Home / ರಾಜಕೀಯ / ಧಾರಾವಾಹಿಯಲ್ಲಿ ‘ಅತ್ತಿಗೆ-ಮೈದುನ’ ನಿಜಜೀವನದಲ್ಲಿ ಪತಿ-ಪತ್ನಿ: ಧಾರಾವಾಹಿ ಬ್ಯಾನ್ ಮಾಡಲು ಒತ್ತಾಯ

ಧಾರಾವಾಹಿಯಲ್ಲಿ ‘ಅತ್ತಿಗೆ-ಮೈದುನ’ ನಿಜಜೀವನದಲ್ಲಿ ಪತಿ-ಪತ್ನಿ: ಧಾರಾವಾಹಿ ಬ್ಯಾನ್ ಮಾಡಲು ಒತ್ತಾಯ

Spread the love

ಧಾರಾವಾಹಿಯಲ್ಲಿ ಅಕ್ಕ-ತಮ್ಮನಾಗಿ ನಟಿಸಿದವರು ಮದುವೆ ಆಗಿರುವ ಉದಾಹರಣೆಗಳು ಇವೆ. ಇದೀಗ ಹಿಂದಿ ಧಾರಾವಾಹಿಯೊಂದರಲ್ಲಿ ಅತ್ತಿಗೆ-ಮೈದುನ ಪಾತ್ರ ಮಾಡುತ್ತಿರುವವರು ನಿಜ ಜೀವನದಲ್ಲಿ ಮದುವೆ ಆಗುತ್ತಿದ್ದಾರೆ. ಆದರೆ ಈ ಧಾರಾವಾಹಿಯನ್ನು ಬ್ಯಾನ್ ಮಾಡಬೇಕು ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

‘ಗುಮ್ ಹೈ ಕಿಸೀಕೆ ಪ್ಯಾರ್‌ ಮೆ’ ಹೆಸರಿನ ಧಾರಾವಾಹಿಯಲ್ಲಿ ಅತ್ತಿಗೆ ಪಾತ್ರಧಾರಿ ಐಶ್ವರ್ಯ ಶರ್ಮಾ ಹಾಗೂ ಮೈದುನ ಪಾತ್ರಧಾರಿ ಹಾಗೂ ಧಾರಾವಾಹಿ ನಾಯಕ ನೀಲ್ ಭಟ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಕೆಲವೇ ದಿನಗಳಲ್ಲಿ ಮದುವೆ ಆಗಲಿದ್ದಾರೆ. ಆದರೆ ಇದೇ ಸಮಯದಲ್ಲಿ ಧಾರಾವಾಹಿಯನ್ನು ಬ್ಯಾನ್ ಮಾಡುವಂತೆ ಪ್ರೇಕ್ಷಕರಿಂದ ಒತ್ತಾಯ ಕೇಳಿಬರುತ್ತಿದೆ.

ಇತ್ತೀಚಿನ ಎಪಿಸೋಡ್ ಒಂದರಲ್ಲಿ ನಾಯಕ ವಿರಾಟ್‌ನ ಚಿಕ್ಕಮ್ಮನ ಪಾತ್ರವು ವಿರಾಟ್‌ಗೆ ತನ್ನ ಅತ್ತಿಗೆ ಊಟ ಮಾಡಿಸುವಂತೆ ಹೇಳುತ್ತಾಳೆ. ವಿರಾಟ್ ಪತ್ನಿ ಸಾಯಿ ವಿರಾಟ್‌ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗಾಗಿ ಅತ್ತಿಗೆ ಊಟ ಮಾಡಿಸಲಿ ಎಂದು ಹೇಳುತ್ತಾಳೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

ಅತ್ತಿಗೆಯನ್ನು ಬೇರೆ ರೂಪದಲ್ಲಿ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಧಾರಾವಾಹಿ ಎಪಿಸೋಡ್ ರೈಟರ್‌ಗಳ ಮೇಲೆ ಹರಿಹಾಯ್ದಿದ್ದಾರೆ. ಅತ್ತಿಗೆ ಪಾತ್ರಧಾರಿ ಐಶ್ವರ್ಯಾ ಹಾಗೂ ವಿರಾಟ್ ಪಾತ್ರಧಾರಿ ನೀಲ್ ಮದುವೆ ಆಗುತ್ತಿರುವುದಕ್ಕೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಧಾರಾವಾಹಿಗಳಲ್ಲಿ ಅಕ್ಕ-ತಮ್ಮನ ಪಾತ್ರದಲ್ಲಿ ನಟಿಸಿರುವವರೇ ಮದುವೆ ಆಗಿದ್ದಾರೆ. ಸ್ಯಾಂಡಲ್‌ವುಡ್‌ನ ಯಶಸ್ವಿ ದಂಪತಿ ಯಶ್-ರಾಧಿಕಾ ಸಹ ತಮ್ಮ ಮೊದಲ ಧಾರಾವಾಹಿಯಲ್ಲಿ ಅಕ್ಕ-ತಮ್ಮನ ಪಾತ್ರದಲ್ಲಿ ನಟಿಸಿದ್ದರು. ಸಿಲ್ಲಿ-ಲಲ್ಲಿಯಲ್ಲಿ ಅಕ್ಕ-ತಮ್ಮನ ಪಾತ್ರದಲ್ಲಿ ನಟಿಸಿದ್ದ ನಟರು ಸಹ ವಿವಾಹವಾದರು. ಹೀಗೆ ಬಹಳ ಧಾರಾವಾಹಿಗಳಲ್ಲಿ ಆಗಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ