Breaking News
Home / ಜಿಲ್ಲೆ / ಬೆಂಗಳೂರು / ಜಿಂದಾಲ್ ಜಮೀನು : ಕೋರ್ಟ್ ತೀರ್ಪಿನ ನಂತರ ತೀರ್ಮಾನ : ಸಚಿವ ಬಸವರಾಜ್ ಬೊಮ್ಮಾಯಿ

ಜಿಂದಾಲ್ ಜಮೀನು : ಕೋರ್ಟ್ ತೀರ್ಪಿನ ನಂತರ ತೀರ್ಮಾನ : ಸಚಿವ ಬಸವರಾಜ್ ಬೊಮ್ಮಾಯಿ

Spread the love

ಬೆಂಗಳೂರು : ಜಿಂದಾಲ್ ಸಂಸ್ಥೆಗೆ ಜಮೀನು ನೀಡುವುದು ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನ, ಈ ಸಂಪುಟ ಒಪ್ಪಿಗೆ ನೀಡಿಲ್ಲ ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತಾಡಿರುವ ಅವರು, ಜಿಂದಾಲ್ ಗೆ ಜಮೀನು ನೀಡಿರುವ ಕುರಿತು ಮುಂದೆ ಏನ್ ಆಗುತ್ತದೆ ಎನ್ನುವುದರ ಬಗ್ಗೆ ಗೊತ್ತಿಲ್ಲ. ಈ ಕುರಿತು ಹೈ ಕೋರ್ಟ್ ನಲ್ಲಿ ಪಿಐಎಲ್ ಇದೆ. ಸುಪ್ರೀಂ ಕೋರ್ಟ್ ನಲ್ಲಿಯೂ ಪ್ರಕರಣ ಇದೆ. ಅವತ್ತು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈಗ ಪಿಐಎಲ್ ಆಧಾರದಲ್ಲಿ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕೋರ್ಟ್ ಏನ್ ತೀರ್ಪು ನೀಡುತ್ತದೆ ನೋಡಿ ಮುಂದೆ ತೀರ್ಮಾನ ಮಾಡಲಾಗುವುದು ಎಂದರು.

ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೆರಿಯಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆ ಮಾಡಲಾಗುವುದು. ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿಯನ್ವಯ 15% ಬಂಡವಾಳ ಸಬ್ಸಿಡಿಯನ್ನು ಕೊಡುವುದು ಎಂದರು.

ಕೆಪಿಎಸ್ ಸಿ ಮಾಜಿ ಅಧ್ಯಕ್ಷರ ತನಿಖೆಗೆ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು. ರಾಜ್ಯಪಾಲರೂ ಇದನ್ನು ತಿರಸ್ಕರಿಸಿದ್ದರು. ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ. ಅದಕ್ಕಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ ಎಂದರು. ಹಾಸನ್ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿರುವ ಸಚಿವರು, ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣ ಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹಿಂಡಾಗಿ ಆಕ್ಟಿವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ ಎಂದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲ ಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೊಲ್ಹಾರ್ ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುವುದು. ಪಾಂಡವಪುರ, ನಾಗಮಂಗಲ, ಬಹುಗ್ರಾಮ ಕುಡಿಯುವ ನೀರು, ಹುಬ್ಬಳ್ಳಿ ಧಾರವಾಡ, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹೊಳಲ್ಕೆರೆ ತಾಲೂಕಿಗೆ ಬಹುಗ್ತಾಮ ಕುಡಿಯುವ ನೀತಿನ ಯೋಜನೆ ಸಿಂಗಸಂದ್ರದಲ್ಲಿ 75 ಕೋಟಿ ವೆಚ್ಚದ ಕಮರ್ಸಿಯಲ್ ಕಾಂಪ್ಲೆಕ್ಸ್, ಕಲಬುರ್ಗಿಯಲ್ಲಿ ಕಮರ್ಸಿಯಲ್ ಕಾಂಪ್ಲೆಕ್ಸ್ ,ಮೈಸೂರು ರೋಡ್ ನಿಂದ ಉತ್ತರ ಹಳ್ಳಿ ರೋಡ್ 25.7 ಕೋಟಿ ರು. ,ಕನಕಪುರ ಸಿಟಿ ಮುನ್ಸಿಪಲ್ ಕೋರ್ಟ್ 7 ರಿಂದ 10 ಕೋಟಿಗೆ ಹೆಚ್ಚಳ, ಕಲಬುರ್ಗಿ ನಗರದಲ್ಲಿ ಪಿಪ್ಪಿ ಫಿಪ್ಟಿ ಮಾದರಿಯಲ್ಲಿ ಬಿಲ್ಡಿಂಗ್, ಹಾಸನ ದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿದೆ ಎಂದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ