Breaking News
Home / ಜಿಲ್ಲೆ / ಬೆಂಗಳೂರು / ಹೃದಯ ತಜ್ಞ ಅಂತ್ಹೇಳಿ ಮಹಿಳೆಗೆ ಫೇಕ್​​ ಡಾಕ್ಟರ್​​ನಿಂದ ₹80 ಲಕ್ಷ ದೋಖಾ

ಹೃದಯ ತಜ್ಞ ಅಂತ್ಹೇಳಿ ಮಹಿಳೆಗೆ ಫೇಕ್​​ ಡಾಕ್ಟರ್​​ನಿಂದ ₹80 ಲಕ್ಷ ದೋಖಾ

Spread the love

ಬೆಂಗಳೂರು: ಹೃದಯ ತಜ್ಞ ಅಂತ ಮಹಿಳೆ ಮುಂದೆ ಪೋಸ್​​ ಕೊಟ್ಟಿದ್ದ ನಕಲಿ ವೈದ್ಯನೊಬ್ಬ ಬರೋಬ್ಬರಿ 80 ಲಕ್ಷ ರೂಪಾಯಿ ಹಣ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮಾಬಿಸ್ ಹಾರ್ಮನ್ ಎಂಬಾತ ಮಹಿಳೆಗೆ ವಂಚನೆ ಮಾಡಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಗಂಡನನ್ನು ಕಳೆದುಕೊಂಡಿದ್ದ 50 ವರ್ಷದ ಮಹಿಳೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಇನ್​​​ಸ್ಟಾಗ್ರಾಂನಲ್ಲಿ ಹೃದಯ ತಜ್ಞರ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಮಹಿಳೆಗೆ ವಂಚಕ ಮಾಬಿಸ್ ಹಾರ್ಮನ್ ಪ್ರೊಫೈಲ್ ಸಿಕ್ಕಿದೆ. ಈ ವೇಳೆ ತನ್ನನ್ನ ತಾನು ಹೃದಯ ತಜ್ಞ ಅಂತ ಪರಿಚಯಿಸಿಕೊಂಡಿದ್ದ ಆರೋಪಿ ಮಹಿಳೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಸಲಹೆಗಳನ್ನು ನೀಡಿದ್ದ. ಫೇಕ್ ಡಾಕ್ಟರ್ ಎಂದು ತಿಳಿಯದೆ ಆತನನ್ನು ನಂಬಿದ ಮಹಿಳೆ, ಎಲ್ಲಾ ಸಲಹೆಗಳನ್ನು ಪಾಲಿಸುತ್ತಿದ್ದರು. ಈ ನಡುವೆ ಇನ್​ಸ್ಟಾದಿಂದ ನೇರವಾಗಿ ವಾಟ್ಸಾಪ್​ನಲ್ಲಿ ವಂಚಕ ಕನೆಕ್ಟ್​ ಆಗಿದ್ದ.

ಅಲ್ಲಿಯೂ ಆಕೆಗೆ ಸಲಹೆ ನೀಡುವಂತೆ ನಾಟಕವಾಡಿದ್ದ ಮಾವಿಸ್, ಇದಕ್ಕಿದಂತೆ ಮಹಿಳೆಗೆ ಗೊತ್ತಿಲ್ಲದಂತೆ ಗಿಫ್ಟ್ ಕಳಿಸಿದ್ದ. ಈ ವೇಳೆ ಕಸ್ಟಮ್ಸ್​ ಅಧಿಕಾರಿ ಅಂತಾ ಕರೆ ಮಾಡಿದ್ದ ಮಹಿಳೆಯೊಬ್ಬರು, ಯುಕೆಯಿಂದ ಕರೆನ್ಸಿ ಮತ್ತು ಗಿಫ್ಟ್ ನಿಮ್ಮ ಹೆಸರಿನಲ್ಲಿ ಬಂದಿದೆ. ಮಾವಿಸ್ ಎನ್ನುವವರು ಕಳುಹಿಸಿದ್ದಾರೆ ಎಂದು ತಿಳಿಸಿದ್ದರು.

ಕೂಡಲೇ ಡಾಕ್ಟರ್​​ಗೆ ಕರೆ ಮಾಡಿದ್ದ ಮಹಿಳೆ ಇದೆಲ್ಲಾ ಏನು? ಎಂದು ಪ್ರಶ್ನೆ ಮಾಡಿದ್ದರು. ಒಬ್ಬ ಸ್ನೇಹಿತನಾಗಿ ಗಿಫ್ಟ್​ ಕಳುಹಿಸಿದ್ದೇನೆ ದಯವಿಟ್ಟು ಸ್ವೀಕರಿಸಿ ಎಂದು ಆತ ಮನವಿ ಮಾಡಿದ್ದ. ಇದರೊಂದಿಗೆ ಮಹಿಳೆ ಗಿಫ್ಟ್ ಸ್ವೀಕರಿಸಲು ಮುಂದಾಗಿದ್ದರು. ಎರಡು ದಿನದ ನಂತರ ಮಹಿಳೆಗೆ ಮತ್ತೆ ಕಸ್ಟಮ್ಸ್ ಎಂದು ಹೇಳಿ ಕರೆ ಮಾಡಿ, ನೀವು ತುಂಬಾ ದಿನವಾದ್ರೂ ಪಾರ್ಸೆಲ್​ ಸ್ವೀಕರಿಸಿಲ್ಲ. ವಿತ್ತ ಸಚಿವಾಲಯದಿಂದ ನಿಮ್ಮ ಹೆಸರಿಗೆ ನೋಟಿಸ್ ಬಂದಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಫೇಕ್​ ಲೆಟರ್ ತೋರಿಸಿದ್ದರು.

ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಬರುತ್ತಿದಂತೆ ಗಾಬರಿಗೊಂಡಿದ್ದ ಮಹಿಳೆ ಹಣ ನೀಡಲು ಒಪ್ಪಿದ್ದರು. ಆ ವೇಳೆ ಗಿಫ್ಟ್ ಜೊತೆಗೆ ಕರೆನ್ಸಿ ಕೂಡ ಇರುವುದರಿಂದ 60 ಲಕ್ಷ ರೂಪಾಯಿ ಆಗುತ್ತೆ ಎಂದಿದ್ದರು. ಆಗ ಹಣ ಕೊಟ್ಟ ಬಳಿಕ ಕರೆನ್ಸಿ ಎಕ್ಸ್​ಚೇಂಜ್ ಮಾಡುವ ವೇಳೆಗೆ 20 ಲಕ್ಷ ರೂಪಾಯಿ ಹೆಚ್ಚಾಗಿದೆ ಎಂದು ಒಟ್ಟು 80 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.

ಆದರೆ ಹಣ ನೀಡಿದ ಬಳಿಕವೂ ಗಿಫ್ಟ್​ ಹಾಗೂ ಕರೆನ್ಸಿ ಸಿಗದ ಹಿನ್ನೆಲೆಯಲ್ಲಿ ಮೋಸ ಹೋಗಿರುವುದು ಅರಿವಾದ ಮಹಿಳೆ ಬನಶಂಕರಿ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ