Home / ರಾಜ್ಯ / ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೯.೫೩ ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ: ಅಮಿತ್ ಕೋರೆ

ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೯.೫೩ ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ: ಅಮಿತ್ ಕೋರೆ

Spread the love

ಮಾಂಜರಿ – ಸಹಕಾರಿ ರಂಗದಲ್ಲಿ ರಾಜ್ಯಾದ್ಯಂತ ಸುಮಾರು ೪೨ ಶಾಖೆಗಳ ಮುಖಾಂತರ, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಇವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ೯.೫೩ ಕೋಟಿ ರೂ. ನಿವ್ವಳ ಲಾಭಾಂಶ ಗಳಿಸಿದೆ ಎಂದು ಸಂಸ್ಥೆಯ ಆಮಂತ್ರಿತ ನಿರ್ದೆಶಕರಾದ ಹಾಗೂ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೆಶಕರಾದ ಅಮಿತ ಕೋರೆ ಸುದ್ದಿಗೋಷ್ಠಿಯಲ್ಲಿ ಇಂದು ಹೇಳಿದರು.

ಕೋವಿಡ್ -೧೯ ರ ವಿಷಮ ಪರಿಸ್ಥಿತಿಯಲ್ಲೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ೯.೫೩ ಕೋಟಿ ನಿವ್ವಳ ಲಾಭಗಳಸಿದೆ. ಸಹಕಾರಿಯು ೪೫,೩೫೨ ಸದಸ್ಯರನ್ನು ಹೊಂದಿದ್ದು ೨೫೦ ಕೋಟಿ ಮೀರಿ ಶೇರು ಬಂಡವಾಳ ಹಾಗೂ ೩೯ ಕೋಟಿ ರೂ ಕಾಯ್ದಿಟ್ಟ ನಿಧಿ ಹೊಂದಿದೆ, ಸದರಿ ವರ್ಷದಲ್ಲಿ ೧೦೭೦ ಕೋಟಿಗೂ ಮೀರಿ ರೇವು ಸಂಗ್ರಹವಾಗಿದೆ ಮತ್ತು ಸಹಕಾರಿಯು ಈ ವರಗೆ ೮೬೩ ಕೋಟಿ ರೂ ಮೀರಿ  ಸಾಲ ವಿತರಿಸಲಾಗಿದೆ, ಬ್ಯಾಂಕ್ ಹಾಗೂ ಇನ್ನಿತರ ಗುಂತಾವಣಿಗಳಲ್ಲಿ ೩೩೨ ಕೋಟಿಗಿಂತ ಅಧಿಕ ಗುಂತಾವಣೆ ಮಾಡಿದೆ ಹಾಗೂ ೧೧೧೨ ಕೋಟಿಗೂ ಮೀರಿ ದುಡಿಯುವ ಬಂಡವಾಳ ಹೊಂದಿದೆ ಎಂದು ಅವರು ತಿಳಿಸಿದರು.

ಅದೇ ರೀತಿ ಸಹಕಾರಿಯು ಇ-ಸ್ಟಾಂಪ್ ಬಾಂಡ್ ಮತ್ತು ಪ್ಯಾನ್ ಕಾರ್ಡ್ ವಿತರಣೆ, ಟಿಕೆಟ್ ಬುಕ್ಕಿಂಗ್, ಮೊಬೈಲ್ ರಿ-ಚಾರ್ಜ, ವಿದೇಶಿ ವಿನಿಮಯ ಹಣ, ಆರೋಗ್ಯ ವಿಮೆ, ಸಾಮಾನ್ಯ ವಿಮೆ, ಜೀವ ವಿಮೆ ಇತರ ಬ್ಯಾಂಕೇತರ ಚಟುವಟಿಕೆಗಳಲ್ಲಿ ೬೩೦ ಕೋಟಿಗೂ ಹೆಚ್ಚು ವ್ಯವಹಾರವಾಗಿದೆ ಮತ್ತು ಗ್ರಾಹಕರಿಗೆ ರೂ.೨೫.೦೦ ಲಕ್ಷ ವಿಮೆ ಪರಿಹಾರ ನೀಡಲಾಗಿದೆ. ಸಹಕಾರಿಯು ಸಾಮಾಜಿಕ ಚಟುವಟಿಕೆಗಳಲ್ಲಿ ಅಂದರೆ ಕೆ.ಎಲ್.ಇ. ಆಸ್ಪತ್ರೆಯಲ್ಲಿ ೧ ದಿನದ ರೋಗಿಗಳಿಗೆ ಉಚಿತ ಊಟ, ಕೊಡುಗು ಜಿಲ್ಲೆಯ ಅತಿ ವೃಷ್ಟಿಯಿಂದಾದ ಹಾನಿ ಸರಿಪಡಿಸಲು ಹಾಗೂ ಕೋವಿಡ್-೧೯ ರಿಂದ ರಕ್ಷಿಸಲು ಧನ ಸಹಾಯ ಮಾಡಿ ಮಾನವಿಯತೆಯನ್ನು ಮೆರೆದಿದೆ.

ಸಹಕಾರಿಯು ಅತಿ ಕಡಿಮೆ ಬಡ್ಡಿ ದರದಲ್ಲಿ ಬಂಗಾರ ಸಾಲ, ಮತ್ತು ರೈತರ ಸಲುವಾಗಿ ಯಾತ ನೀರಾವರಿ ಸಾಲ ನೀಡಿದೆ. ಸಹಕಾರಿಯ ೪೨ ಶಾಖೆಗಳು ಅತ್ಯಂತ ಪ್ರಗತಿಯಲ್ಲಿದ್ದು ಮತ್ತು ಚಿದಾನಂದ ಕೋರೆ ನಗರ ಅಂಕಲಿ-೨, ಖಾನಾಪುರ, ಕಿತ್ತೂರ, ಕೊಣ್ಣೂರು, ಕಬ್ಬೂರ, ಶಿವಮೊಗ್ಗ, ವಿಜಯಪುರ, ಹುಬ್ಬಳ್ಳಿ, ಸವದತ್ತಿ, ಹುಕ್ಕೇರಿ ಹಾಗೂ ದರೂರದಲ್ಲಿ ಅತಿ ಶೀಘ್ರದಲ್ಲಿ ಕಾರ್ಯಾರಂಭವಾಗದೆ, ಹಾಗೆಯೆ ಮುಂಬರುವ ವರ್ಷದಲ್ಲಿ ಬೆಳಗಾವಿಯ ಶ್ರೀನಗರ, ಖಾನಾಪೂರ ತಾಲೂಕಿನ ಬೀಡಿ ಗ್ರಾಮ, ರಾಯಬಾಗ ಪಟ್ಟಣ, ರಾಯಬಾಗ ತಾಲೂಕಿನ ಪರಮಾನಂದವಾಡಿ, ಅಥಣಿ ತಾಲೂಕಿನ ಉಗಾರ ಬಿಕೆ., ಬೈಲಹೊಂಗಲ ತಾಲೂಕಿನ ನೆಗಿನಹಾಳ, ನಿಪ್ಪಾಣಿ ತಾಲೂಕಿನ ಮಾಂಗೂರ, ಚಿತ್ರದುರ್ಗ, ತುಮಕೂರ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಸಹಕಾರಿಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಮ್ಮ ಸಹಕಾರಿಯ ಸಂಸ್ಥಾಪಕರು ಮತ್ತು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ  ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನ ಮತ್ತು ಎಲ್ಲ ಸದಸ್ಯ ಭಾಂದವರ ಸಹಕಾರ ವಿಶ್ವಾಸ ಕಾರಣವೆಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ