Breaking News
Home / ಕೊರೊನಾವೈರಸ್ / ಸತತ ನಾಲ್ಕನೇಯ ದಿನ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

ಸತತ ನಾಲ್ಕನೇಯ ದಿನ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು

Spread the love

ಬೆಂಗಳೂರು: ಸತತ ನಾಲ್ಕನೇಯ ದಿನ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಬಂದಿದ್ದು, ಇದೇ ರೀತಿಯ ಸಂಖ್ಯೆ ಬಂದರೆ ಸೋಮವಾರ ರಾಜ್ಯ ಸೋಂಕಿತರ ಸಂಖ್ಯೆಯಲ್ಲಿ 1 ಲಕ್ಷದ ಗಡಿಯನ್ನು ದಾಟಲಿದೆ.

ಇಂದು ಒಟ್ಟು 5,199 ಮಂದಿಗೆ ಸೋಂಕು ಬಂದಿದ್ದು, 82 ಮಂದಿ ಮೃತಪಟ್ಟಿದ್ದಾರೆ. 2,088 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 96,141 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 1,878 ಮಂದಿ ಮೃತಪಟ್ಟಿದ್ದಾರೆ.

96 ಸಾವಿರ ಸೋಂಕಿತರ ಪೈಕಿ 58,417 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 35,838 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 632 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇಂದು 12,531 ರ‍್ಯಾಪಿಡ್ ‌ ಟೆಸ್ಟ್‌, 21,034 ಆರ್‌ಟಿ ಪಿಸಿಆರ್‌ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು 33,565 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 61,560 ಮಂದಿಗೆ ರ‍್ಯಾಪಿಡ್  ಟೆಸ್ಟ್‌, 11,15,267 ಮಂದಿಗೆ ಆರ್‌ಟಿ ಪಿಸಿಆರ್‌ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 11,76,827 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

 


Spread the love

About Laxminews 24x7

Check Also

ಪುಣೆಯಿಂದ ಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರದವರೆಗೆ ಕೊವಿಶೀಲ್ಡ್ ಲಸಿಕೆ ತಲುಪಿದ್ದು ಹೇಗೆ

Spread the love  ಬೆಂಗಳೂರು : ದೇಶಾದ್ಯಂತ ಕೊವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್.12ರಂದೇ ಸೆರಮ್ ಇನ್ಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ