Breaking News
Home / ಜಿಲ್ಲೆ / ಬೆಂಗಳೂರು / ಬಗೆದಷ್ಟೂ ಆಳ ಸಿಮ್​ ಕಿಟ್​ ದಂಧೆಯ ಜಾಲ: ದಿನವೊಂದಕ್ಕೆ 15 ಲಕ್ಷ ಸಂಪಾದಿಸ್ತಿದ್ದ ಆರೋಪಿ

ಬಗೆದಷ್ಟೂ ಆಳ ಸಿಮ್​ ಕಿಟ್​ ದಂಧೆಯ ಜಾಲ: ದಿನವೊಂದಕ್ಕೆ 15 ಲಕ್ಷ ಸಂಪಾದಿಸ್ತಿದ್ದ ಆರೋಪಿ

Spread the love

ಬೆಂಗಳೂರು: ಇತ್ತೀಚೆಗೆ ಬೆಳಕಿಗೆ ಬಂದ ಭಾರೀ ಸಿಮ್ ಕಿಟ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲಿಟರಿ ಇಂಟಲಿಜೆನ್ಸ್ ರಹಸ್ಯ ತನಿಖೆ ನಡೆಸಿದ್ದು ರೋಪಿಗಳ ಪ್ಲ್ಯಾನಿಂಗ್​ ಸೇರಿದಂತೆ ತನಿಖೆಯ ಸಂಪೂರ್ಣ ಮಾಹಿತಿಯನ್ನ ಪೊಲೀಸರಿಗೆ ರವಾನೆ ಮಾಡಿದೆ ಎನ್ನಲಾಗಿದೆ.

ಎ1 ಇಬ್ರಾಹಿಂ 10 ನೇ ಕ್ಲಾಸ್ ಓದಿದ್ರೆ.. ಎ2 ಗೌತಮ್ ಎಂಬಿಎ ಪಾಸ್ ಮಾಡಿದ್ದಾನೆ. ಹೆಚ್ಚಿನ ಹಣಕ್ಕೆ ಆಸೆ ಬಿದ್ದು ಗೌತಮ್ ಈ ಕೃತ್ಯಕ್ಕೆ ಇಳಿದಿದ್ದ ಎನ್ನಲಾಗಿದೆ. ಎ1 ಆರೋಪಿಯ ದಿನದ ಆದಾಯವೇ 15 ಲಕ್ಷ ಎನ್ನಲಾಗಿದೆ.

ಆರೋಪಿಗಳು ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಮೂಲಕ ಕರೆಗಳನ್ನ ಕನ್ವರ್ಟ್ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು.. ಮೊದಲು ಕೇರಳದಲ್ಲಿ ಇಬ್ರಾಹಂ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದ. ಅಲ್ಲಿಂದ ಹಲವರನ್ನ ಪರಿಚಯ ಮಾಡಿಕೊಂಡಿದ್ದಾರೆ. ಅವರಿಗೆ ಸಿಮ್‌ಕಿಟ್ ದಂಧೆ ಬಗ್ಗೆ ವಿವರಿಸಿ ಇನ್ವೆಸ್ಟ್ ಮಾಡಲು ತಿಳಿಸಿದ್ದಾನಂತೆ. ಅದರಂತೆ ದುಬೈನಲ್ಲೂ ಇದೇ ರೀತಿಯ ದಂಧೆಯ ಬಗ್ಗೆ ಮಾಹಿತಿ ಪಡೆದು ಅವರ ಜೊತೆ ಸೇರಿ ಇಬ್ರಾಹಿಂ ಸಿಮ್ ಕಿಟ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಯಾರಿಗೂ ಅನುಮಾನ ಬಾರದಂತೆ ಅಪಾರ್ಟ್ ಮೆಂಟ್​ಗಳಲ್ಲಿನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಮಾತ್ರ ರೂಂ ಹುಡುಕುತ್ತಿದ್ದ ಆರೋಪಿಗಳು ಅಪಾರ್ಟ್​ಮೆಂಟ್​ನ ಮಾಲೀಕ ಹತ್ತಿರದಲ್ಲಿ ವಾಸವಿರದ, ಸೆಕ್ಯೂರಿಟಿ ಇರದ ಅಪಾರ್ಟ್​​ಮೆಂಟ್​ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ.

ಇನ್ನು ಆಯಕ್ಟಿವೇಟ್ ಆಗಿರುವ ಡಿಆಯಕ್ಟಿವೇಟ್ ಸಿಮ್ ಮಾನಿಟರ್ ಮಾಡೋನಿಗೆ 90 ಸಾವಿರ ಸಂಬಳ ನೀಡಲಾಗ್ತಿತ್ತಂತೆ. ಆರೋಪಿಗಳು ಪ್ರತಿ 15 ದಿನಕ್ಕೊಮ್ಮೆ ಡಿಆಯಕ್ಟಿವೇಟ್ ಸಿಮ್ ನ ಚೇಂಜ್ ಮಾಡುವುದು.. ಒಂದು ಬಾರಿಗೆ 90-92 ಸಿಮ್ ಆಯಕ್ಟಿವೇಟ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಮಾಹಿತಿಯನ್ನ ಮಿಲಿಟರಿ ಇಂಟಲಿಜೆನ್ಸ್ ಸಿಸಿಬಿಗೆ ನೀಡಿದೆಯಂತೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ