Breaking News
Home / ಜಿಲ್ಲೆ / ಯಾದಗಿರಿ / ವರುಣನ ಆರ್ಭಟಕ್ಕೆ ಹತ್ತಿ ಬೆಳೆ ನಾಶ

ವರುಣನ ಆರ್ಭಟಕ್ಕೆ ಹತ್ತಿ ಬೆಳೆ ನಾಶ

Spread the love

ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಮಲ್ಲಪ್ಪ ಕಲ್ಮನಿ 7ಎಕರೆ ಜಮೀನು ಮಳೆಯಿಂದ ಜಲಾವೃತಗೊಂಡಿದೆ

ವಡಗೇರಾ : ತಾಲೂಕಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಅತಿಹೆಚ್ಚು 73.ಮಿ.ಮೀ.ಪುಷ್ಯ ಮಳೆಯಾಗಿದ್ದು ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ ವಾಹನ ಸವಾರರ ಪರದಾಟ ಹೇಳತೀರದು ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರ ಬದುಕು ಅಕ್ಷರಶಃ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ಮುಂದುವರಿದಿದ್ದು ಇನ್ನೊಂದೆಡೆ ಮಳೆಯ ಅಬ್ಬರ ನಡುವೆ ಕತ್ತರಿಯಲ್ಲಿ
ಸಿಕ್ಕ ಅಡಿಕೆಯಂತಾಗಿದೆ ನಮ್ಮ ಬದುಕು ಹೇಗೊ ಸಾಲಶೂಲ ಮಾಡಿ ಹತ್ತಿ ಬೀಜ, ಗೊಬ್ಬರ, ಆಳಿನ ಕೂಲಿ ಸೇರಿ ಪ್ರತಿ ಎಕರೆ ಗೆ 15ಸಾವಿರ ಖರ್ಚಾಗಿದೆ


ತಾಲೂಕಿನ ಹಾಲಗೇರಾ ಗ್ರಾಮದ ಮಲ್ಲಪ್ಪ ಸಾಬಣ್ಣ ಕಲ್ಮನಿ ಗೆ ಸೇರಿದ ಸ.ನಂ.37 , 7ಎಕರೆ ,
ಎರಡು ದಿನಕ್ಕೊಮ್ಮೆ ಸುರಿಯುತ್ತಿರುವ ಮಳೆ ನೀರು ಹೊಲದಲ್ಲಿ ನಿಂತುಕೊಂಡಿರುವುದರಿಂದ ಹತ್ತಿ ಬೆಳೆ
ಬೇರು ಕೊಳೆತು ಹತ್ತಿ ಬೆಳೆ ಒಣಗುತ್ತಿದೆ. ನಾಲ್ಕು ಎಕರೆ ಬೆಳೆ ಈಗಾಗಲೇ ಸಂಪೂರ್ಣ ನಾಶವಾಗಿದ್ದು, ಉಳಿದ ಬೆಳೆಯೂ ಕೈಕೊಡುವ ಆತಂಕವಿದೆ. ಇದರಿಂದ ದಿಕ್ಕು ತೋಚದಾಗಿದೆ’


ತಾಲೂಕಿನ ಎಲ್ಲಾ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಹಾನಿಗೊಳಗಾದ ಪ್ರದೇಶಕ್ಕೆ ಬೇಟಿ ನೀಡಿ ಬೆಳೆ ಸಮೀಕ್ಷೆ ನಡಿಸಿ ಪರಿಹಾರ ನೀಡಬೇಕೆಂದು ನಮ್ಮ ಕ.ರ.ವೇ ವಡಗೇರಾ ತಾಲೂಕು ಅಧ್ಯಕ್ಷ ಮಲ್ಲು ಕಲ್ಮನಿ ಆಕ್ರೋಶ ವ್ಯಕ್ತಪಡಿಸಿದರು


Spread the love

About Laxminews 24x7

Check Also

ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ

Spread the loveಯಾದಗಿರಿ: ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ