Breaking News
Home / Uncategorized / ಇಂದಿರಾ ಕ್ಯಾಂಟೀನ್’ನಲ್ಲಿ ‘ಉಚಿತ ಊಟ’ ಕೊಡ್ತಾರೆ ಅಂತ ಹೋದವರಿಗೆ ಕಾದಿತ್ತು ಶಾಕ್ : ‘ಕಟ್ಟಿಕೊಟ್ಟ ಪೊಟ್ಟಣ’ದಲ್ಲಿ ಇದ್ದ ಊಟ ಎಷ್ಟು ಗೊತ್ತಾ.?

ಇಂದಿರಾ ಕ್ಯಾಂಟೀನ್’ನಲ್ಲಿ ‘ಉಚಿತ ಊಟ’ ಕೊಡ್ತಾರೆ ಅಂತ ಹೋದವರಿಗೆ ಕಾದಿತ್ತು ಶಾಕ್ : ‘ಕಟ್ಟಿಕೊಟ್ಟ ಪೊಟ್ಟಣ’ದಲ್ಲಿ ಇದ್ದ ಊಟ ಎಷ್ಟು ಗೊತ್ತಾ.?

Spread the love

ಬೆಂಗಳೂರು : ಇಂದಿನಿಂದ ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಮೂರು ಹೊತ್ತು ಉಚಿತ ಊಟದ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ. ಬೆಳಿಗ್ಗೆ ತಿಂಡಿಗಾಗಿ ಇಂದಿರಾ ಕ್ಯಾಂಟೀನ್ ಮುಂದೆ ನೂರಾರು ಜನರು ಕ್ಯೂ ಕೂಡ ನಿಂತು ಇಂದಿರಾ ಕ್ಯಾಂಟೀನ್ ನೀಡುವಂತ ಆಹಾರದ ಪೊಟ್ಟಣವನ್ನು ಪಡೆದು, ಖುಷಿಯಿಂದ ತೆರಳಿ, ಓಪನ್ ಮಾಡಿದ ಅನೇಕರಿಗೆ, ಶಾಕ್ ಕಾದಿತ್ತು. ಅದೇನ್ ಅಂತ ಮುಂದೆ ಓದಿ..

ನಗರದಾಧ್ಯಂತ ಇಂದಿನಿಂದ ಹೈಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ, ಇಂದಿರಾ ಕ್ಯಾಂಟೀನ್ ಮೂಲಕ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಇತರೆ ವರ್ಗದವರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದೆ. ಪೊಟ್ಟಣಗಳ ಮೂಲಕ ಹಸಿದವರಿಗೆ ಅನ್ನ ನೀಡುವಂತ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದ ಉಪಹಾರ ಶುರುವಾಗಿದ್ದು, ಮಧ್ಯಾಹ್ನದ ಊಟಕ್ಕೂ ಈಗ ಸಮಯ ಹತ್ತಿರವಾಗಿದೆ. ಆದ್ರೇ.. ಬೆಳಿಗ್ಗೆ ಉಪಹಾರಕ್ಕೆ ತೆರಳಿದ್ದವರಿಗೆ, ಮಧ್ಯಾಹ್ನದ ಊಟಕ್ಕೆ ಹೋಗೆ ಮನಸ್ಸು ಕೂಡ ಮಾಡಿರಬಹುದು. ಆದ್ರೇ.. ನಗರದ ಅನೇಕ ಕಡೆಯಲ್ಲಿ ನೀಡಿದ ಉಪಹಾರದ ಪೊಟ್ಟಣಗಳ ಕ್ವಾಂಟಿಟಿಯಲ್ಲಿ ಕಡಿಮೆ ಆಗೋರೋದಾಗಿ ತಿಳಿದು ಬಂದಿದೆ.

ದಾಸರಹಳ್ಳಿಯ ಇಂದಿರಾ ಕ್ಯಾಂಟೀನ್ ನಲ್ಲಿ ಇಂದು ಬೆಳಿಗ್ಗೆ ನೀಡಿದಂತ ಉಪಹಾರ ಪೊಟ್ಟಣ ತೆಗೆದು, ತಿನ್ನೋದಕ್ಕೆ ಹೋಗಾದ.. ಪೌರ ಕಾರ್ಮಿಕರಿಗೇ ಶಾಕ್ ಆಗಿದೆಯಂತೆ. ಯಾಕೆಂದ್ರೇ.. ಇಂದಿರಾ ಕ್ಯಾಂಟೀನ್ ಮೂಲಕ ನೀಡಿದ್ದಂತ ಉಚಿತ ಆಹಾರದ ಪೊಟ್ಟಣದಲ್ಲಿ ಇದ್ದದ್ದು ಮಾತ್ರ ಜಸ್ಟ್ ಎರಡೇ ಎರಡು ತುತ್ತು ಉಪಹಾರ ಎಂಬುದಾಗಿ ತಿಳಿದು ಬಂದಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಇಂದು ಕೊಟ್ಟಂತ ತಿಂಡಿ ಎರಡೇ ಎರಡು ತುತ್ತು ಆಗಿತ್ತು ಎಂಬುದಾಗಿ ಅನೇಕ ಪೌರ ಕಾರ್ಮಿಕರು ಕಿಡಿ ಕಾರಿದ್ದಾರೆ.

ಅಲ್ಲಾ ಸ್ವಾಮಿ.. ಹೈಕೋರ್ಟ್ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಆಹಾರ ಭದ್ರತೆ ಒದಗಿಸಿ ಅಂತ ಹೇಳಿದ್ದಕ್ಕೆ.. ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ಒದಗಿಸೋದಾಗಿ ಘೋಷಣೆ ಮಾಡಿ ಇಂದಿನಿಂದ ಬೆಂಗಳೂರಿನಲ್ಲಿ ಕೊಡ್ತಾ ಇದ್ದೀರಿ. ನೀವು ಕೊಡೋ ಆಹಾರ ಎರಡು ತುತ್ತಿಗೆ ಆಗ್ತಾ ಇದೆ. ಕ್ವಾಂಟಿಟಿಯೇ ಇಲ್ಲ. ಹಾಗಾದ್ರೇ.. ಆಹಾರ ಭದ್ರತೆಯ ಮಾತು, ಹೈಕೋರ್ಟ್ ನೀಡಿದ ಸೂಚನೆಗೆ ಬೆಲೆ ಎಲ್ಲಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡು ಸರಿಯಾದ ಪ್ರಮಾಣದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಆಹಾರ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.


Spread the love

About Laxminews 24x7

Check Also

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ಬೇಕಿದೆ: ನೇಹಾ ಹಿರೇಮಠ್ ತಂದೆ ಹೇಳಿಕೆ

Spread the love ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ತಿಂಗಳು ನೇಹಾ ಪಾಟೀಲ್ ಕೊಲೆ ಕೇಸ್ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ