Breaking News
Home / ರಾಜ್ಯ / ಸಿ.ಡಿ. ಪ್ರಕರಣ: ಕಾರು ಚಾಲಕನ ಸಮೇತ ಉದ್ಯಮಿ ನಾಪತ್ತೆ

ಸಿ.ಡಿ. ಪ್ರಕರಣ: ಕಾರು ಚಾಲಕನ ಸಮೇತ ಉದ್ಯಮಿ ನಾಪತ್ತೆ

Spread the love

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ. ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ತಮ್ಮ ಮನೆ ಮೇಲೆ ದಾಳಿ ಮಾಡುತ್ತಿದ್ದಂತೆ ಗ್ರಾನೈಟ್ ಉದ್ಯಮಿ ಶಿವಕುಮಾರ್ ಕಾರು ಚಾಲಕನ ಸಮೇತ ನಾಪತ್ತೆಯಾಗಿದ್ದಾರೆ.

ಸಿ.ಡಿ ಸೃಷ್ಟಿಸಿದ್ದ ಆರೋಪಿಗಳಿಗೆ ನೆರವು ನೀಡಿದ್ದ ಮಾಹಿತಿ ಮೇರೆಗೆ ಎಸ್‌ಐಟಿ ಅಧಿಕಾರಿಗಳು, ಜೆ.ಪಿ.ನಗರದಲ್ಲಿರುವ ಶಿವಕುಮಾರ್ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿದ್ದರು. ಕೆಲ ದಾಖಲೆಗಳನ್ನೂ ಜಪ್ತಿ ಮಾಡಿದ್ದರು. ಅದಾದ ಮರುದಿನದಿಂದಲೇ ಶಿವಕುಮಾರ್ ಹಾಗೂ ಅವರ ಕಾರು ಚಾಲಕ, ಬೆಂಗಳೂರು ತೊರೆದಿದ್ದಾರೆ ಎನ್ನಲಾಗಿದೆ.

‘ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೆಲವರು, ಸಿ.ಡಿ ಬಿಡುಗಡೆ ಮಾಡುವ ಸಂಬಂಧ ಶಿವಕುಮಾರ್ ಜೊತೆ ಮಾತನಾಡಿದ್ದರು. ನಂತರ, ಶಿವಕುಮಾರ್ ಅವರೇ ಆರೋಪಿಗಳಿಗೆ ಆರ್ಥಿಕ ನೆರವು ನೀಡಿದ್ದರು. ಜೊತೆಗೆ, ಚಾಲಕನ ಮೂಲಕವೂ ಕೆಲವರು ಹಣ ನೀಡಿರುವ ಮಾಹಿತಿ ಇದೆ’ ಎಂದು ಮೂಲಗಳು ಹೇಳಿವೆ.

‘ಲಭ್ಯವಿದ್ದ ಪುರಾವೆಗಳನ್ನು ಆಧರಿಸಿ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಶಿವಕುಮಾರ್ ಮನೆ ಮೇಲೆ ದಾಳಿ ಮಾಡಲಾಯಿತು. ದಾಳಿ ಬಗ್ಗೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕಿದ್ದು, ಈಗಾಗಲೇ ನೋಟಿಸ್ ಸಹ ನೀಡಲಾಗಿದೆ. ಆದರೆ, ಅವರು ನಾಪತ್ತೆಯಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರತ್ಯೇಕ ಜಾಗದಲ್ಲಿ ಚಾಲಕ: ‘ಶಿವಕುಮಾರ್ ಅವರ ಜೊತೆಯೇ ನಾಪತ್ತೆಯಾಗಿದ್ದ ಚಾಲಕ, ಪ್ರತ್ಯೇಕ ಜಾಗದಲ್ಲಿ ಉಳಿದುಕೊಂಡಿರುವ ಮಾಹಿತಿ ಇದೆ. ಇಬ್ಬರೂ ಬೇರೆ ಬೇರೆ ಕಡೆ ಉಳಿದುಕೊಂಡು ಪೊಲೀಸರ ದಿಕ್ಕು ತಪ್ಪಿಸಬಹುದೆಂದು ಭಾವಿಸಿದ್ದಾರೆ. ಆದರೆ, ನಮ್ಮ ವಿಶೇಷ ತಂಡ ಅವರ ಪತ್ತೆಯಲ್ಲಿ ನಿರತವಾಗಿದೆ’ ಎಂದೂ ಮೂಲಗಳು ಹೇಳಿವೆ.

‘ಸಿ.ಡಿ ಸೃಷ್ಟಿಸಿದ್ದಾರೆ ಎನ್ನಲಾದ ವ್ಯಕ್ತಿಗಳ ಜೊತೆ ಚಾಲಕ ಕೂಡ ಹೊರ ರಾಜ್ಯಗಳಲ್ಲಿ ಓಡಾಡುತ್ತಿರುವ ಅನುಮಾನವಿದೆ. ಆದರೆ, ಅವರು ಯಾರೊಬ್ಬರು ಎಟಿಎಂ, ಮೊಬೈಲ್ ಬಳಕೆ ಮಾಡುತ್ತಿಲ್ಲ. ಹೀಗಾಗಿ, ಸುಳಿವು ಸಿಗುತ್ತಿಲ್ಲ. ಹೊರ ರಾಜ್ಯಗಳ ಹೋಟೆಲ್ ಹಾಗೂ ರೇಸಾರ್ಟ್‌ಗಳಲ್ಲಿ ಶೋಧ ನಡೆಯುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಮತ್ತಷ್ಟು ಮಂದಿಗೆ ನೋಟಿಸ್‌: ಪ್ರಕರಣದಲ್ಲಿ ಕಲೆಹಾಕಿರುವ ಮಾಹಿತಿ ಆಧರಿಸಿ ಮತ್ತಷ್ಟು ಮಂದಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

‘ಯುವತಿ ಪರಿಚಯಸ್ಥರು, ಆರೋಪಿಗಳು ಎನ್ನಲಾದ ವ್ಯಕ್ತಿಗಳ ಜೊತೆ ಒಡನಾಟ ಹೊಂದಿದ್ದವರು, ಸಿ.ಡಿ. ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದವರು ಹಾಗೂ ಕಾರು ಚಾಲಕರು ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಸಿಕ್ಕ ಮಾಹಿತಿ ಪರಿಶೀಲಿಸಿ ತನಿಖೆ ಮುಂದುವರಿಸಲಾಗುವುದು’ ಎಂದು ಮೂಲಗಳು ಹೇಳಿವೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ