Breaking News
Home / ಜಿಲ್ಲೆ / ಬೆಂಗಳೂರು / ಮಾಧ್ಯಮಗಳ ಮೇಲೆ ನಿರ್ಭಂಧ ಸಾದ್ಯವಿಲ್ಲ ಎಂದ ಕೋರ್ಟ್‌

ಮಾಧ್ಯಮಗಳ ಮೇಲೆ ನಿರ್ಭಂಧ ಸಾದ್ಯವಿಲ್ಲ ಎಂದ ಕೋರ್ಟ್‌

Spread the love

ಬೆಂಗಳೂರು: ಕರೊನಾದ ಭೀಕರತೆಯ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿರುವುದರಿಂದ ಟಿ.ವಿ ಚಾನೆಲ್‌ಗಳನ್ನೇ ದೂಷಿಸಿ ದಿನನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುವುದು ಹೊಸತೇನಲ್ಲ. ಯಾವುದೇ ವಿಷಯಗಳನ್ನು ಮಾಧ್ಯಮಗಳು ವರದಿ ಮಾಡಿದಾಗಲೂ ಇಂಥ ಟೀಕೆಗಳು ಬರುತ್ತವೆ.ಕರೊನಾದ ಕರಾಳ ಮುಖವನ್ನು ಬಿಚ್ಚಿಡುವ ಚಾನೆಲ್‌ಗಳನ್ನು ಎಡಬಿಡದೇ ನೋಡುತ್ತಾ ಅದರ ವಿರುದ್ಧ ದೂಷಿಸುವವರೇ ಹೆಚ್ಚಾಗಿ ಈ ರೀತಿಯ ಕಮೆಂಟ್‌ಗಳನ್ನು ಮಾಡುವುದು ತಿಳಿದ ವಿಷಯವೇ. ಹೀಗೆ ಮಾಧ್ಯಮಗಳನ್ನು ದೂಷಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಈ ರೀತಿಯ ಸುದ್ದಿ ಬಿತ್ತರಿಸುವ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅದರಲ್ಲಿ ಕೋರಲಾಗಿತ್ತು.

ಕರೊನಾದಿಂದಾಗಿ ಜನರು ಸಾಯುತ್ತಿರುವ ದೃಶ್ಯಗಳಿಗೆ ನಿರ್ಬಂಧ ವಿಧಿಸಿ, ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ಕೋವಿಡ್‌ನಿಂದ ನರಳುವ ಸಾವಿನ ದೃಶ್ಯ ಪ್ರಸಾರವಾಗುತ್ತಿದ್ದು, ಇದರಿಂದ ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವ್ಯಕ್ತಿಯೊಬ್ಬರು ಕೋರಿದ್ದರು.ಈ ದೃಶ್ಯಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿವೆ. ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸುತ್ತಿದೆ ಎಂದಿದ್ದ ಅರ್ಜಿದಾರರು, ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದರು.

ಇದರ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಎಸ್ ಓಕ್ ನೇತೃತ್ವದ ಪೀಠ ಅಭಿಪ್ರಾಯವು, ರಿಮೋಟ್‌ ನಿಮ್ಮ ಕೈಯಲ್ಲಿಯೇ ಇರುವಾಗ ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆಯಲ್ಲವೆ? ಸಾವಿನ ಸುದ್ದಿ ಇಲ್ಲದ ನಿಮಗೆ ಉತ್ತಮ ಎನಿಸಿರುವ ಚಾನೆಲ್‌ ನೋಡುವ ಅವಕಾಶವೂ ಇದೆಯಲ್ಲವೆ? ಹಾಗಿದ್ದ ಮೇಲೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸುವ ಚಾನೆಲ್‌ಗಳನ್ನೇ ನೋಡುವುದು ಸರಿಯಲ್ಲವಲ್ಲ ಎಂದು ಅಭಿಪ್ರಾಯ ಪಟ್ಟಿತು. ಜತೆಗೆ, ಮಾಧ್ಯಮಗಳ ವಿರುದ್ಧ ಹೀಗಿದ್ದ ಮೇಲೂ ಕ್ರಮ ತೆಗೆದುಕೊಳ್ಳಲು ಇಷ್ಟಪಟ್ಟರೆ ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಸೂಚಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ