಯ – ಜೂನ್ 21ರ ಮಧ್ಯಾಹ್ನ 2 ಗಂಟೆಗೆ

ಭಾಗಶಃ ಗ್ರಹಣ ಜೂನ್ 21ರ ಮಧ್ಯಾಹ್ನ 3:00 ಕೊನೆಗೊಳ್ಳುತ್ತದೆ.

ಗ್ರಹಣ ವೀಕ್ಷಣೆಗೆ ಬೈನಾಕ್ಯುಲರ್ ಬಳಸಿ:

ಗ್ರಹಣ ಸಮಯದಲ್ಲಿ ಕೆಲಸಗಳನ್ನು ಮಾಡಬಹುದು. ಕಣ್ಣಿಗೆ ಹಾನಿಯನ್ನುಂಟು ಮಾಡುವ ಸಂಭವ ಇರುವ ಕಾರಣ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಎಕ್ಲಿಪ್ಸ್ ವೀಕ್ಷಣೆಗೆ ಬೈನಾಕ್ಯುಲರ್‌ಗಳು, ದೂರದರ್ಶಕಗಳು ಅಥವಾ ಸರಿಯಾದ ಫಿಲ್ಟರ್‌ಗಳನ್ನು ಹೊಂದಿರುವ ಆಪ್ಟಿಕಲ್ ಕ್ಯಾಮೆರಾಗಳನ್ನು ಬಳಸಬೇಕು. ಅಥವಾ ಕನ್ನಡಿ, ರಟ್ಟು, ಇತ್ಯಾದಿ ದೃಢಿಕೃತ ಸಾಧನಗಳನ್ನು ಬಳಸಿ ನೋಡಬಹುದು.

ಅವೈಜ್ಞಾನಿಕ ಆಚರಣೆಯಿಂದ ದೂರವಿರಿ:

ಈ ವಿಷ್ಮಯಗಳ ಹಿಂದಿನ ಸತ್ಯಗಳನ್ನು ಮಕ್ಕಳಿಗೆ, ಆಸಕ್ತರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಗ್ರಹಣ ಸಂದರ್ಭದಲ್ಲಿ ಆಹಾರ, ಹಣ್ಣು, ಪಾನಿಯ ಸೇವನೆಯ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ಕೆಲವರು ಈ ಸಂದರ್ಭದಲ್ಲಿ ಮೌಢ್ಯ ಪ್ರಸಾರಕ್ಕೆ ತೊಡಗುತ್ತಾರೆ ಎಚ್ಚರವಾಗಿರಿ. ಕೆಲವರು ಈ ಗ್ರಹಣದಂದು ಭಯಭೀತಿ ಹುಟ್ಟಿಸಲು ಪೂಜೆ-ಪುನಸ್ಕಾರ, ಮನೆಯಿಂದ ಹೊರ ಬಾರದಿರುವುದು, ರಾಶಿ ಫಲ ಭಯ ಹುಟ್ಟಿಸುವುದು, ನೀರು, ಆಹಾರ ಪದಾರ್ಥ ಹೊರ ಚೆಲ್ಲುವುದು, ಇತ್ಯಾದಿ ಅವೈಜ್ಞಾನಿಕ ಆಚರಣೆ ಮಾಡುತ್ತಾರೆ. ಇವುಗಳನ್ನು ನಂಬಬಾರದು.

ಈ ವರ್ಷ ಸೂರ್ಯ ಮತ್ತು ಚಂದ್ರ ಗ್ರಹಣ ಸೇರಿದಂತೆ ಒಟ್ಟು 6 ಗ್ರಹಣಗಳಿವೆ. ಇದರಲ್ಲಿ ಎರಡು ಗ್ರಹಣಗಳು ಕಳೆದಿವೆ, ಮೂರನೆಯದು ಜೂನ್ 21 ರಂದು ನಡೆಯಲಿದೆ. ನಾಲ್ಕನೆಯದಾಗಿ ಜುಲೈ 5 ರಂದು ಚಂದ್ರಗ್ರಹಣ ಸಂಭವಿಸುತ್ತದೆ. ಐದನೆಯದಾಗಿ ಚಂದ್ರ ಗ್ರಹಣವು ನವೆಂಬರ್ 30 ರಂದು ಸಂಭವಿಸುತ್ತದೆ, ಇದು ವರ್ಷದ ಮೂರನೇ ಚಂದ್ರ ಗ್ರಹಣವಾಗಿರುತ್ತದೆ. ಮತ್ತು ಆರನೇ ಗ್ರಹಣವು ಡಿಸೆಂಬರ್ 14 ರಂದು ಸಂಭವಿಸುತ್ತದೆ, ಇದು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ವಾಗಿರುತ್ತದೆ.

ಈ ಸೂರ್ಯ ಗ್ರಹಣವನ್ನು ಪ್ರತಿ ಗ್ರಾಮ ಮಟ್ಟದಲ್ಲಿ ಆಚರಿಸಲು ಮಾನವ ಬಂಧುತ್ವ ವೇದಿಕೆ- ಕರ್ನಾಟಕ
ರಾಜ್ಯ ಸಮಿತಿಯು ಕರೆ ನೀಡುತ್ತದೆ. ಸ್ಥಳೀಯ ಸಂಘಸಂಸ್ಥೆಗಳು ಮತ್ತು ಆಸಕ್ತರನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲು ಕರೆ ನೀಡಲಾಗಿದೆ.

21 ಜೂನ್ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಎದುರು ಪ್ರಗತಿಪರ ಸಂಘಟನೆಗಳಿಂದ ಸೂರ್ಯಗ್ರಹಣ ವೀಕ್ಷಣೆ ಮತ್ತು ಆಹಾರ ಸ್ವೀಕಾರ ನಡೆಯಲಿದೆ. ಹೀಗೆ ಎಲ್ಲಾ ಜಿಲ್ಲಾ, ತಾಲ್ಲೂಕು, ಗ್ರಾಮ ಗಳಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ಜರುಗಲಿದೆ. ಸೂರ್ಯ ಗ್ರಹಣ ಸಂಭ್ರಮಿಸೋಣ. ವಿಜ್ಞಾನ ಪಸರಿಸೋಣ- ರವೀಂದ್ರ ನಾಯಕ್, ರಾಜ್ಯ ಸಂಚಾಲಕರು, ಮಾನವ ಬಂಧುತ್ವ ವೇದಿಕೆ- ಕರ್ನಾಟಕ ರಾಜ್ಯ ಸಮಿತಿ


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ