Breaking News
Home / ಜಿಲ್ಲೆ / ಬೆಳಗಾವಿ / ಪ್ರತಿ ನಿಮಿಷಕ್ಕೆ ಸುಮಾರು ೧೫೦೦ಲೀಟರ್ ಆಮ್ಲಜನಕ ತಯಾರಾಗಿ ಸರಬರಾಜು ಮಾಡುವ ವಿಶೇಷ ಘಟಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿಕ

ಪ್ರತಿ ನಿಮಿಷಕ್ಕೆ ಸುಮಾರು ೧೫೦೦ಲೀಟರ್ ಆಮ್ಲಜನಕ ತಯಾರಾಗಿ ಸರಬರಾಜು ಮಾಡುವ ವಿಶೇಷ ಘಟಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿಕ

Spread the love

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು ೧೦೪೦ ರಷ್ಟು ಹಾಸಿಗೆಗಳಿದ್ದು, ಅದರಲ್ಲಿ ೮೨೨ ಆಮ್ಲಜನಕ ೭೬ ವೆಂಟಿಲೇಟರ್ ೩೫ ಎಚ್‌ಎಪ್‌ಎನ್‌ಸಿ ಹಾಸಿಗೆಗಳು.

ಪ್ರಸ್ತುತ ಇಲ್ಲಿ ೧೩ಕೆಎಲ್ ಸಾಮರ್ಥ್ಯದ ಆಮ್ಲಜನಕ ತಯಾರಿಕಾ ಘಟಕ ಇದ್ದು, ಇದು ಈಗಿನ ಪರಿಸ್ಥಿತಿಗೆ ಸಮರ್ಪಕವಾಗುತ್ತಿಲ್ಲ. ಇದನ್ನು ಗಮನಿಸಿ, ಶಾಸಕ ಅಭಯ ಪಾಟೀಲ ಹೆಚ್ಚುವರಿಯಾಗಿ ಆಮ್ಲಜನಕ ಘಟಕದ ಸ್ಥಾಪನೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದರು.

ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಮಾರು ೨.೮೫ ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ಪ್ರತಿ ನಿಮಿಷಕ್ಕೆ ಸುಮಾರು ೧೫೦೦ಲೀಟರ್ ಆಮ್ಲಜನಕ ತಯಾರಾಗಿ ಸರಬರಾಜು ಮಾಡುವ ವಿಶೇಷ ಘಟಕಕ್ಕೆ ಅನುಮೋದನೆ ನೀಡಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ, ದಿನಾಂಕ: ೨೦-೦೫-೨೦೨೧ ರಂದು ೧೧ ಗಂಟೆಗೆ ಈ ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಜೂನ್ ತಿಂಗಳಲ್ಲಿ ಕಾಮಗಾರಿಯು ಸಂಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

೨೦ಕೆಎಲ್ ಸಾಮರ್ಥ್ಯದ ಹೆಚ್ಚುವರಿ ಆಮ್ಲಜನಕ ಘಟಕದ ಸ್ಥಾಪನೆಗೆ  ತಾವು ಸಲ್ಲಿಸಿದ ಪ್ರಸ್ತಾವನೆಯೂ ಕೂಡಾ ಮಂಜೂರಾತಿ ಹಂತದಲ್ಲಿದೆ ಎಂದು  ಅವರು ತಿಳಿಸಿದ್ದಾರೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ