Breaking News
Home / Uncategorized / ಅಬಕಾರಿ ಇಲಾಖೆಯಲ್ಲಿ ಜೇಷ್ಠತೆ ಕಡೆಗಣಿಸಿ ಪ್ರಭಾರಿ ಹುದ್ದೆಗಳಿಗೆ ನೇಮಕ

ಅಬಕಾರಿ ಇಲಾಖೆಯಲ್ಲಿ ಜೇಷ್ಠತೆ ಕಡೆಗಣಿಸಿ ಪ್ರಭಾರಿ ಹುದ್ದೆಗಳಿಗೆ ನೇಮಕ

Spread the love

ಬೆಂಗಳೂರು, :- ಅಬಕಾರಿ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ-68ರನ್ವಯ ಜ್ಯೇಷ್ಠತೆಯಲ್ಲಿ ಹಿರಿಯರನ್ನು ಕಡೆಗಣಿಸಿ ಕಿರಿಯ ಅಬಕಾರಿ ಅಧೀಕ್ಷಕರಿಗೆ ಅಬಕಾರಿ ಉಪ ಆಯುಕ್ತರ ಹುದ್ದೆಗೆ ಹೆಚ್ಚುವರಿ ಪ್ರಭಾರಿ ಹುದ್ದೆಗಳನ್ನು ಈ ಹಿಂದೆ ನೀಡಲಾಗಿದೆ.

ಶಿವಮೊಗ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈಗಾಗಲೇ ಉಪ ಆಯುಕ್ತರು ಹಾಗೂ ಹಿರಿಯ ಅಧೀಕ್ಷಕರು ಇದ್ದರೂ ಕೂಡ ಅತ್ಯಂತ ಕಿರಿಯ ಅಬಕಾರಿ ಅಧೀಕ್ಷಕರಾಗಿದ್ದ ಮೋತಿಲಾಲ್ ಮತ್ತು ಅಜಿತ್‍ರನ್ನು ಈಗಾಗಲೇ ಹೆಚ್ಚುವರಿ ಪ್ರಭಾರಿಯಾಗಿ ಉಪ ಆಯುಕ್ತರನ್ನಾಗಿ ನೇಮಕ ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ತದನಂತರ ಎಚ್ಚೆತ್ತುಕೊಂಡ ಸಚಿವ ನಾಗೇಶ್ ಖಾಲಿ ಇದ್ದ ಅಬಕಾರಿ ಉಪ ಆಯುಕ್ತರ ಹುದ್ದೆಗೆ 8 ಜನ ಹಿರಿಯ ಅಧೀಕ್ಷಕರಿಗೆ ಹೆಚ್ಚುವರಿ ಪ್ರಭಾರಿಯಾಗಿ ಅಬಕಾರಿ ಉಪ ಆಯುಕ್ತರ ಸ್ಥಾನಕ್ಕೆ ಭರ್ತಿ ಮಾಡಲಾಗಿದೆ.

ಅದರಂತಯೇ ಪ್ರಸ್ತುತ ಜುಲೈ ಅಂತ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಅಬಕಾರಿ ಉಪ ಆಯುಕ್ತರ ಸ್ಥಾನ ನಿವೃತ್ತಿಯಿಂದ ಈ ಸ್ಥಾನ ಕೂಡ ಸದ್ಯ ಖಾಲಿ ಆಗಲಿದೆ.ಇದರಿಂದಾಗಿ ಈ ಬಾರಿಯಾದರೂ ಹಿರಿಯ ಅಧೀಕ್ಷಕರನ್ನು ಪರಿಗಣಿಸಿ ಅಬಕಾರಿ ಉಪ ಆಯುಕ್ತರ ಸ್ಥಾನಕ್ಕೆ ಪರಿಗಣಿಸಿ ಎಂದು ಇಲಾಖೆಯಲ್ಲಿರುವ ಹಿರಿಯ ಅಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಅಬಕಾರಿ ಇಲಾಖೆಯ ಸಚಿವರು ಹಾಗೂ ಅಬಕಾರಿ ಆಯುಕ್ತರಿಗೆ ಪತ್ರಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ