Breaking News
Home / ರಾಜಕೀಯ / ರೈಲಿನಡಿ ಸಿಲುಕ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಭದ್ರತಾ ಸಿಬ್ಬಂದಿ………..

ರೈಲಿನಡಿ ಸಿಲುಕ್ತಿದ್ದ ವ್ಯಕ್ತಿಯನ್ನ ರಕ್ಷಿಸಿದ ಭದ್ರತಾ ಸಿಬ್ಬಂದಿ………..

Spread the love

ಮುಂಬೈ: ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯನ್ನ ಭದ್ರತಾ ಸಿಬ್ಬಂದಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಮುಂಬೈ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ 52 ವರ್ಷದ ದಿಲೀಪ್ ಮಂಡಗೆ ಎಂಬವರು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಜಿಗಿಯಲು ಪ್ರಯತ್ನಿಸಿದ್ದರು. ಈ ವೇಳೆ ಆಯತಪ್ಪಿದ ದಿಲೀಪ್ ಅವರನ್ನು ಪ್ಲಾಟ್‍ಫಾರಂನಲ್ಲಿ ಕರ್ತವ್ಯನಿರತ ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ದಿಲೀಪ್ ಮಗನೊಂದಿಗೆ ಮುಂಬೈನಿಂದ ಕಯಾಮತಿ ಎಕ್ಸ್ ಪ್ರೆಸ್ ಮೂಲಕ ಮಧ್ಯಪ್ರದೇಶದ ಬುರಹಾನಪುರಕ್ಕೆ ಹೊರಟಿದ್ದರು. ಆದ್ರೆ ಒಬ್ಬರು ಬಿಹಾರನತ್ತ ಹೊರಟಿದ್ದ ರೈಲು ಹತ್ತಿದ್ದರು. ತಾವು ಬೇರೆ ರೈಲು ಹತ್ತಿರುವ ವಿಷಯ ಅರಿವಿಗೆ ಬರುವಷ್ಟರಲ್ಲಿ ರೈಲು ಚಲಿಸಲಾರಂಭಿಸಿತ್ತು. ಕೂಡಲೇ ಮಗ ಬ್ಯಾಗ್ ಹೊರಗೆ ಎಸೆದು ಜಿಗಿದಿದ್ದಾನೆ. ಆದ್ರೆ ದಿಲೀಪ್ ಆಯತಪ್ಪಿ ಬಿದ್ದಿದ್ದಾರೆ.

ದಿಲೀಪ್ ರಕ್ಷಣೆಯ ಎಲ್ಲ ದೃಶ್ಯಗಳು ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನಾ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸೋಮನಾಥ್ ಮಹಾಜನ್ ಮತ್ತು ಎಸ್‍ಐಪಿಎಫ್ ಅಧಿಕಾರಿ ಕೆ.ಸಾಹು ಅವರ ಸಮಯಪ್ರಜ್ಞೆಯಿಂದಾಗಿ ದೀಪಕ್ ಜೀವ ಉಳಿದಿದೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ