Breaking News
Home / ರಾಜಕೀಯ / ಇಸ್ರೇಲ್ ದಾಳಿಗೆ 10 ಹಮಾಸ್ ಬಂಡುಕೋರ ನಾಯಕರ ಸಾವು

ಇಸ್ರೇಲ್ ದಾಳಿಗೆ 10 ಹಮಾಸ್ ಬಂಡುಕೋರ ನಾಯಕರ ಸಾವು

Spread the love

ಗಾಜಾ: ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಜಾ ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ನ 10ರಷ್ಟು ಬಂಡುಕೋರ ನಾಯಕರನ್ನು ಹೊಡೆದುರುಳಿಸಲಾಗಿದ್ದು, ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಪಾಲೆಸ್ಟೈನ್‌ನ ಹಮಾಸ್ ಬಂಡುಕೋರರು, ಇಸ್ರೇಲ್ ಮೇಲೆ 1,000ಕ್ಕೂ ಹೆಚ್ಚು ರಾಕೆಟ್ ದಾಳಿಯನ್ನು ನಡೆಸಿದೆ.

2014ರಲ್ಲಿ ಇಸ್ರೇಲ್ ಹಾಗೂ ಪಾಲೆಸ್ಟೈನ್ ನಡುವೆ ನಡೆದ ಯುದ್ಧವು 50 ದಿನಗಳ ಕಾಲ ಮುಂದುವರಿದಿತ್ತು. ಈಗ ಹಿಂದಿನಗಿಂತಲೂ ಭೀಕರ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಕಾಡುತ್ತಿದೆ.

 

ಮೂರು ದಿನಗಳಲ್ಲೇ 16 ಮಕ್ಕಳು, ಐದು ಮಹಿಳೆಯರು ಸೇರಿದಂತೆ ಪ್ಯಾಲೆಸ್ಟೈನ್‌ನ 65 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಏಳು ಉಗ್ರರ ಸಾವನ್ನು ಇಸ್ಲಾಮಿಕ್ ಜಿಹಾದ್ ಖಚಿತಪಡಿಸಿದೆ. ಉನ್ನತ ಕಮಾಂಡರ್ ಸೇರಿದಂತೆ ಅನೇಕ ಸದಸ್ಯರು ಸಾವಿಗೀಡಾಗಿರುವುದಾಗಿ ಹಮಾಸ್ ಒಪ್ಪಿಕೊಂಡಿದೆ.

ಇಸ್ರೇಲ್‌ನಲ್ಲಿ ಬುಧವಾರ ನಾಲ್ಕು ಮಂದಿ ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಆರು ವರ್ಷದ ಬಾಲಕನೂ ರಾಕೆಟ್ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ.

ಹಮಾಸ್ ಹೇಳಿದಕ್ಕಿಂತಲೂ ಹೆಚ್ಚು ಉಗ್ರರು ಅಲ್ಲಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ.

ವಿಶ್ವಸಂಸ್ಥೆ ಹಾಗೂ ಈಜಿಪ್ಟ್ ಅಧಿಕಾರಿಗಳು ಶಾಂತಿ ಕಾಪಾಡುವ ಪ್ರಯತ್ನ ನಡೆಸಿದ್ದರೂ ಸಂಘರ್ಷ ಪ್ರದೇಶದಲ್ಲಿ ಅಂತಹ ಯಾವುದೇ ಲಕ್ಷ್ಮಣಗಳು ಕಂಡುಬಂದಿಲ್ಲ.

ಪ್ರಸ್ತುತ ಹಿಂಸಾಚಾರದ ಕಿಡಿ ಒಂದು ತಿಂಗಳ ಹಿಂದೆ ಜೆರುಸಲೇಂನಲ್ಲಿ ಹೊತ್ತಿಕೊಂಡಿತ್ತು. ಮುಸ್ಲಿಂ ಪವಿತ್ರ ರಂಜಾನ್ ತಿಂಗಳಲ್ಲಿ ರಂಜಾನ್ ವೇಳೆ ಅಲ್ಲಿ ನೆಲೆಸಿರುವ ಯಹೂದಿಗಳು ಪಾಲೆಸ್ಟೈನ್ ಜನರನ್ನು ಹೊರಹಾಕುವ ಬೆದರಿಕೆ ಹಾಕಿದರು. ಪರಿಣಾಮ ಪೊಲೀಸರ ಜೊತೆಗೆ ಘರ್ಷಣೆ ಉಂಟಾಗಿತ್ತು.

ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು, ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಈಗ ಭಾರಿ ಹಿಂಸಾಚಾರಕ್ಕೆ ತಿರುಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ