Breaking News
Home / ರಾಜ್ಯ / ನಕಲಿ R,T,P,C,R,ವರದಿಯನ್ನು ನೀಡುತ್ತಿದ್ದ ಮೂವರ ಬಂಧನ

ನಕಲಿ R,T,P,C,R,ವರದಿಯನ್ನು ನೀಡುತ್ತಿದ್ದ ಮೂವರ ಬಂಧನ

Spread the love

ನವದೆಹಲಿ, : ಜನರಿಗೆ ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ನೀಡಿ ವಂಚಿಸುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಖಾಸಗಿ ಟೆಸ್ಟಿಂಗ್ ಲ್ಯಾಬ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಬಂಧಿತರಿಂದ ಒಂದು ಲ್ಯಾಪ್‌ಟಾಪ್, ನಕಲಿ ಬಿಲ್‌ಗಳು ಮತ್ತು ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸನ್ನಿ ಹಾಗೂ ಆತನ ಇಬ್ಬರು ಸಹಾಯಕರಾದ ಜೀತೇಂದ್ರ ಸಾಹು ಮತ್ತು ಸುನಿಲ್ ಕುಮಾರ್ ಎಂಬವರು ಬಂಧಿತ ಆರೋಪಿಗಳು ಎಂದು ಪೊಲೀಸರು ವಿವರಗಳನ್ನು ನೀಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿಯಂತೆ ಬಂಧಿತ ಮೂವರು ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಪ್ರದೇಶದಲ್ಲಿರುವ ಲಾಲ್‌ಚಂದಾನಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಗಳಿಂದ ಕೋವಿಡ್ ಮಾದರಿಗಳನ್ನು ಸಂಗ್ರಹಿಸಿ ಜನರಿಗೆ ನಕಲಿ ವರದಿಗಳನ್ನು ನೀಡುತ್ತಿದ್ದರು. ಕುಟುಂಬವೊಂದು ಕೊರೊನಾ ಪರೀಕ್ಷೆಯನ್ನು ನಡೆಸುವ ಸಲುವಾಗಿ ಈ ಲ್ಯಾಬ್‌ಅನ್ನು ಸಂಪರ್ಕಿಸಿತ್ತು. ನಂತರ ಈ ಲ್ಯಾಬ್‌ನಿಂದ ಓರ್ವನನ್ನು ಕಳುಹಿಸಿ ಮನೆಯ ಆರು ಮಂದಿ ಸದಸ್ಯರ ಮಾದರಿಯನ್ನು ಸಂಗ್ರಹಿಸಿಕೊಂಡು 9000 ರೂಪಾಯಿಯನ್ನು ಪಡೆದುಕೊಂಡು ಹೋಗಿದ್ದ. ಆದರೆ ನಾಲ್ಕು ದಿನಗಳ ನಂತರವೂ ವರದಿ ಬಾರದ ಹಿನ್ನೆಲೆಯಲ್ಲಿ ಲ್ಯಾಬ್‌ಅನ್ನು ಸಂಪರ್ಕಿಸಿದಾಗ ಮತ್ತೆರಡು ದಿನಗಳಲ್ಲಿ ವರದಿಯನ್ನು ನೀಡುವುದಾಗಿ ತಿಳಿಸಲಾಗಿತ್ತು. ನಂತರ ದೂರುದಾರನ ವಾಟ್ಸಾಪ್‌ಗೆ ನೆಗೆಟಿವ್ ವರದಿಯನ್ನು ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ವರದಿಯ ಬಗ್ಗೆ ಪರಿಶೀಲಿಸಿದಾಗ ಅನುಮಾನ ಬಂದಿದ್ದು ವರದಿ ನಕಲಿ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಈ ಆರೋಪಗಳನ್ನು ಬಂಧಿತರು ಒಪ್ಪಿಕೊಂಡಿದ್ದು, ತಾವು ಕಾರ್ಯಾಚರಣೆಯನ್ನು ನಡೆಸುತ್ತಿದ್ದ ರೀತಿಯನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಈ ಗ್ಯಾಂಗ್ ದ್ವಾರಕಾ ಹಾಗೂ ನಾರೈನಾ ಪ್ರದೇಶಗಳಲ್ಲಿಯೂ ಇದೇ ರೀತಿ ವಂಚನೆಯನ್ನು ಮಾಡಿರುವುದಾಗಿ ಒಪ್ಪಿಕೊಂಡಿದೆ. ಮತ್ತಷ್ಟು ಜನರು ಇವರೊಂದಿಗೆ ಕೈಜೋಡಿಸಿದ್ದು ಪೊಲೀಸರು ಇತರರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ