Breaking News
Home / ಹುಬ್ಬಳ್ಳಿ / ರೈತರು ತರಕಾರಿ ಮಾರಲು 2, ಮದ್ಯ ಮಾರಾಟಕ್ಕೆ 4 ಗಂಟೆ ಕಾಲಾವಕಾಶ ನೀಡೋ ಸರ್ಕಾರಕ್ಕೆ ಹೃದಯ ಇಲ್ಲ: ಡಿಕೆಶಿ

ರೈತರು ತರಕಾರಿ ಮಾರಲು 2, ಮದ್ಯ ಮಾರಾಟಕ್ಕೆ 4 ಗಂಟೆ ಕಾಲಾವಕಾಶ ನೀಡೋ ಸರ್ಕಾರಕ್ಕೆ ಹೃದಯ ಇಲ್ಲ: ಡಿಕೆಶಿ

Spread the love

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ನೀಡಿದ ಪರಿಹಾರ ಇನ್ನೂ ಸಿಕ್ಕಿಲ್ಲ. ಹೀಗಾಗಿ, ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಧಾರವಾಡ ರಾಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ತರಕಾರಿ ಮಾರಲು 2 ಗಂಟೆ ಅವಕಾಶ ನೀಡುತ್ತಾರೆ. ಮದ್ಯ ಮಾರಾಟಕ್ಕೆ 4 ಗಂಟೆಗಳ ಕಾಲ ಅವಕಾಶವನ್ನು ನೀಡುತ್ತಾರೆ. ಈ ಸರ್ಕಾರಕ್ಕೆ ಕಣ್ಣು, ಹೃದಯ ಇದ್ಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳೇ ರೈತರ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದರು. ನಾವು ರೈತರ ಜೊತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಬಗ್ಗೆ ನಾನೇನೂ ಹೇಳಲಾರೆ. ಅದು ಅವರ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ. ಸರ್ಕಾರ ನನ್ನ ಬಳಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಹಸಿ ಮೆಣಸಿನಕಾಯಿ 1 ಕೆಜಿ 40 ರೂ.ಗೆ ಮಾರಾಟವಾಗುತ್ತಿತ್ತು. ಲಾಕ್​ಡೌನ್​ ಹಿನ್ನೆಲೆ 1 ಕೆ.ಜಿಯನ್ನು 1 ರೂ.ಗೆ ಕೇಳುತ್ತಿದ್ದಾರೆ. ಹೇಗೆ ಜೀವನ ಮಾಡುವುದು ಸರ್ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡ ರೈತ ಕಣ್ಣೀರು ಹಾಕಿದ್ದಾರೆ. ನಾವು ಹೇಗೆ ಜೀವನ ಮಾಡಬೇಕು. ನಮಗೆ ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ಮಾಡಿ ಎಂದು ಶಿವಕುಮಾರ್ ಬಳಿ ರೈತರು ಮನವಿ ಮಾಡಿಕೊಂಡರು.


Spread the love

About Laxminews 24x7

Check Also

ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ – ಧಾರವಾಡ ಅರ್ಧ ದಿನ ಬಂದ್!

Spread the loveಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ