Breaking News
Home / Uncategorized / ಸಿ.ಪಿ ಯೋಗೇಶ್ವರ್ ಮೇಲೆ ಕಿಡಿಕಾರಿದ ಸಚಿವ ಬಿ.ಸಿ ಪಾಟೀಲ್

ಸಿ.ಪಿ ಯೋಗೇಶ್ವರ್ ಮೇಲೆ ಕಿಡಿಕಾರಿದ ಸಚಿವ ಬಿ.ಸಿ ಪಾಟೀಲ್

Spread the love

ಮೈಸೂರು: ‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಅಲ್ಲ. ಇಡೀ ಜಗತ್ತು ಕೊರೋನಾ ಸೋಂಕಿನಿಂದ ತತ್ತರಿಸುವ ಕಾರಣ ಕೋವಿಡ್‌ ನಿರ್ವಹಣೆಗೆ ಆದ್ಯತೆ ಕಲ್ಪಿಸಬೇಕು. ರಾಜಕೀಯ ಆ ಬಳಿಕ ಮಾಡೋಣ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ‌ ಸೊಸೆ ಬಂದ ಬಳಿಕ ಆಕೆ ಮನೆ ಮಗಳು ಇದ್ದಂತೆ. ಮನೆಯಲ್ಲಿ‌ ಅಣ್ಣತಮ್ಮಂದಿರ ನಡುವೆ ವ್ಯತ್ಯಾಸಗಳು ಇರುತ್ತದೆ. ಅದೇ ರೀತಿ ಪಕ್ಷದೊಳಗೆ ಟೀಕೆ, ಟಿಪ್ಪಣಿಗಳು ಸಹಜ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲಿದ್ದಾರೆ’ ಎಂದರು.

‘ಸಿ.ಪಿ.ಯೋಗೇಶ್ವರ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ. ಸುಮ್ಮನೆ ತೋಚಿದಂತೆ ಮಾತನಾಡುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಸಹಿ ಸಂಗ್ರಹ ಅಭಿಯಾನ ಸರಿಯಲ್ಲ. ಈ ವಿಚಾರದಲ್ಲಿ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಏನೇ ಗೊಂದಲಗಳು ಇದ್ದರೂ, ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ಚರ್ಚೆ ನಡೆಸಬಾರದು. ಬಾಂಬೆ ಟೀಮ್ ಎಂಬುದು ಈ ಹಿಂದೆ ಇತ್ತು, ಈಗ ಇಲ್ಲ. ಎಲ್ಲರೂ ಜತೆಯಾಗಿದ್ದೇವೆ’ ಎಂದರು.


Spread the love

About Laxminews 24x7

Check Also

ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ..? ಇಲ್ಲಿದೆ ನೋಡಿ ಮಾಹಿತಿ

Spread the love ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಆಹಾರ ಇಲಾಖೆ ಮುಖ್ಯವಾದ ಮಾಹಿತಿ ನೀಡಿದೆ. ಬೆಂಗಳೂರು ಒನ್, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ