Breaking News
Home / Uncategorized / ರಾಯಚೂರು: ಮೂಗಿಗೆ ನಿಂಬೆ ರಸ ಹಾಕಿಕೊಂಡ ಶಿಕ್ಷಕರೊಬ್ಬರು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಎಂದು ಗುರುತಿಸಲಾಗಿದೆ. ಆರೋಗ್ಯದಿಂದ ಇದ್ದ ಶಿಕ್ಷಕರು ಮೂಗಿಗೆ ನಿಂಬೆ ರಸ ಹಾಕಿಕೊಂಡು ಪರೀಕ್ಷಿಸಲು ಹೋಗಿದ್ದಾರೆ. ಇದರಿಂದ ಆರೋಗ್ಯ ಸಮಸ್ಯೆಯುಂಟಾಗಿ ಬಸವರಾಜ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಮೂಗಿಗೆ ನಿಂಬೆ ರಸ ಹಾಕಿಕೊಳ್ಳುವುದು ಅಪಾಯಕಾರಿ. ನಿಂಬೆ ರಸ ತೀಕ್ಷ್ಣವಾಗಿರುವುದರಿಂದ ಮೂಗಿನ ಸೂಕ್ಷ್ಮ ಪದರ ಸುಟ್ಟು ಇನ್ ಫೆಕ್ಷನ್ ಆಗಿ ಪ್ರಾಣಾಪಾಯವಾಗುವ ಸಂದರ್ಭವೂ ಇದೆ ಎಂಬುದು ಹಲವರ ಮಾತು. ಒಟ್ಟಾರೆ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

ರಾಯಚೂರು: ಮೂಗಿಗೆ ನಿಂಬೆ ರಸ ಹಾಕಿಕೊಂಡ ಶಿಕ್ಷಕರೊಬ್ಬರು ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಎಂದು ಗುರುತಿಸಲಾಗಿದೆ. ಆರೋಗ್ಯದಿಂದ ಇದ್ದ ಶಿಕ್ಷಕರು ಮೂಗಿಗೆ ನಿಂಬೆ ರಸ ಹಾಕಿಕೊಂಡು ಪರೀಕ್ಷಿಸಲು ಹೋಗಿದ್ದಾರೆ. ಇದರಿಂದ ಆರೋಗ್ಯ ಸಮಸ್ಯೆಯುಂಟಾಗಿ ಬಸವರಾಜ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಮೂಗಿಗೆ ನಿಂಬೆ ರಸ ಹಾಕಿಕೊಳ್ಳುವುದು ಅಪಾಯಕಾರಿ. ನಿಂಬೆ ರಸ ತೀಕ್ಷ್ಣವಾಗಿರುವುದರಿಂದ ಮೂಗಿನ ಸೂಕ್ಷ್ಮ ಪದರ ಸುಟ್ಟು ಇನ್ ಫೆಕ್ಷನ್ ಆಗಿ ಪ್ರಾಣಾಪಾಯವಾಗುವ ಸಂದರ್ಭವೂ ಇದೆ ಎಂಬುದು ಹಲವರ ಮಾತು. ಒಟ್ಟಾರೆ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

Spread the love

ಬೆಂಗಳೂರು: ರೈತನ ಜೊತೆಗೆ ಬಾಯಿಗೆ ಬಂದಂತೆ ಮಾತನಾಡಿ ಟೀಕೆಗೆ ಗುರಿಯಾಗಿದ್ದ ಉಮೇಶ್ ಕತ್ತಿ ಈಗ ಕ್ಷಮೆಯಾಚಿಸಿದ್ದಾರೆ.

ರೈತನ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ವಿಚಾರ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಲಾಸ್ ತೆಗೆದುಕೊಂಡ ಬಳಿಕ ಇದೀಗ ಉಮೇಶ್ ಕತ್ತಿ ಅವರು ಹೇಳಿಕೆ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ.

ಆಡಿಯೋ ವೈರಲ್ ಆಗುತ್ತಿದ್ದಂತೆ ಉಮೇಶ್ ಕತ್ತಿ ವಿರುದ್ಧ ಸಿಎಂ ಯಡಿಯೂರಪ್ಪ ಅಸಮಾಧಾನ ಹೊರಹಾಕಿದರು. ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು, ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.

ಬಳಿಕ ಎಚ್ಚೆತ್ತುಕೊಂಡ ಉಮೇಶ್ ಕತ್ತಿ ಇದೀಗ ತನ್ನ ಹೇಳಿಕೆ ಕುರಿತಾಗಿ ಕ್ಷೆಮೆಯಾಚಿಸಿದ್ದಾರೆ. ಈ ಮೂಲಕ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನ ಪಟ್ಟಿದ್ದಾರೆ.

ಆಗಿದ್ದೇನು..?
ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ.

ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್‍ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದರು.


Spread the love

About Laxminews 24x7

Check Also

ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Spread the loveಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ