Breaking News
Home / ರಾಜಕೀಯ / ಒಂದು ಸಾವಿರ ಆಮ್ಲಜನಕ ಸಾಂದ್ರಕ ಖರೀದಿ :ಸಚಿವ ಮುರುಗೇಶ್ ನಿರಾಣಿ

ಒಂದು ಸಾವಿರ ಆಮ್ಲಜನಕ ಸಾಂದ್ರಕ ಖರೀದಿ :ಸಚಿವ ಮುರುಗೇಶ್ ನಿರಾಣಿ

Spread the love

ರಾಮನಗರ, ಮೇ.23- ಒಂದು ಸಾವಿರ ಆಮ್ಲಜನಕ ಸಾಂದ್ರಕ ಖರೀದಿಸಲು ಯೋಜಿಸಲಾಗಿದ್ದು, ಮೊದಲು 100 ಆಮ್ಲಜನಕ ಸಾಂದ್ರಕ ಖರೀದಿಸಲಾಗಿದೆ ಅದರ ಕಾರ್ಯವೈಖರಿ ಗುಣ ಮಟ್ಟ ನೋಡಿ ಉಳಿದ ಆಮ್ಲಜನಕ ಸಾಂದ್ರಕವನ್ನು ಖರೀದಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಭಾಗ ಮಟ್ಟಕ್ಕೆ 2 ರಂತೆ 10 ಆಕ್ಸಿಜನ್ ಟ್ಸಾಂಕರ್, 10 ಆಕ್ಸಿಜನ್ ಜನರೇಟರ್‌ಗಳನ್ನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಹೊಸದಾಗಿ ಆಕ್ಸಿಜನ್ ಜನರೇಟರ್ ಯುನಿಟ್ ಬದಲು ಮೂವಿಂಗ್ ಆಕ್ಸಿಜನ್ ಜನರೇಟರ್ ಖರೀದಿಗೆ ಯೋಜಿಸಲಾಗುತ್ತಿದೆ. ಇದರಿಂದ ಜಿಲ್ಲಾ ಮಟ್ಟದಿಂದ ಆಮ್ಲಜನಕ ಜನರೇಟರ್ ಅನ್ನು ತಾಲ್ಲೂಕುಗಳಿಗೆ ತೆಗೆದುಕೊಂಡಿ ಹೋಗಿ ಅವಶ್ಯಕತೆಗೆ ತಕ್ಕಂತೆ 300-500 ಸಿಲಿಂಡರ್‌ಗಳನ್ನು ತುಂಬಿಸಿ ಬರಬಹುದು ಅವರು ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೋವಿಡ್ ಚಿಕಿತ್ಸೆಗಾಗಿ ಆಮ್ಲಜನಕ ಸಾಂದ್ರಕ, ಆಕ್ಸಿಮೀಟರ್, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಗಾಗಿ 5.5 ಕೋಟಿ ರೂ ನೀಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ 110 ಬಿಲ್ಡಿಂಗ್ ಸ್ಟೋನ್ ಕ್ರಷರ್‌ಗಳಿದ್ದು, 53 ಕ್ರಷರ್‌ಗಳಿದ್ದು, 13 (ಡೈರೆಕ್ಟರ್ ಜನರಲ್ ಆಫ್ ಮೈನ್ಸ್ ಸೇಫ್ಟಿ) ಡಿ.ಜಿ.ಎಂ.ಎಸ್ ಪರವಾನಗಿ ಹೊಂದಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಪುರದಲ್ಲಿ ನಡೆದ ಘಟನೆಯಿಂದ ಡಿ.ಜಿ.ಎಂ.ಎಸ್ ಪರವಾನಗಿ ಕಡ್ಡಾಯ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಶೇ. 5 ರಷ್ಟು ಗಣಿಗಾರಿಕೆ ನಡೆಸುವವರ ಬಳಿ ಮಾತ್ರ ಡಿ.ಜಿ.ಎಂ.ಎಸ್ ಪರವಾನಗಿ ಇರುತ್ತದೆ‌ ಎಂದು ಅವರು ಹೇಳಿದರು.

ಉಳಿದ ಗಣಿಗಾರಿಕೆ ನಡೆಸುವವರು ಡಿ.ಜಿ.ಎಂ.ಎಸ್ ಪರವಾನಗಿ ಪಡೆದುಕೊಳ್ಳಲು 90 ದಿನ ಕಲಾವಕಾಶ ನೀಡಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಬಹಳಷ್ಟು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಗಣಿಕಾರಿಕೆ ಸಂಬಂಧಿಸಿದಂತೆ ಯಾವುದೇ ಅನಾಹುತ ಸಂಭವಿಸಿದಂತೆ ಗಣಿ ಮಾಲೀಕರಿಗೆ ಒಂದು ದಿನದ ಕಾರ್ಯಗಾರ ಆಯೋಜಿಸಿ ತರಬೇತಿ ನೀಡಲಾಗುತ್ತಿದೆ ಎಂದರು.

ಹೊಸದಾಗಿ ಹೊದ ಗಣಿಗಾರಿಕೆ ನೀತಿ ಜಾರಿಗೆ ತರಲು ಚಿಂತಿಸಲಾಗುತ್ತಿದೆ. ವಿಭಾಗೀಯವಾರು ಮೈನಿಂಗ್ ಅದಾಲತ್‌ನ್ನು ಲಾಕ್‌ಡೌನ್ ತೆರವುಗೊಳಿಸಿದ ನಂತರ ನಡೆಸಲಾಗುವುದು. ಇದರಿಂದ ಗಣಿಗಾರಿಕೆಗೆ ಸಂಬಂಧಿಸಿದ ತೊಂದರೆ ಇದ್ದಲ್ಲಿ ಸ್ಥಳೀಯವಾಗಿ ನಿವಾರಿಸಬಹುದು. ಸಿಂಗಲ್ ವಿಂಡೋ ಸಿಸ್ಟ್ಂ ಜಾರಿಗೆ ತಂದು ಗಣಿಗಾರಿಕೆಗೆ ಅರ್ಜಿ ಸಲ್ಲಿಸುವವರು ಬೇರೆ ಬೇರೆ ಇಲಾಖೆಗೆ ಹೋಗಿ ಎನ್.ಓ.ಸಿ ತರುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಬಹುದು ಎಂದು ಹೇಳಿದರು.

ಗಣಿಗಾರಿಕೆ ಹಾಗೂ ಡೀಮ್ಡ್ ಅರಣ್ಯ ಕುರಿತು ಬಹಳ ತೊಂದರೆಗಳಿವೆ. ಗಣಿಗಾರಿಕೆಗೆ ಪರವಾನಗಿ ನೀಡಿ ನಂತರ ಸ್ಥಳ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುತ್ತದೆ ಎಂಬ ಗೊಂದಲಗಳಿದ್ದು, ಅದನ್ನು ನಿವಾರಿಸಲು ಕೇಂದ್ರ ಗಣಿಗಾರಿಕೆ ಸಚಿವರಾದ ಪ್ರಹ್ಲಾದ್ ಜೋಷಿ, ಅರಣ್ಯ ಸಚಿವರಾದ ಅರವಿಂದ ಲಿಂಬಕವಾಳಿ, ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದರು.
ಪ್ರತಿಕಾ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ