Breaking News
Home / ರಾಜ್ಯ / ʼಹೆಲಿಪ್ಯಾಡ್‌ ನಮ್ಮ ಆಸ್ತಿ, ಮರ ಕಡಿಯಲು ಜನಾಭಿಪ್ರಾಯ ಸಂಗ್ರಹದ ಅಗತ್ಯ ಏನು?ʼ

ʼಹೆಲಿಪ್ಯಾಡ್‌ ನಮ್ಮ ಆಸ್ತಿ, ಮರ ಕಡಿಯಲು ಜನಾಭಿಪ್ರಾಯ ಸಂಗ್ರಹದ ಅಗತ್ಯ ಏನು?ʼ

Spread the love

ಮೈಸೂರು: ಹೆಲಿಟೂರಿಸಂಗಾಗಿ ಲಲಿತಮಹಲ್ ಬಳಿ ನೂರಾರು ಮರಗಳನ್ನು ಕಡಿಯುವ ಬಗ್ಗೆ ಸಾರ್ವಜನಿಕ ಅಹವಾಲು ಸಂಗ್ರಹಿಸಲು ಏ.೨೩ರಂದು ದಿನಾಂಕ ನಿಗದಿ ಮಾಡಿರುವ ಅರಣ್ಯಾಧಿಕಾರಿಗಳ ನಡೆಗೆ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಲಲಿತಮಹಲ್ ಪ್ಯಾಲೆಸ್ ಮುಂಭಾಗದ ಮೈದಾನದಲ್ಲಿ ಹೆಲಿ ಟೂರಿಸಂಗಾಗಿ ನೂರಾರು ಮರಗಳನ್ನು ಕಡಿಯಲು ಸಾರ್ವಜನಿಕ ಅಹವಾಲಿಗೆ ಆಹ್ವಾನಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಲಲಿತಮಹಲ್ ಸುತ್ತ-ಮುತ್ತ ಇರುವುದು ಸಾರ್ವಜನಿಕವಲ್ಲ ಖಾಸಗಿ ಒಡೆತನದ ಆಸ್ತಿ. ಈ ಜಾಗದಲ್ಲಿರುವ ಮರಗಳನ್ನು ಕಡಿಯುವುದಕ್ಕೆ ಸಾರ್ವಜನಿಕರ ಅಹವಾಲು ಆಹ್ವಾನಿಸಿರುವುದು ಕಾನೂನು ಬಾಹಿರ ಎಂದು ಅವರು ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ೨೦೨೦ರ ಜೂ.೧೯ರಂದು ನೀಡಿರುವ ನ್ಯಾಯಾಲಯದ ತೀರ್ಪಿನ ಅನ್ವಯ, ಕುರುಬಾರಹಳ್ಳಿ ಸರ್ವೇ ನಂ.೪, ಆಲನಹಳ್ಳಿ ಸರ್ವೇ ನಂ.೪೧ ಮತ್ತು ಚೋಡನಹಳ್ಳಿ ಸರ್ವೇ ನಂ.೪ಕ್ಕೆ ಸೇರಿದ ಆಸ್ತಿಯು ನಮಗೆ ಸೇರಿದೆ. ನಾವೇ ಅದರ ಮಾಲೀಕತ್ವ ಅನುಸರಿಸಬಹುದು ಅಥವಾ ಮಾರಾಟ ಮಾಡಿಕೊಳ್ಳಬಹುದೂ ಎಂದೂ ಹೇಳಿದೆ. ೧೯೫೩ರ ಒಪ್ಪಂದದ ಪ್ರಕಾರ ೧೫೦೦ ಎಕರೆ ಜಮೀನು ನಮ್ಮದು. ಆದರೆ ಆ ನಡುವೆ ಎಷ್ಟು ಪರಾಭಾರೆಯಾಗಿದೆ ಎಂಬುದನ್ನು ನೋಡಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಮಾಡಿ ನಮ್ಮ ಜಾಗ ನಿಗದಿಪಡಿಸಿಕೊಡಬೇಕು ಎಂದೂ ಮನವಿ ಮಾಡಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಅನ್ವಯ ಅಲ್ಲಿನ ಮರಗಳನ್ನು ಕಡಿಯುವ ಅನಧೀಕೃತ ನಿರ್ಧಾರವನ್ನು ಕೈಬಿಡಬೇಕು. ಸಾರ್ವಜನಿಕ ಅಹವಾಲಿನಲ್ಲೂ ಮರಗಳನ್ನು ಕಡಿಯುವುದಕ್ಕೆ ವಿರುದ್ಧ ನಿರ್ಧಾರವೇ ಬರಲಿದೆ. ಹಾಗಾಗಿ ಅನಧೀಕೃತ ಚಟುಚಟಿಕೆಗಳನ್ನು ಕಡೆಗಣಿಸಿ, ಮರಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ: ಹಾವು ಕಚ್ಚಿ ಬಾಲಕಿ ಸಾವು

Spread the love ಚಿಕ್ಕೋಡಿ: ತಾಲ್ಲೂಕಿನ ಕೇರೂರವಾಡಿಯಲ್ಲಿ ಶುಕ್ರವಾರ ರಾತ್ರಿ ಹಾವು ಕಚ್ಚಿ 4 ವರ್ಷದ ಬಾಲಕಿ ಶಿವಾನಿ ತುಳಸಿಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ