Breaking News
Home / ರಾಜಕೀಯ / 24ಕ್ಕೂ ಹೆಚ್ಚು IAS ಅಧಿಕಾರಿಗಳಿಗೆ ಕೊರೊನಾ ಸೋಂಕು; ಆಡಳಿತದ ಮೇಲೆ ಎಫೆಕ್ಟ್

24ಕ್ಕೂ ಹೆಚ್ಚು IAS ಅಧಿಕಾರಿಗಳಿಗೆ ಕೊರೊನಾ ಸೋಂಕು; ಆಡಳಿತದ ಮೇಲೆ ಎಫೆಕ್ಟ್

Spread the love

ನವದೆಹಲಿ: ಕೊರೊನಾ ವೈರಸ್​ ದೇಶದ ಸಿವಿಲ್ ಸರ್ವೀಸ್ ಅಧಿಕಾರಿಗಳ ಮೇಲೆ ಸವಾರಿ ಮಾಡ್ತಿದೆ. ಆತಂಕಕಾರಿ ವಿಚಾರ ಏನಂದ್ರೆ ಕೇಂದ್ರ ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಪ್ರಮುಖ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2 ಡಜನ್​​ಗೂ ಹೆಚ್ಚು ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ ಅಂತಾ ವರದಿಯಾಗಿದೆ. ಇದರಿಂದಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಾಗೂ ಸುಭದ್ರ ಆಡಳಿತಕ್ಕೆ ದೊಡ್ಡ ಮಟ್ಟದಲ್ಲಿಯೇ ಹೊಡೆತ ಬೀಳುತ್ತಿದೆ.

ಕಳೆದ 15 ದಿನಗಳಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಅಧಿಕಾರಿ ವರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಳ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ಹೆಚ್ಚುವರಿ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳಿಗೆ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಬಹುತೇಕರ ವರದಿ ಪಾಸಿಟಿವ್ ಬಂದಿದೆ.

ವರದಿಗಳ ಪ್ರಕಾರ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಕಾರ್ಯದರ್ಶಿ ಗುರುಪ್ರಸಾದ್ ಮಹಾಪಾತ್ರ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯಂ, ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ಅನಿಲ್ ಕುಮಾರ್, ಯೂತ್ ಅಫೇರ್ಸ್​ ಸೆಕ್ರೆಟರಿ ಉಷಾ ಶರ್ಮಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಭಾರತ್ ಲಾಲ್, ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಾಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ.

ಅಲ್ಲದೇ ಮಾಹಿತಿ ಮತ್ತು ಸಂವನ (ಐಇಸಿ) ವಿಭಾಗವನ್ನ ನೋಡಿಕೊಳ್ತಿದ್ದ ಜಂಟಿ ಕಾರ್ಯದರ್ಶಿ ಪದ್ಮಜಾ ಸಿಂಗ್ ಅವರ ಕೊರೊನಾ ವರದಿಯೂ ಪಾಸಿಟಿವ್ ಬಂದಿದೆ. ಅಲ್ಲದೇ ಅವರ ವಿಭಾಗದಲ್ಲಿ ಸುಮಾರು ಅರ್ಧ ಡಜನ್​​ಗೂ ಹೆಚ್ಚು ಅಧಿಕಾರಿಗಳಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಅಡೊಲೆಸೆಂಟ್ ಹೆಲ್ತ್​ ಅಸಿಸ್ಟೆಂಟ್ ಕಮಿಷನರ್ ಡಾ.ಜೊಯಾ ಅಲಿ ರಿಜ್ವಿ, ಡೈರೆಕ್ಟರ್ ವಿದುಶಿ ಚತುರ್ವೇದಿ, ರಾಜ್ಯ ಖಾತೆ ಸಚಿವ ಅಶ್ವಿನ್ ಚೌಬೆ ಕಚೇರಿಯಲ್ಲಿ ಸುಮಾರು ಒಂದು ಡಜನ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೋವಿಡ್ ಪೀಡಿತ ರಾಜ್ಯಗಳಿಗೆ ಕೇಂದ್ರದ ತಂಡಗಳ ಭಾಗವಾಗಿರುವ ತಂಬಾಕು ವಿಭಾಗದ ನಿರ್ದೇಶಕ ಡಾ.ಎಲ್.ಸ್ವಸ್ತಿ ಚರಣ್ ಅವರು ಕೂಡ ಸೋಂಕಿಗೀಡಾಗಿದ್ದಾರೆ ಅಂತಾ ವರದಿಯಾಗಿದೆ.

ಅಲ್ಲದೇ ಸರಿಸುಮಾರು 100 ರಿಂದ 150ಕ್ಕೂ ಹೆಚ್ಚು ಹಿರಿಯ ಐಎಎಸ್​ ಅಧಿಕಾರಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆಡಳಿತದ ನೊಗ ಹೊತ್ತಿರುವ ಅಧಿಕಾರಿಗಳ ಮೇಲೆ ಕೊರೊನಾ ಸವಾರಿ ಮಾಡ್ತಿರೋದು ಆತಂಕಕಾರಿಯಾಗಿದೆ.


Spread the love

About Laxminews 24x7

Check Also

ವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ

Spread the loveವಿಡಿಯೋ ವಿವಾದಕ್ಕೆ ಡಿ.ಕೆ.ಶಿವಕುಮಾರ್ ಕಾರಣ: ಕುಮಾರಸ್ವಾಮಿ ಆರೋಪ ನವದೆಹಲಿ: ಪ್ರಜ್ವಲ್ ರೇವಣ್ಣ ಅವರ ಸೆಕ್ಸ್ ಟೇಪ್ ವಿವಾದದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ