Breaking News
Home / ಜಿಲ್ಲೆ / ಬೆಂಗಳೂರು / ಗಂಟೆಗೊಮ್ಮೆ ಕರೆ ಮಾಡಿ ಸಿಕ್ಕಿಬಿದ್ದಿದ್ದರು ರೇಖಾ ಕದಿರೇಶ್ ಹಂತಕರು: ಮತ್ತೆ ನಾಲ್ವರ ಬಂಧನ

ಗಂಟೆಗೊಮ್ಮೆ ಕರೆ ಮಾಡಿ ಸಿಕ್ಕಿಬಿದ್ದಿದ್ದರು ರೇಖಾ ಕದಿರೇಶ್ ಹಂತಕರು: ಮತ್ತೆ ನಾಲ್ವರ ಬಂಧನ

Spread the love

ಬೆಂಗಳೂರು: ಛಲವಾದಿಪಾಳ್ಯದ ಬಿಜೆಪಿಯ ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಅವರನ್ನು ನಡು ಬೀದಿಯಲ್ಲಿ ಭೀಕರವಾಗಿ ಕೊಲೆಗೈದಿದ್ದ ಇಬ್ಬರು ಕಿಂಗ್‌ ಪಿನ್‌ ಗಳಿಗೆ ಪಶ್ಚಿಮ ವಿಭಾಗ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ಅಲ್ಲದೆ ರಾತ್ರಿ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಛಲವಾದಿ ಪಾಳ್ಯ ನಿವಾಸಿಗಳಾದ ಪೀಟರ್‌(45) ಮತ್ತು ಸೂರ್ಯ(20) ಎಂಬವರು ಎಡಗಾಲಿಗೆ ಗುಂಡೇಟು ಬಿದ್ದಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ರಾತ್ರಿ ಕದಿರೇಶ್‌ ಸಹೋದರಿ ಮಾಲಾ ಪುತ್ರ ಅರುಳ್‌, ಸ್ಥಳೀಯ ನಿವಾಸಿ ಅಜಯ್‌, ಪುರುಷೋತ್ತಮ್‌ ಮತ್ತು ಸ್ಟೀಫನ್‌ ಎಂಬವರನ್ನು ಬಂಧಿಸಲಾಗಿದೆ.

ಗುರುವಾರ ಬೆಳಗ್ಗೆ 10.10ರ ಸುಮಾರಿಗೆ ಛಲವಾದಿ ಪಾಳ್ಯದ ಅವರ ಕಚೇರಿ ಮುಂಭಾಗವೇ ರೇಖಾ ಕದಿರೇಶ್‌ ಅವರನ್ನು ಬೈಕ್‌ನಲ್ಲಿ ಬಂದು ಪೀಟರ್‌ ಮತ್ತು ಸೂರ್ಯ ಚಾಕುವಿನಿಂದ 15ಕ್ಕೂ ಅಧಿಕ ಬಾರಿ ಇರಿದು ಪರಾರಿಯಾಗಿ ತಲೆಮರೆಸಿಕೊಂಡಿದ್ದರು

ತಮಿಳುನಾಡಿಗೆ ಹೋಗಲು ವಿಫಲಯತ್ನ: ಆರೋಪಿಗಳು ಕೃತ್ಯ ಎಸಗಿದ ಬಳಿಕ ನಗರದ ಕೆಲ ರೌಡಿಶೀಟರ್‌ಗಳ ನೆರವು ಪಡೆದು ಎಲೆಕ್ಟ್ರಾನಿಕ್‌ ಸಿಟಿ, ಹೆಬ್ಟಾಳ, ಯಶವಂತಪುರ ಸೇರಿ ವಿವಿಧೆಡೆ ಆಟೋದಲ್ಲಿ ಸುತ್ತಾಡಿದ್ದಾರೆ. ಅಷ್ಟರಲ್ಲಿ ಪೊಲೀಸರು ನಗರದಲ್ಲಿ ನಾಕಾಬಂದಿ ಹಾಕಿದ್ದು, ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿದ್ದರು. ಇದೇ ವೇಳೆ ಆರೋಪಿಗಳು ತಮಿಳುನಾಡಿಗೆ ಹೋಗಲು ಯತ್ನಿಸಿದ್ದರು. ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಂದು ತಮಿಳುನಾಡಿಗೆ ಹೋಗುವ ಬಸ್‌ಗಳ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಬಸ್‌ಗಳ ಸಂಚಾರ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ನೇರವಾಗಿ ಬನಶಂಕರಿ ಕಡೆ ಹೋಗಿ ಅಲ್ಲಿ ಪರಿಚಯಸ್ಥರೊಬ್ಬರ ನೆರವು ಪಡೆದು ಬಳಿಕ ಕಾಮಾಕ್ಷಿಪಾಳ್ಯದ ನಿರ್ಜನ ಪ್ರದೇಶದಲ್ಲಿ ಅಡಗಿಕುಳಿತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ನೆಟ್ ವರ್ಕ್ ಬಲೆಗೆ ಬಿದ್ದರು: ಕೃತ್ಯದ ಬಳಿಕ ಆರೋಪಿಗಳು ಫೋನ್‌ ಸ್ವಿಚ್‌ ಆಫ್‌ ಮಾಡಿದ್ದರು. ಈ ಮಧ್ಯೆ ಛಲವಾದಿಪಾಳ್ಯದಲ್ಲಿ ನಡೆಯುತ್ತಿದ್ದ ಪ್ರಕರಣದ ಪ್ರತಿ ಮಾಹಿತಿ ಸಂಗ್ರಹಿಸಲು ಗಂಟೆಗೊಮ್ಮೆ ಕರೆ ಮಾಡಿ ಪರಿಚಯಸ್ಥರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳ ನೆಟ್‌ವರ್ಕ್‌ ಶೋಧಿಸಿದಾಗ ಕೆಲವೊಮ್ಮೆ ಫೋನ್‌ ಆಫ್‌ ಆಗುತ್ತಿತ್ತು. ಇನ್ನುಕೆಲವೊಮ್ಮ ಆನ್‌ ಆಗುತ್ತಿತ್ತು. ಅಂತಿಮವಾಗಿ ತಡರಾತ್ರಿ 3.30ರ ಸುಮಾರಿಗೆ ಬಜಾಜ್‌ ಗ್ರೌಂಡ್‌ ನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದರು.

ಹಣಕಾಸು, ವೈಯಕ್ತಿಕ ವಿಚಾರಕ್ಕೆಕೃತ್ಯ: ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ರೇಖಾ ಅವರನ್ನುಕೊಲೆಗೈಯಲು ಹಣಕಾಸು ಮತ್ತು ವೈಯಕ್ತಿಕ ವಿಚಾರವೇಕಾರಣಎಂದು ಗೊತ್ತಾಗಿದೆ. ಪೀಟರ್‌, ಸೂರ್ಯ, ಸ್ಟೀಫನ್‌ ಕದಿರೇಶ್‌ ಜತೆ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆತನ ಪ್ರತಿ ಹಂತದಲ್ಲೂ ನೆರವು ನೀಡಿದ್ದರು. ಆದರೆ, ಕದಿರೇಶ್‌ ಕೊಲೆಯಾದ ಬಳಿಕವೂ ರೇಖಾಗೆ ಮೂವರು ಸಹಾಯಕರಾಗಿದ್ದರು. ಆದರೆ, ರೇಖಾ, ಮೂವರಿಗೆ ಸರಿಯಾಗಿ ಹಣಕೊಡುತ್ತಿರಲಿಲ್ಲ. ಅವರ ಕಷ್ಟಗಳಿಗೆ ಸ್ಪಂದಿಸುತ್ತಿರಲಿಲ್ಲ. ಈ ಬಗ್ಗೆ ರೇಖಾ ಅವರನ್ನು ಪ್ರಶ್ನಿಸಿದಾಗ ನಿರ್ಲಕ್ಷ್ಯದ ಮಾತುಗಳನ್ನಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ