Breaking News
Home / ರಾಜ್ಯ / ಬೆಳಗಾವಿಯಿಂದ ಕಡಿಮೆ ಸರಬರಾಜು: ಗೋವಾದಲ್ಲಿ ತರಕಾರಿಗೆ ಹಾಹಾಕಾರ

ಬೆಳಗಾವಿಯಿಂದ ಕಡಿಮೆ ಸರಬರಾಜು: ಗೋವಾದಲ್ಲಿ ತರಕಾರಿಗೆ ಹಾಹಾಕಾರ

Spread the love

ಪಣಜಿ: ಗೋವಾ ತೋಟಗಾರಿಕಾ ನಿಗಮಕ್ಕೆ ಬೆಳಗಾವಿಯಿಂದ ಸದ್ಯ ವಾರದಲ್ಲಿ ಮೂರು ದಿನಗಳ ಕಾಲ ತರಕಾರಿ ಪೂರೈಕೆಯಾಗುತ್ತಿದೆ, ಇದರಿಂದಾಗಿ ಅಲ್ಲಿರುವ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ.

ಕೋವಿಡ್ ನಿರ್ಬಂಧದಿಂದಾಗಿ ಬೆಳಗಾವಿ ತರಕಾರಿ ಮಾರುಕಟ್ಟೆ ಬಂದ್ ಆಗಿದೆ. ಗೋವಾ ರಾಜ್ಯಾದ್ಯಂತ ನಿಗಮದ ಸುಮಾರು 1400 ತರಕಾರಿ ಅಂಗಡಿಗಳಿವೆ. ಈ ಅಂಗಡಿಗಳ ಮೂಲಕ ಸರ್ಕಾರವು ರಾಜ್ಯದಲ್ಲಿ ಜನತೆಗೆ ಸಬ್ಸಿಡಿ ದರದಲ್ಲಿ ತರಕಾರಿ ಮಾರಾಟ ಮಾಡುತ್ತದೆ. ಆದರೆ ಬೆಳಗಾವಿಯಿಂದ ಪ್ರತಿದಿನ ತರಕಾರಿ ಪೂರೈಕೆಯಾಗದ ಕಾರಣ ನಿಗಮದ ಹಲವು ತರಕಾರಿ ಅಂಗಡಿಗಳನ್ನು ಅನಿವಾರ್ಯವಾಗಿ ಬಂದ್ ಮಾಡುವಂತಾಗಿದೆ.

ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿ ಸಂದೀಪ ಫಳದೇಸಾಯಿ ಅವರು ಮಾಹಿತಿ ನೀಡಿದ್ದು, ಬೆಳಗಾವಿಯಿಂದ ನಿಗಮದ ತರಕಾರಿ ಅಂಗಡಿಗಳಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ತರಕಾರಿ ಪೂರೈಕೆಯಾಗುತ್ತದೆ. ಲಾಕ್‍ಡೌನ್ ಪೂರ್ವದಲ್ಲಿ ಪ್ರತಿದಿನ ಸುಮಾರು 100 ಟನ್ ತರಕಾರಿಯನ್ನು ತರಿಸಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ದಿನವೊಂದಕ್ಕೆ 130 ಟನ್‍ನಷ್ಟು ವಾರದಲ್ಲಿ ಕೇವಲ ಮೂರು ದಿನ ಮಾತ್ರ ಬರುತ್ತಿದೆ ಎಂದು ತಿಳಿಸಿದ್ದಾರೆ.

 

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ