Breaking News
Home / ಜಿಲ್ಲೆ / ಬೆಂಗಳೂರು / ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು

Spread the love

ಬೆಂಗಳೂರು: ಮುಷ್ಕರ ನಿರತ ಬಿಎಂಟಿಸಿ ನೌಕರರಿಗೆ ಸರಕಾರ ಭಾರೀ ಪೆಟ್ಟು ನೀಡಿದ್ದು, ಶನಿವಾರ ಒಂದೇ ದಿನ 2,443 ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇಷ್ಟು ನೌಕರರನ್ನು ಅಮಾನತು ಮಾಡಿರುವುದು ಇದೇ ಮೊದಲು.

ಮುಷ್ಕರ ನಿಷೇಧಿಸಿದ್ದರೂ ಅನಧಿಕೃತವಾಗಿ ಭಾಗವಹಿಸಿದ್ದು ಮತ್ತು ಇತರರನ್ನು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಎಲ್ಲ ಸಿಬಂದಿಯನ್ನು ಅಮಾನತು ಮಾಡಲಾಗಿದೆ.

ಸಾವಿರ ಮೀರಿದ ಸಂಖ್ಯೆ
ಇತರ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಇದುವರೆಗೆ 1 ಸಾವಿರಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲಾಗಿದೆ. ಇನ್ನಷ್ಟು ನೌಕರರ ವಜಾಕ್ಕೆ ನಿಗಮಗಳು ಸಿದ್ಧತೆ ನಡೆಸುತ್ತಿವೆ.

ಸುಧಾರಿಸದ ಗ್ರಾಮೀಣ ಸಾರಿಗೆ
ಇದೇ ವೇಳೆ, ರಸ್ತೆಗೆ ಇಳಿದಿರುವ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದರೂ ಗ್ರಾಮೀಣ ಭಾಗದಲ್ಲಿ ಸಮರ್ಪಕ ಸೇವೆ ಸಿಗುತ್ತಿಲ್ಲ. ಗ್ರಾಮೀಣ ಭಾಗಗಳಿಗೆ ಖಾಸಗಿ ಬಸ್‌ಗಳೂ ಹೋಗುತ್ತಿಲ್ಲ, ಕೆಎಸ್ಸಾರ್ಟಿಸಿ ಬಸ್‌ ಸೇವೆಯೂ ಇಲ್ಲ. ಖಾಸಗಿ ಬಸ್‌ಗಳು ನಗರ ಕೇಂದ್ರೀಕೃತವಾಗಿಯೇ ಓಡಾಡುತ್ತಿವೆ. ಇದರಿಂದ ಗ್ರಾಮೀಣ ಜನರಿಗೆ ತೊಂದರೆಯಾಗುತ್ತಿದೆ.

ಜೈಲ್‌ ಭರೋ ಚಳವಳಿ
ಈ ಮಧ್ಯೆ ನೌಕರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು , ಜೈಲ್‌ ಭರೋ ನಡೆಸಲು ಮುಂದಾಗಿದ್ದಾರೆ. ಬೇಡಿಕೆ ಈಡೇರಿಸಲು ಸೋಮವಾರದ ವರೆಗೆ ಸರಕಾರಕ್ಕೆ ಗಡುವು ನೀಡುತ್ತಿದ್ದೇವೆ. ಅನಂತರ ಒಂದು ಲಕ್ಷ ನೌಕರರು ಸೇರಿ ಜೈಲ್‌ ಭರೋ ಮಾಡಲಿದ್ದೇವೆ ಎಂದು ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ ನೀಡಿದ್ದಾರೆ.

ಮುಖಂಡರಲ್ಲಿ ಒಡಕು
ನೌಕರರ ಬಣಗಳ ಆಂತರಿಕ ಗುದ್ದಾಟಕ್ಕೆ ಮುಷ್ಕರ ವೇದಿಕೆಯಾಗಿದೆ. ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಆರ್‌. ಚಂದ್ರಶೇಖರ್‌ ಶನಿವಾರ ವೀಡಿಯೋದಲ್ಲಿ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್‌, ಸಾರಿಗೆ ನೌಕರರ ಮಹಾ ಮಂಡಳದ ಅಧ್ಯಕ್ಷ ಕೆ.ಎಸ್‌. ಶರ್ಮಾ ವಿರುದ್ಧ ಆರೋಪ ಮಾಡಿದ್ದಾರೆ. ಪ್ರತಿಯಾಗಿ ಶರ್ಮಾ ಬಣದ ಸದಸ್ಯರು ಚಂದ್ರಶೇಖರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ