Home / ಜಿಲ್ಲೆ / ಬೆಳಗಾವಿ / ಕೆಲವು ಶಾಸಕರು ಮಂತ್ರಿಯಾಗಲೂ ಬೆಂಗಳೂರಿನಲ್ಲಿ ಠಿಖಾಣಿ ಹೂಡಿದ್ದಾರೆ.ಶಾಸಕ ಅಭಯ ಪಾಟೀಲ ಮಾತ್ರ ಬೆಳಗಿನ ಜಾವ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಕೆಲವು ಶಾಸಕರು ಮಂತ್ರಿಯಾಗಲೂ ಬೆಂಗಳೂರಿನಲ್ಲಿ ಠಿಖಾಣಿ ಹೂಡಿದ್ದಾರೆ.ಶಾಸಕ ಅಭಯ ಪಾಟೀಲ ಮಾತ್ರ ಬೆಳಗಿನ ಜಾವ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

Spread the love

ಬೆಳಗಾವಿ- ರಾಜ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಜನಜೀವನ ಅಸ್ತವ್ಯಸ್ತವಾಗಿದ್ದು ಜೊತೆಗೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಆದರೆ ಕೆಲವು ಶಾಸಕರು ಮಂತ್ರಿಯಾಗಲೂ ಬೆಂಗಳೂರಿನಲ್ಲಿ ಠಿಖಾಣಿ ಹೂಡಿದ್ದಾರೆ.ಶಾಸಕ ಅಭಯ ಪಾಟೀಲ ಮಾತ್ರ ಬೆಳಗಿನ ಜಾವ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಇಂದು ಬೆಳಗಿನ ಜಾವ ಕೈಯಲ್ಲಿ ಛತ್ರಿ ಹಿಡಿದು ನಡೆದಾಡಿಕೊಂಡೇ ಕ್ಷೇತ್ರ ದರ್ಶನ ಮಾಡಿ, ಮಳೆಯಿಂದ ಆಗಿರುವ ಅನಾಹುತಗಳನ್ನು, ಸಮಸ್ಯೆಗಳನ್ನು ಖುದ್ದಾಗಿ ಪರಶೀಲಿಸಿ, ಜನರ ಸಮಸ್ಯೆಗಳನ್ನು ಆಲಿಸಿ,ಸಮಸ್ಯೆ ಗಳನ್ನು ಸ್ಥಳದಲ್ಲೇ ಬಗೆಹರಿಸುತ್ತಿರುವ ಶಾಸಕ ಅಭಯ ಪಾಟೀಲ ನಿಜವಾಗಿಯೂ ಬೆಳಗಾವಿ ದಕ್ಷಿಣ ಕ್ಷೇತ್ರದ ಆಪತ್ಬಾಂಧವ,ಎಂದು ತೋರಿಸಿದ್ದಾರೆ.

ಕಳೆದ ಒಂದು ವಾರದಿಂದ ಬೆಳಗಾವಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ವಿಪರೀತ ಮಳೆಯಿಂದಾಗಿ ,ನೀರು ಮನೆಗಳಿಗೆ ನುಗ್ಗುತ್ತಿದೆ. ನಾಲೆಗಳು ಉಕ್ಕಿ ಹರಿದು ನೀರು ಹೊಲಗದ್ದೆಗಳಿಗೆ ನುಗ್ಗುತ್ತಿದೆ. ಚರಂಡಿಗಳು ತುಂಬಿ ಹರಿದು, ಕೆಲವು ರಸ್ತೆಗಳು ಜಲಾವೃತಗೊಂಡಿದ್ದು, ಶಾಸಕ ಅಭಯ ಪಾಟೀಲ ಮಹಾನಗರ ಪಾಲಿಕೆಯ ಸಿಬ್ಬಂಧಿಗಳನ್ನು ಕರೆಯಿಸಿ, ಸಮಸ್ಯೆಯನ್ನು ಖುದ್ದಾಗಿ ಪರಶೀಲಿಸಿ ಸುರಿಯುತ್ತಿರುವ ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಸ್ಥಳೀಯ ಜನರ ಜೊತೆ ಬೆರೆತು ದಕ್ಷಿಣ ಮತಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕ ಅಭಯ ಪಾಟೀಲ ಶ್ರಮಿಸುತ್ತಿದ್ದಾರೆ.

ಒಂದಕಡೆ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಮಂತ್ರಿಯಾಗಲು ಲಾಭಿ ಮಾಡಲು ಬಹಳಷ್ಟು ಜನ ಶಾಸಕರು ಬೆಂಗಳೂರು, ದೆಹಲಿಗೆ ದೌಡಾಯಿಸಿದ್ದಾರೆ. ಆದ್ರೆ ಶಾಸಕ ಅಭಯ ಪಾಟೀಲ ಮಾತ್ರ ಕ್ಷೇತ್ರದಲ್ಲಿ ಠಿಖಾಣಿ ಹೂಡಿ,ಬೆಳಗಿನ ಜಾವದಿಂದಲೇ ಜನಸೇವಕರಾಗಿ ಜನರ ಜೊತೆಗಿದ್ದಾರೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ