Home / ರಾಜ್ಯ / ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ.

Spread the love

ಮಂಗಳೂರು, ಮೇ 31: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ 35 ಗ್ರಾಂ ಚಿನ್ನವನ್ನೇ ನುಂಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಕೇರಳ ರಾಜ್ಯದ ತ್ರಿಶ್ಶೂರ್ ಜಿಲ್ಲೆಯ ಶಿಬು ಎಂಬುವವನ್ನೇ ಚಿನ್ನ ನುಂಗಿರುವ ಆರೋಪಿ. ಜುವೆಲ್ಲರಿ ಶಾಪ್‌ನಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ 35 ಗ್ರಾಂ ಚಿನ್ನವನ್ನು ಶಿಬು ನುಂಗಿ ಎಲ್ಲರೂ ದಂಗಾಗುವಂತೆ ಮಾಡಿದ್ದಾನೆ.

ಸುಳ್ಯದ ಜುವೆಲ್ಲರಿ ಅಂಗಡಿಯೊಂದರಲ್ಲಿ ಮಾರ್ಚ್ 31ರಂದು ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಮೇ‌ 28 ರಂದು ಬಂಧಿಸಿದ್ದರು. ಅವರಲ್ಲೊಬ್ಬ ಆರೋಪಿ ಶಿಬು. ಇವನಿಗೆ ಮೇ 29ರಂದು ರಾತ್ರಿ 9ರ ವೇಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿದೆ. ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

 

ಆಸ್ಪತ್ರೆಯಲ್ಲಿ ವೈದ್ಯರು ಎಕ್ಸ್‌ರೇ ಮಾಡಿದಾಗ ಆರೋಪಿ ಶಿಬು ಚಿನ್ನಾಭರಣಗಳನ್ನು ನುಂಗಿರುವುದು ಬೆಳಕಿಗೆ ಬಂದಿದೆ. ಮೇ 30ರ ಬೆಳಗ್ಗೆ ಶಿಬು ಹೊಟ್ಟೆಯಿಂದ ಆತ ನುಂಗಿರುವ ಚಿನ್ನಾಭರಣಗಳು ಹೊರಬಂದಿದೆ. ಈ ಮೂಲಕ ಆತನ ಹೊಟ್ಟೆಯಿಂದ ಬರೋಬ್ಬರಿ 35 ಗ್ರಾಂ ಉಂಗುರಗಳು, ಕಿವಿಯೋಲೆ ಸೇರಿ ಹಲವಾರು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

 

ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಶಿಬು ಪೊಲೀಸರ ಕಣ್ತಪ್ಪಿಸಲು ಐಸ್‌ಕ್ರೀಂ ಜೊತೆಯಲ್ಲಿ ಈ ಚಿನ್ನಾಭರಣಗಳನ್ನು ನುಂಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಶಿಬು ಆರೋಗ್ಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡೆಸಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ