Breaking News
Home / ರಾಜ್ಯ / ದೆಹಲಿ ರೈತ ಸ್ಮಾರಕಕ್ಕೆ ಕರ್ನಾಟಕದ ಮಣ್ಣು!

ದೆಹಲಿ ರೈತ ಸ್ಮಾರಕಕ್ಕೆ ಕರ್ನಾಟಕದ ಮಣ್ಣು!

Spread the love

ಬಳ್ಳಾರಿ: ದೆಹಲಿಯ ಮೂರು ಗಡಿಗಳಲ್ಲಿ ಏಪ್ರಿಲ್‌ನಲ್ಲಿ ನಿರ್ಮಾಣವಾಗಲಿರುವ ರೈತ ಸ್ಮಾರಕಗಳಿಗೆ ಕರ್ನಾಟಕದ ರೈತ ಹೋರಾಟಗಳ ನೆನಪಿನ ಮಣ್ಣು ಕೂಡ ಸೇರ್ಪಡೆಯಾಗಲಿದೆ.

ರೈತರ ಮುಷ್ಕರವನ್ನು ಬೆಂಬಲಿಸಿ ಮಾ.5ರಿಂದ ಬಸವ ಕಲ್ಯಾಣದಿಂದ ಆರಂಭವಾಗಿರುವ ರೈತರ ಪಾದಯಾತ್ರೆಯು ಬಳ್ಳಾರಿಯಲ್ಲಿ 23ರಂದು ಸಮಾರೋಪಗೊಳ್ಳಲಿದ್ದು, ಮಾರ್ಗ ಮಧ್ಯದ 26 ಗ್ರಾಮಗಳ ಹೊಲಗಳಲ್ಲಿ ಮಣ್ಣನ್ನು ಸಂಗ್ರಹಿಸಲಾಗಿದೆ.

ರೈತ ಸಂಘ, ಚಾಗನೂರು-ಸಿರಿವಾರ ಭೂ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಲೇಖಕ ಸ.ರಘುನಾಥ ಪ್ರತಿ ಗ್ರಾಮದಿಂದಲೂ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ತಂದಿದ್ದಾರೆ. ಬಸವ ಕಲ್ಯಾಣ, ಮುಡುಬಿ, ಕಮಲಾಪುರ, ಕಲಬುರ್ಗಿ, ಶಹಬಾದ್, ಜೇವರ್ಗಿ, ಹನಮಂತವಾಡಿ, ಕಲಮನ ತಾಂಡ, ಕೆಲ್ಲೂರು, ಹುಲಿಕಲ್ಲು, ಬಿ.ಗುಡಿ, ಶಹಾಪುರ, ಸುರಪುರ, ದೇವಲಾಪುರ, ಸಂತೇಕಲ್ಲಹಳ್ಳಿ, ಮಸ್ಕಿ, ಲಿಂಗಸುಗೂರು, ತಿಂಥಿಣಿ, ಸಿಂಧನೂರು, ಸಿರುಗುಪ್ಪ, ಕಪ್ಪಗಲ್ಲು, ಸಿರಿವಾರ, ಚಾಗನೂರು ಗ್ರಾಮಗಳಲ್ಲಿ ಮಣ್ಣು ಸಂಗ್ರಹಿಸಲಾಗಿದೆ.

ಆ ಮಣ್ಣಿಗೆ ಪೂಜೆ ಸಲ್ಲಿಸುವ ಮೂಲಕವೇ ಸಮಾರೋಪ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಹೋರಾಟದ ನೇತೃತ್ವ ವಹಿಸಿರುವ ಮುಖಂಡರಲ್ಲಿ ಒಬ್ಬರಾದ ಬಿ.ಆರ್‌.ಪಾಟೀಲ ಅವರಿಗೆ ಈ ಮಣ್ಣನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತದೆ.

‘ನರಗುಂದ ರೈತ ಹೋರಾಟದ ನೆನಪಿಗಾಗಿ ಅಲ್ಲಿನ ಮಣ್ಣು ಹಾಗೂ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ನ ದುರಂತದ ನೆನಪಿಗಾಗಿ ಅಲ್ಲಿನ ಮಣ್ಣನ್ನು ಕೂಡ ದೆಹಲಿಯ ರೈತ ಸ್ಮಾರಕಗಳ ನಿರ್ಮಾಣಕ್ಕೆ ನೀಡಲಾಗುವುದು’ ಎಂದು ಬಿ.ಆರ್‌.ಪಾಟೀಲ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಏಪ್ರಿಲ್‌ 4ರಿಂದ 6ರವರೆಗೆ ಷಹಜಾನಪುರ, ಟಿಕ್ರಿ ಮತ್ತು ಸಿಂದ್‌ ಗಡಿಯಲ್ಲಿ ರೈತ ಸ್ಮಾರಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕರ್ನಾಟಕದ ಹೋರಾಟದ ಮಣ್ಣನ್ನು ಕೂಡ ಕೊಡುತ್ತಿದ್ದೇವೆ. ರೈತರ ಮುಷ್ಕರಕ್ಕೆ ನಮ್ಮ ಬೆಂಬಲದ ಸಂಕೇತ ಇದು ‘ ಎಂದು ಹೇಳಿದರು.

ಮಣ್ಣಿಗೆ ಪೂಜೆ

‘ಪಾದಯಾತ್ರೆಯಲ್ಲಿ ಸಂಗ್ರಹಿಸಿರುವ ಮಣ್ಣಿನ ಒಂದು ಹಿಡಿಯನ್ನು ನಾನು ಮನೆಗೆ ತೆಗೆದುಕೊಂಡು ಹೋಗುವೆ. ಇನ್ನು ಮುಂದೆ ಯಾರೇ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರೂ ಅವರಿಗೆ ವೇದಿಕೆಯಲ್ಲಿ ಮಣ್ಣನ್ನು ಪೂಜಿಸಲು ಕೇಳಿಕೊಳ್ಳುವೆ. ಅದು ಭೂಮಿಪೂಜೆಯ ಸಂಕೇತ. ಅದಕ್ಕೆ ಒಪ್ಪಿದರೆ ಮಾತ್ರ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನಿರ್ಧರಿಸಿರುವೆ’ ಎಂದು ಲೇಖಕ ಸ.ರಘುನಾಥ ತಿಳಿಸಿದರು.

ಪಾದಯಾತ್ರೆಯು ತಾಲ್ಲೂಕಿನ ಕಕ್ಕಬೇವಿನಹಳ್ಳಿ ತಲುಪಿದ್ದು, ಸಂಜೆ ಚಾಗನೂರಿನಲ್ಲಿ ಮುಖಂಡರು ತಂಗಲಿದ್ದಾರೆ. ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಮಾಧವರೆಡ್ಡಿ, ಎಂ.ಶ್ರೀಹರಿ, ರೈತ ಸಂಘದ ಅಧ್ಯಕ್ಷ ಡಿ.ಜಿ,ಹಳ್ಳಿ ನಾರಾಯಣಸ್ವಾಮಿ, ಬಸವರಾಜಸ್ವಾಮಿ ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ