Home / ರಾಜಕೀಯ / ಪೊಲೀಸರಿಗೆ ಹೆದರದ ಕಳ್ಳರು- ದರೋಡೆಕೋರರಿಗೆ ಕೊರೊನಾ ಅಂದ್ರೆ ಭಯ !

ಪೊಲೀಸರಿಗೆ ಹೆದರದ ಕಳ್ಳರು- ದರೋಡೆಕೋರರಿಗೆ ಕೊರೊನಾ ಅಂದ್ರೆ ಭಯ !

Spread the love

ಬೆಂಗಳೂರು, ಮೇ. 19: ಕೊರೊನಾ ಸೋಂಕಿಗೆ ಕಳ್ಳರು- ದರೋಡೆಕೋರರು ಕೂಡ ಹೆದರಿದ್ದಾರೆ. ಕೊರೊನಾ ಸೋಂಕು ಭಯದಿಂದ ಕ್ರಿಮಿನಲ್ ಗಳು ಕೂಡ ರಜೆ ಮೊರೆ ಹೋದಂತಿದೆ. ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಆದರೆ, ಸೈಬರ್ ಕಳ್ಳರು ಮಾತ್ರ ತಮ್ಮ ಕೈಚಳಕ ತೋರಿದ್ದಾರೆ.

ಅರ್ಧಕ್ಕೆ ಅರ್ಧ ಪ್ರಕರಣ ಕಡಿಮೆ: ಒಂದಂಡೆ ಕೊರೊನಾ ಭೀತಿ. ಇನ್ನೊಂದಡೆ ಕೊರೊನಾ ಲಾಕ್ ಡೌನ್ ನಿಯಮ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಊಹೆಗೂ ನಿಲುಕದಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಒಂದು ತಿಂಗಳಿಗೆ ಬೆಂಗಳೂರಿನಲ್ಲಿ ಸರಾಸರಿ ಐದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದ್ದರು. ಬೆಂಗಳೂರಿನಲ್ಲಿರುವ 110 ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಠಾಣೆಗಳಲ್ಲಿ ಸರಾಸರಿ ತಿಂಗಳಿಗೆ 40 ರಿಂದ 60 ಪ್ರಕರಣ ದಾಖಲಾಗುತ್ತಿದ್ದವು. 2021 ಜನವರಿ ತಿಂಗಳಲ್ಲಿ 6526 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಪ್ರಸಕ್ತ ಏಪ್ರಿಲ್ ತಿಂಗಳಲ್ಲಿ ಕೇವಲ 2028 ಅಪರಾಧ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿವೆ. ಎರಡು ಪಟ್ಟು ಪ್ರಕರಣ ಕಡಿಮೆಯಾಗಿದ್ದು, ಸದ್ಯ ಬೆಂಗಳೂರು ಮಂದಿ ಕೂಡ ನಿಟ್ಟುಸಿರು ಬಿಡುವಂತಾಗಿದೆ.

ಕಳ್ಳರಿಗೆ ರೆಸ್ಟ್, ಪೊಲೀಸರು ಬ್ಯುಸಿ: ಕೊರೊನಾ ಲಾಕ್ ಡೌನ್ ನಿಯಮ ಜಾರಿ ಮಾಡುವ ಜವಾಬ್ಧಾರಿ ಪೊಲೀಸರಿಗೆ ವಹಿಸಲಾಗಿದೆ. ಹೀಗಾಗಿ ನಾಕಬಂದಿ ವಾಹನ ಚೆಕ್ ಪಾಯಿಂಟ್, ಅನಾವಶ್ಯಕವಾಗಿ ಸಂಚರಿಸುವ ವಾಹನಗಳ ಜಪ್ತಿ, ಮಾಸ್ಕ್ ಇಲ್ಲದವರಿಗೆ ದಂಡ ಹೀಗೆ ಕೊರೊನಾ ಸಂಬಂಧಿತ ಕಾರ್ಯಗಳಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೆ ಕಳ್ಳರು, ದರೋಡೆಕೋರರು ಕೊರೊನಾ ಗೆ ಹೆದರಿ ಸುಮ್ಮನಾಗಿದ್ದಾರೆ. ಹೀಗಾಗಿ ಬಹುತೇಕ ಅಪರಾಧಗಳು ಕಡಿಮೆಯಾಗಿವೆ. ಇನ್ನು ಪೊಲೀಸರು ಕೂಡ ಹಳೇ ಪ್ರಕರಣಗಳ ತನಿಖೆ ಕೈ ಬಿಟ್ಟಿದ್ದಾರೆ. ಹೀಗಾಗಿ ರಾಜಧಾನಿಯಲ್ಲಿ ಏಕಾಏಕಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ ಎಂಧು ಪೊಲೀಸರು ತಿಳಿಸಿದ್ದಾರೆ.

ಸೈಬರ್ ಅಪರಾಧ ಹೆಚ್ಚಳ: ಕೊರೊನಾ ಸಂದರ್ಭ ಬಳಿಸಿಕೊಂಡು ಸೈಬರ್ ಕಳ್ಳರು ತಮ್ಮ ಕೈಚಳಕ ಜೋರು ಮಾಡಿದ್ದಾರೆ. ಬೆಡ್ ಕೊಡಿಸುವ, ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವ, ಬಾಡಿಗೆ ಮನೆ ಪಡೆಯುವ ಸೋಗಿನಲ್ಲಿ ಲಿಂಕ್ ಕಳಿಸಿ ಮುಗ್ಧರಿಂದ ಸೈಬರ್ ಕಳ್ಳರು ಹಣ ಎಗರಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಜನರಿಗೆ ಕೆಲಸವಿಲ್ಲದ ಕಾರಣ ಅಪರಿಚಿತ ಕರೆಗಳನ್ನು ಸ್ವೀಕರಿಸುವುದು ಜಾಸ್ತಿ. ಆದರೆ ನಾನಾ ಅಮಿಷೆ ಒಡ್ಡಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ಸೈಬರ್ ಕೃತ್ಯಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮೊಬೈಲ್ ಗಳಿಗೆ ಸಂದೇಶ ಕಳುಹಿಸಿ ವಂಚನೆ ಮಾಡುವ ಜಾಲ ಸಕ್ರಿಯವಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ ಎಂದು ಸೈಬರ್ ತಜ್ಞರು ಮನವಿ ಮಾಡಿದ್ದಾರೆ.

ಜನವರಿಯಲ್ಲಿ ದಾಖಲಾದ ಪ್ರಕರಣ 6526

ಫೆಬ್ರವರಿ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣ 5642

ಮಾರ್ಚ್ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣ 3358

ಏಪ್ರಿಲ್ ತಿಂಗಳಲ್ಲಿ ದಾಖಲಾದ ಪ್ರಕರಣ 2028

ಮೇ ತಿಂಗಳಲ್ಲಿ ದಾಖಲಾದ ಪ್ರಕರಣ 546


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ